ಲ್ಯಾಟಿನ್

(ಲ್ಯಾಟಿನ್ ಭಾಷೆ ಇಂದ ಪುನರ್ನಿರ್ದೇಶಿತ)

ಪ್ರಾಚೀನ ರೋಮ್ ಜನರು ಬಳಸುತ್ತಿದ್ದ ಭಾಷೆ ಲ್ಯಾಟಿನ್. ಭಾರತ ದೇಶದಲ್ಲಿ ಸಂಸ್ಕೃತ ಭಾಷೆಗಿರುವ ಸ್ಥಾನಮಾನ, ಗೌರವ ಯೂರೋಪ್ ನ ಈ ಭಾಷೆಗಿದೆ.ಇದು ರೋಮನ್ ಕ್ಯಾಥೋಲಿಕ್ ಧರ್ಮಪೀಠದ ಅಧಿಕೃತ ಭಾಷೆಯಾಗಿತ್ತು. ಆರಂಭದ ಲ್ಯಾಟಿನ್ ಸಾಹಿತ್ಯದ ಮೇಲೆ ಗ್ರೀಕ್ ಸಾಹಿತ್ಯದ ಪ್ರಭಾವ ಧಾರಾಳವಾಗಿ ಕಾಣಬಹುದು. ಅಗಸ್ಟಸ್ ಚಕ್ರವರ್ತಿಯ ಅವಧಿಯನ್ನು ಲ್ಯಾಟಿನ್ ಭಾಷೆಯ ಸುವರ್ಣಯುಗವೆಂದು ಕರೆಯುವವರು. ಪ್ರಸಿದ್ಧ ಸಾಹಿತಿಗಳಾದ ಹೂರೇಸ್, ವರ್ಜಿಲ್ ಹಾಗೂ ಓವಿಡ್ ರು ಇದ್ದಂತಹ ಕಾಲವದು. ರೋಮ್ ಸಾಮ್ರಾಜ್ಯದ ಪತನಾನಂತರ ಲ್ಯಾಟಿನ್ ಭಾಷೆ ಕುಂಠಿತವಾಗತೊಡಗಿತು. ನವೋದಯ ಕಾಲದಲ್ಲಿ ಮತ್ತೇ ಪುನರುಜ್ಜೀವನಗೊಂಡಿತು. ರೋಮ್, ಫ್ಲಾರೆನ್ಸ್ ಮತ್ತು ನೇಪಲ್ಸ್ ನಲ್ಲಿ ಲ್ಯಾಟಿನ್ ನ ಪ್ರಮುಖ ಅಧ್ಯಯನ ಕೇಂದ್ರ ಆರಂಭಗೊಂಡವು. ಡಾಂಟೆ, ಪೆಟ್ರಾರ್ಕ್ ಮತ್ತು ಬೊಕಾಶಿಯೋ ಅವರ ಅಮೂಲ್ಯ ಕೃತಿಗಳು ಲ್ಯಾಟಿನ್ ಭಾಷೆ ನೀಡಿದ ಅತ್ಯಮೂಲ್ಯ ಕೊಡುಗೆಗಳೆಂದು ಪರಿಗಣಿಸಲಾಗಿದೆ.ಈ ಭಾಷೆ ಮೊದಲಿಗೆ ಲ್ಯಾಟಿನಿ ಬುಡಕಟ್ಟು ಜನಾಂಗದವರಿಂದ ಕ್ರಿ.ಪೂ.೩ನೇ ಶತಮಾನದಲ್ಲಿ ಹುಟ್ಟಿರುವುದಾಗಿ ಊಹಿಸಲಾಗಿದೆ.೪೭೬ ರಲ್ಲಿ ರೋಮನ್ ರಾಜ್ಯ ಕುಸಿದಾಗ ಜರ್ಮನಿಯ ಸಂಸ್ಥಾನಗಳು ಈ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಂಡವು

ಇಂಗ್ಲಿಷ್‌ನಲ್ಲೇ ಲ್ಯಾಟಿನ್ ಮಾತನಾಡುವ ಹದಿಹರೆಯದ ವ್ಯಕ್ತಿ
ಜೂಲಿಯಸ್ ಸಿಕ್ಸರ್ ಜರ್ಮನ್ ಕವಿತೆ