ಬೆಳಕ್ಕನ್ನು ವಿದ್ಯುತ್ಕಾಂತೀಯ ತರಂಗಗಳೆಂದು ಗುರುತಿಸಲಾಗಿದೆ.ವಿದ್ಯುತ್ಕಾಂತೀಯ ರೋಹಿತದಲ್ಲಿ ದೃಗ್ಗೋಚರ ಬೆಳಕು ಕಿರಿದಾದ ಭಾಗ.ದೃಗ್ಗೋಚರ ಬೆಳಕಿನ ತರಂಗ ದೂರ ೪೦೦ ಆಂಗ್ಸ್ಟ್ರಾಂಮ್ನಿಂದ ೭೦೦೦ ಆಂಗ್ಸ್ಟ್ರಾಂಮ್ವರೆಗೆ ವ್ಯಾಪಿಸಿದೆ. ಬೆಳಕಿನ ಬಣ್ಣ ಆಯಾ ಬೆಳಕಿನ ತರಂಗ ದೂರವಾನ್ನವಲಂಬಿಸಿದೆ ಉದಾಹರಣೆಗೆ ೭೦೦೦ ಆಂಗ್ಸ್ಟ್ರಂಮ್ ತರಂಗ ದೂರವಿರುವ ಬೆಳಕು ಕೆಂಪು ಬಣ್ಣದ ಸಂವೇದನೆ ಉಂಟುಮಾದುತ್ತದೆ. ೪೦೦೦ ಆಂಗ್ಸ್ಟ್ರಂಮ್ ತರಂಗ ದೂರದ ಬೆಳಕು ನೇರಳೆ ಬಣ್ಣದ ಸಂವೇದನೆ ನೀಡುತ್ತದೆ.ಇವುಗಳ ನಡುವೆ ವಿವಿಧ ತರಂಗದೂರಗಳು ಕಿತ್ತಳೆ,ಹಳದಿ,ಹಸಿರುನೀಲಿ,ಊದಾ ಬಣ್ಣಗಳ ಸಂವೇದನೆ ನೀಡುತ್ತದೆ.ಬೆಳಕು ಫೋಟಾನ್ ಕಣಗಳ ರೂಪದಲ್ಲೂ ಇರಬಲ್ಲುದು.ತರಂಗವಾಗಿಯೂ ,ಕಣವಾಗಿಯೂ ವರ್ತಿಸುವ ಬೆಳಕಿನದ್ದು ಇಬ್ಬಗೆಯ ಸ್ವಭಾವ. ವಕ್ರೀಕರಣದ ಒಂದು ಸುಂದರ ಪರಿಣಾಮವಂದರೆ ಬಿಳಿಯ ಬೆಳಕಿನ ವರ್ಣವಿಭಜನೆ.ಬಿಳಿಯ ಬೆಳಕು ನೇರಳೆ,ಊದಾ,ನೀಲಿ,ಹಸಿರು,ಹಳದಿ,ಕಿತ್ತಳೆ ಮತ್ತು ಕೆಂಪು-ಈ ಸಪ್ತವರ್ಣಗಳ ಸಂಯುಕ್ತ ಎಂಬುವುದನ್ನು ಮೊತ್ತಮೊದಲು ತೋರಿಸಿದ್ದು ಖ್ಯಾತ ಭೌತಶಸ್ತ್ರಜ್ಞ ಸರ್ ಐಸಾಕ್ ನ್ಯೂಟನ್. ವರ್ಣವಿಭಜನೆಯನ್ನು ಪ್ರಾಯೋಗಿಕವಾಗಿ ತೋರಿಸಲು ಆಶ್ರಗ ಒಂದು ಸರಳ ವಿಧಾನ. ಗಾಜಿನಂದ ತಯಾರಿಸಿದ ಆಶ್ರಗದ ಮುಖ್ಯ ಅಡ್ಡ ಛೇದ ತ್ರಿಕೋಣಾಕೃತಿಯಲ್ಲಿದೆ.ಬೆಳಕಿನ ಕಿರಣವು ಆಶ್ರಗದ ಮೂಲಕ ಹಾದು ಹೋಗುವಾಗ ಯಾವಾಗಲೂ ಆಶ್ರಗದ ಪಾದದ ಕಡೆಗೆ ಬಾಗುತ್ತದೆ.ಬೆಳಕಿನ ಬಾಗುವಿಕ ಅದರ ವರ್ಣವನ್ನು ಅವಲಂಬಿಸಿದೆ.ಸಂಯುಕ್ತ ವರ್ಣವಾದ ಬಿಳಿಯ ಬೆಳಕು ಆಶ್ರಗದ ಮೂಲಕ ಚಲಿಸುವಾಗ ಬಿಳಿ ಬೆಳಕಿನಲ್ಲಿನ ವಿವಿಧ ವರ್ಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಬಾಗುವುದರಿಂದ ಬೆಳಕಿನ ವರ್ಣ ವಿಭಜನೆಯಾಗುತ್ತದೆ.ಹೀಗೆ ವಿಭಜನೆಗೋಂಡ ಬೆಳಕನ್ನು ತೆರೆಯ ಮೇಲೆ ಮೂಡಿಸಬಹುದು.ಈ ರೀತಿ ತೆರೆಯ ಮೇಲೆ ಮೂಡಿದ ಬೆಳಕಿನ ವರ್ಣ ವ್ಯಾಪ್ತಿಯೇ ವರ್ಣಪಟಿಲ ಅಥವಾ ರೋಹಿತ. ಬಿಳಿಯ ಬೆಳಕಿನಲ್ಲಿರುವ ಕೆಂಪು ಬಣ್ಣ ಅತಿ ಕಡಿಮೆ ಬಾಗುತ್ತದೆ, ನೇರಳೆ ಬಣ್ಣ ಅತಿ ಹೆಚ್ಚು ಬಾಗುತ್ತದೆ. ವಕ್ರೀಕರಣ,ವರ್ಣವಿಭಜನೆ,ಸಂಪೂರ್ಣ ಆಂತರಿಕ ಪ್ರತಿಫಲನಗಳೆಲ್ಲವೂ ಕೂಡಿ ಆಗಸದಲ್ಲಿ ನೀರಿನ ಹನಿಗಳಿರುವಾಗ ಕಾಮನಬಿಲ್ಲಿನ ವರ್ಣ ವೈಭವ ಉಂಟಾಗುತ್ತದೆ.ಇದು ಬಿಲ್ಲಿನಂತೆ ಬಾಗಿದ್ದು ಸಪ್ತ ವರ್ಣಗಳಿಂದ ಕಂಗೊಳಿಸುತ್ತದೆ.