ಶ್ರೀ ಗನ್ ಮುನೀರ್ ಅವರು ಕನ್ನಡ ಚಲನಚಿತ್ರರಂಗದ ಸಾಹಸ ಪ್ರಧಾನ ಚಲನಚಿತ್ರಗಳಿಗೆ ಮೂಲಾಧಾರ ವ್ಯಕ್ತಿ ಎನ್ನಬಹುದು. ಸಾಹಸ ಕಲಾವಿದರು ಮತ್ತು ಸಾಹಸ ನಿರ್ದೇಶಕರು ಕೇವಲ ದೈಹಿಕ ಕಸರತ್ತಿನ ಸಾಹಸಗಳನ್ನು ನಿರ್ದೇಶಿಸಿದರೆ ಗನ್, ಬಾಂಬು, ಮೆಷಿನ್ ಗನ್, ಪೋಲೀಸ್ ರೈಫಲ್ಸ್ ಇತ್ಯಾದಿ ಪ್ರಯೋಗಗಳನ್ನು ಚಿತ್ರರಂಗದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರಲು ಶ್ರೀ ಗನ್ ಮುನೀರ್ ಮುಖ್ಯ ಕಾರಣರು ಎನ್ನಬಹುದು. ಶಾಂತಿಕ್ರಾಂತಿಯ ಅದ್ಭುತ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕಲ್ಪಿಸಿಕೊಳ್ಳಿ ಆಗ ಗನ್ ಮುನೀರ್ ಎಷ್ಟು ಶ್ರೇಷ್ಟರೆಂದು ಗೊತ್ತಾಗುತ್ತದೆ. ಟೈಂಬಾಂಬ್, ಸಾಂಗ್ಲಿಯಾನ, ಮರಣ ಮೃದಂಗ ಮುಂತಾದ ಚಿತ್ರಗಳಲ್ಲದೇ ತಮಿಳು, ತೆಲುಗು, ಹಿಂದಿ ಹಾಗೂ ಕೆಲವು ಇಂಗ್ಲೀಷ್ ಚಿತ್ರಗಳಲ್ಲೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಸಾಹಸ ಚಿತ್ರಗಳು ರೋಚಕಗೊಳ್ಳುವಲ್ಲಿ ಇವರ ಕೊಡುಗೆಯನ್ನು ಮರೆಯುವಂತಿಲ್ಲ. ವೈ ಶಿವಯ್ಯ, ಥ್ರಿಲ್ಲರ್ ಮಂಜು, ಕೆ.ಡಿ.ವೆಂಕಟೇಶ್, ಸೂಪರ್ ಸುಬ್ಬರಾಯನ್ ಮುಂತಾದ ಹಲವು ಸಾಹಸ ನಿರ್ದೇಶಕರ ಜೊತೆ ಇವರ ಒಡನಾಟ.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.