[೧] ಆಧುನಿಕ ಜೀವನದಲ್ಲಿ ಹಲವಾರು ಉಪಯುಕ್ತ ಜೀವನಾವಶ್ಯಕ ವಸ್ತುಗಳ ಜೊತೆಗೆ, ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ ಗಳು ಅತ್ಯಾವಶ್ಯಕ ವಸ್ತುಗಳ ಸಾಲಿನಲ್ಲಿ ಸೇರ್ಪಡೆಯಾಗಿವೆ. ಡೆಸ್ಕ್ ಕಂಪ್ಯೂಟರ್ ಗಳು ಮನೆಯಲ್ಲಿ ಇಲ್ಲವೇ ಆಫೀಸಿನಲ್ಲಿ ಕೆಲಸ ಮಾಡಲು ಸರಿಯಾಗಿವೆ. ಆದರೆ ನಮ್ಮ ಜೊತೆಗೇ ತೆಗೆದುಕೊಂಡು ಹೋಗಿ ನಮಗೆ ಬೇಕಾದಾಗ ಅವುಗಳನ್ನು ಬಳಸಲು ಸಾಧ್ಯವಿರುವುದಿಲ್ಲ. ಹಾಗಾಗಿ 'ಲ್ಯಾಪ್ ಟಾಪ್', ಇಲ್ಲವೇ 'ಟ್ಯಾಬ್ಲೇಟ್' ಗಳು ಹೆಚ್ಚು ಜನರಿಗೆ 'ಅಪೇಕ್ಷೆಯ ಗ್ಯಾಡ್ಜೆಟ್' ಗಳಾಗಿ ಬಳಕೆಯಲ್ಲಿವೆ. 'ಲ್ಯಾಪ್‌ಟಾಪ್ ಕಂಪ್ಯೂಟರ್' ಕೊಳ್ಳಲು ಹೋಗುವ ಮುನ್ನ, ಮೊದಲನೆಯದಾಗಿ ಯಾವ ಯಾವ ಕೆಲಸಗಳನ್ನು ಮಾಡಲು ಬೇಕು, ಎನ್ನುವುದನ್ನು ನಿರ್ಧರಿಸುವುದು ಮುಖ್ಯ. ಕೆಲಸದ ದೃಷ್ಟಿಯಿಂದ ನಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿ, ಅವನ್ನು ಅಂಗಡಿ ಮಾಲೀಕನ ಜೊತೆ ಮುಕ್ತವಾಗಿ ಮಾತುಕತೆ ನಡೆಸಿ, 'ಬ್ರೋಶರ್' ಗಳನ್ನು ಪಡೆದು ಅವನ್ನು ಸರಿಯಾಗಿ ಓದಿ ಖಚಿತಪಡಿಸಿಕೊಳ್ಳುವುದು ಅತಿ ಮುಖ್ಯ. ವಿದ್ಯಾರ್ಥಿಗಳು, ಬಿಜಿನೆಸ್ ಎಕ್ಸಿ ಕ್ಯುಟೀವ್ ಗಳು, ಶಿಕ್ಷಕರು, ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸಮಾಡುವವರು, ಮೀಡಿಯದಲ್ಲಿ ಕೆಲಸಮಾಡುವವರು, ಮೊದಲಾದವರು, ತಮ್ಮದೇ ಆದ ಕೆಲವು ವಿಶೇಷ ಆದ್ಯತೆಗಳನ್ನು ಹೊಂದಿರುತ್ತಾರೆ.

ಆದ್ಯತೆಗಳ ಪಟ್ಟಿ ಬದಲಾಯಿಸಿ

  • ಮತ್ತೊಂದು ಅಂಶವೆಂದರೆ, ನಮ್ಮ ಆಯ್ಕೆಯ ಲ್ಯಾಪ್‌ಟಾಪ್‌ನಲ್ಲಿ ಯಾವೆಲ್ಲ ಬಗೆಯ ಸಂಪರ್ಕಗಳು ಲಭ್ಯವಿವೆ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸಬೇಕಾಗಿದೆ.'ವೈ-ಫೈ' ಹಾಗೂ 'ಯುಎಸ್‌ಬಿ ಡಾಂಗಲ್' ಎರಡರ ಮೂಲಕವೂ ಅಂತರಜಾಲ ಸಂಪರ್ಕ ಪಡೆದು ಕೊಳ್ಳುವಂತಿರಬೇಕಾದ್ದು ಬಹಳ ಅನಿವಾರ್ಯವೇ ಎನ್ನಬಹುದು. ಲ್ಯಾಪ್‌ಟಾಪ್‌ಗಳಲ್ಲಿ 'ಇಥರ್‌ನೆಟ್ ಕೇಬಲ್' ಮೂಲಕ ಅಂತರಜಾಲ ಸಂಪರ್ಕದ ಬಳಕೆ ಕಡಿಮೆಯಾಗುತ್ತಿದೆ.
  • 'ಬ್ಲೂಟೂತ್ ಸೌಲಭ್ಯ' ಕೂಡ ಇರುವಂಥಹ 'ಲ್ಯಾಪ್‌ಟಾಪ್‌' ಕೊಳ್ಳುವುದು ಉತ್ತಮ. ಇಂದಿನ ದಿನಗಳಲ್ಲಿ ಹಲವಾರು ಸುಪ್ರಸಿದ್ಧ ಕಂಪೆನಿಗಳು, ತಮ್ಮ ತಯಾರಿಕೆಯ ಕಂಪ್ಯೂಟರ್ ನಲ್ಲಿ ಹತ್ತಾರು ಸೌಲಭ್ಯಗಳನ್ನು ಹೊಂದಿದ ಮಾಡೆಲ್ ಗಳನ್ನು ತಮ್ಮ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. 'ಉತ್ತಮ ಸ್ಲಾಟ್' ಇರುವ ಯುಎಸ್‌ಬಿ, ಹಾಗಾಗಿ ಲ್ಯಾಪ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದನ್ನು ಗಮನಿಸಬೇಕು.
  • ಯುಎಸ್‌ಬಿ ೨.೦ಗಿಂತ ಹೆಚ್ಚು ವೇಗದ ಸಂಪರ್ಕ ಒದಗಿಸುವ ಯುಎಸ್‌ಬಿ ೩.೦ ಪೋರ್ಟ್‌ಗಳಿದ್ದರೆ ಒಳ್ಳೆಯದು(ಯುಎಸ್‌ಬಿ ೩.೦ ಪೋರ್ಟ್ ಆದರೆ ಅದರೊಳಗೆ ಕಾಣಿಸುವ ಪ್ಲಾಸ್ಟಿಕ್ ಭಾಗ ನೀಲಿ ಬಣ್ಣದಲ್ಲಿರುತ್ತದೆ; ಯುಎಸ್‌ಬಿ ೨.೦ ಪೋರ್ಟ್‌ನಲ್ಲಿ ಅದು ಬಿಳಿ ಅಥವಾ ಕಪ್ಪು ಬಣ್ಣದ್ದಾಗಿರುವುದು ಸಾಮಾನ್ಯ)
  • ಸಾಮಾನ್ಯ ಮಾನಿಟರುಗಳಿಗೆ, ಪ್ರೊಜೆಕ್ಟರುಗಳಿಗೆ ಕಂಪ್ಯೂಟರನ್ನು ಸಂಪರ್ಕಿಸಲು 'ವಿಜಿಎ ಪೋರ್ಟ್' ಬಳಸುವುದು ಸಾಮಾನ್ಯವಾದ ಸಂಗತಿ. 'ಲ್ಯಾಪ್‌ಟಾಪ್'ಅನ್ನು ಆ ಬಗೆಯ ಯಾವುದೇ ಸಾಧನಕ್ಕೆ ಸಂಪರ್ಕಿಸುವ ಅಗತ್ಯವಿದ್ದರೂ ವಿಜಿಎ ಪೋರ್ಟ್ ಇರುವ ಲ್ಯಾಪ್‌ಟಾಪ್ ನ್ನೇ ಆರಿಸಿಕೊಳ್ಳುವುದರಿಂದ ಕೆಲಸ ಸುಗಮವಾಗುತ್ತದೆ. ಲ್ಯಾಪ್‌ಟಾಪ್ ಗೆ, ಹೊಸಮಾದರಿಯ ಮಾನಿಟರ್, ಟೀವಿ ಅಥವಾ ಪ್ರೊಜೆಕ್ಟರುಗಳಿಗೆ ಎಚ್‌ಡಿಎಂಐ ಪೋರ್ಟ್ ಮೂಲಕವೂ ಸಂಪರ್ಕಿಸಬಹುದು.

ಒಳ್ಳೆಯ ಕ್ಯಾಮೆರಾ ಮತ್ತು ಸ್ಪೀಕರ್ ಬದಲಾಯಿಸಿ

ಇನ್ನು ಕ್ಯಾಮೆರಾ-ಮೊಬೈಲ್ ಫೋನ್ ಇತ್ಯಾದಿಗಳಲ್ಲೆಲ್ಲ ಬಳಸುವ ಮೆಮೊರಿ ಕಾರ್ಡ್‌ನಿಂದ ಮಾಹಿತಿ ವರ್ಗಾಯಿಸಲು ಬಿಲ್ಟ್-ಇನ್ ಕಾರ್ಡ್ ರೀಡರ್ ಇದ್ದರೆ ಬಾಹ್ಯ ಕಾರ್ಡ್‌ರೀಡರುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ವೀಡಿಯೋ ಚಾಟಿಂಗ್‌ಗಾಗಿ ಬಳಸಲು ಒಳ್ಳೆಯ ವೆಬ್ ಕ್ಯಾಮೆರಾ, ಧ್ವನಿಗ್ರಹಣಕ್ಕಾಗಿ ಮೈಕ್ ಹಾಗೂ ಸ್ಪಷ್ಟ ಧ್ವನಿ ಕೇಳಿಸುವ ಸ್ಪೀಕರ್ ಇರುವುದು ಅತಿ ಮುಖ್ಯ.

ರ‍್ಯಾಮ್ ಬದಲಾಯಿಸಿ

ರ‍್ಯಾಂಡಮ್ ಆಕ್ಸೆಸ್ ಮೆಮೊರಿ (ರ‍್ಯಾಮ್) ಹಾಗೂ ಹಾರ್ಡ್ ಡಿಸ್ಕ್ ಸಾಮರ್ಥ್ಯ ನಿಮ್ಮ ಅಗತ್ಯಕ್ಕೆ ತಕ್ಕಂತಿರಬೇಕು. ಲ್ಯಾಪ್‌ಟಾಪ್‌ನಲ್ಲಿ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ) ಇರಬೇಕೋ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ) ಇರಬೇಕೋ ಎನ್ನುವುದನ್ನು-ಕೆಲ ಸಂದರ್ಭಗಳಲ್ಲಿ- ನಾವು ಆಯ್ದುಕೊಳ್ಳಬಹುದು. ಕಾರ್ಯಕ್ಷಮತೆಯ ದೃಷ್ಟಿಯಿಂದ ಎಸ್‌ಎಸ್‌ಡಿ ಗುಣಮಟ್ಟ ಉತ್ತಮವಾಗಿರುತ್ತದೆ; ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದರ ಬೆಲೆ ತೀರಾ ಜಾಸ್ತಿ, ಹಾಗೂ ಅವುಗಳ ಶೇಖರಣಾ ಸಾಮರ್ಥ್ಯ ಎಚ್‌ಡಿಡಿಗಳಿಗಿಂತ ಕಡಿಮೆ.

ಸೌಲಭ್ಯಗಳು ಪ್ರತಿಮಾಡೆಲ್ ನಲ್ಲೂ ಹೆಚ್ಚುತ್ತಿವೆ ಬದಲಾಯಿಸಿ

ಹಿಂದೆ ಬಳಕೆಯಲ್ಲಿದ್ದ ಕಂಪ್ಯೂಟರುಗಳಿಂದ 'ಫ್ಲಾಪಿ ಡ್ರೈವ್‌ಗಳು' ಈಗ ಕಾಣದಂತೆ ಮಾಯವಾಗಿವೆ. ಲ್ಯಾಪ್‌ಟಾಪ್‌ಗಳ ಮಟ್ಟಿಗೆ ಈಗ 'ಆಪ್ಟಿಕಲ್ ಡ್ರೈವ್‌ಗಳೂ' ಅದೇ ಹಾದಿಯಲ್ಲಿ ಸಾಗುತ್ತಿವೆ. ಹೊಸ ಮಾದರಿಯ ಅನೇಕ ಲ್ಯಾಪ್‌ಟಾಪ್‌ಗಳಲ್ಲಿ, ನೆಟ್‌ಬುಕ್‌ಗಳಲ್ಲಿ ಸಿ.ಡಿ/ಡಿವಿಡಿ ಡ್ರೈವ್‌ಗಳು ಇರುವುದಿಲ್ಲ. ಹಾಗಾಗಿ ಲ್ಯಾಪ್‌ಟಾಪ್ ಕೊಳ್ಳುವ ಮೊದಲೇ ಸಿ.ಡಿ/ಡಿವಿಡಿ ಡ್ರೈವ್ ಬೇಕೋ ಬೇಡವೋ ಎಂದು ತೀರ್ಮಾನಿಸಿಕೊಳ್ಳುವುದು ಉತ್ತಮ. ಸಿ.ಡಿ/ಡಿವಿಡಿ ಡ್ರೈವ್ ಅಗತ್ಯವಿರುವವರು ಆ ಸೌಲಭ್ಯ ಇಲ್ಲದ ಲ್ಯಾಪ್‌ಟಾಪ್ ಕೊಂಡರೆ ಎಕ್ಸ್‌ಟರ್ನಲ್ ಸಿ.ಡಿ/ಡಿವಿಡಿ ಡ್ರೈವ್ ಕೊಳ್ಳಲು ಮತ್ತೆ ಹಣ ಖರ್ಚುಮಾಡಬೇಕಾಗುತ್ತದೆ. ಅಂದ ಹಾಗೆ ಸಿ.ಡಿ/ಡಿವಿಡಿ ಡ್ರೈವ್ ಇರುವ ಲ್ಯಾಪ್‌ಟಾಪ್ ಕೊಳ್ಳುವವರು ಸಾಧ್ಯವಾದರೆ ಅದಕ್ಕಿಂತ ಒಂದು ಹಂತ ಮೇಲಿನ 'ಬ್ಲೂ ರೇ ಡ್ರೈವ್' ಅನ್ನೇ ಕೊಳ್ಳಬಹುದು. ಈಗ ಬಳಕೆಗೆ ಬರುತ್ತಿರುವ 'ಬ್ಲೂ ರೇ ಡಿಸ್ಕ್‌'ಗಳನ್ನು ಇಂತಹ ಡ್ರೈವ್‌ನಲ್ಲಿ ಬಳಸುವುದು ಸಾಧ್ಯ.

ಕೊಳ್ಳಲು ನಿರ್ಧರಿಸಿದಮೇಲೆ ಬದಲಾಯಿಸಿ

ಅಂತಿಮವಾಗಿ ಕೊಳ್ಳುವ ನಿರ್ಧಾರ ಮಾಡಿ ಮುಂದುವರೆಯುವಾಗ, 'ಲ್ಯಾಪ್‌ಟಾಪ್' ಬೇಕೋ 'ಟ್ಯಾಬ್ಲೆಟ್' ಬೇಕೋ ಎಂದು ಕೂಡ ಮೊದಲೇ ತೀರ್ಮಾನಿಸಿ ಕೊಳ್ಳುವುದು ಅತಿ ಮುಖ್ಯ. ಚಟುವಟಿಕೆಗಳ ಪಟ್ಟಿ ಬ್ರೌಸಿಂಗ್, ಸಿನಿಮಾ ವೀಕ್ಷಣೆ, ಗೇಮ್ಸ್- ಹೀಗೆ ಸಾಗುವುದಾದರೆ, ಹಗುರವಾದ ಟ್ಯಾಬ್ಲೆಟ್, ತೂಕದ ಲ್ಯಾಪ್‌ಟಾಪ್‌ಗಿಂತ, ಉತ್ತಮ ಜೊತೆಗಾತಿಯಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. 'ಇ ಜ್ಞಾನ', 'ಶಾಪಿಂಗ್ ಸಂಗಾತಿ.' 'ಲ್ಯಾಪ್ ಟಾಪ್ ನಲ್ಲಿ ಏನೇನಿರಬೇಕು'