ಲೋಕ ಕಲ್ಯಾಣ ದೇವಸ್ಥಾನ

ಶ್ರೀ ಮಹಾಕಾಳಿ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಸರಸ್ವತಿ ಲೋಕ ಕಲ್ಯಾಣ ದೇವಸ್ಥಾನ

ಸಮಿತಿ (ರಿ) ಸುಕ್ಷೇತ್ರ ಗೋನವಾರ ತಾ:ಸಿಂಧನೂರು ಜಿ:ರಾಯಚೂರು, ಕರ್ನಾಟಕ- 584 143.

ಶ್ರೀಶ್ರೀಶ್ರೀ ಲಿಂಗೈಕ್ಯ ರಾಜಯೋಗಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹಂಸನೂರ ಮಠ, ಪಟ್ಟದಕಲ್ಲು ಇವರ

ಶಿಷ್ಯರಾದ ಶ್ರೀ ಮಲ್ಲಯ್ಯ ತಾತನವರು 10,031 ಕಿ.ಮೀ 236 ದಿನಗಳ ತಮ್ಮ ಪಾದಯಾತ್ರೆ ಮೂಲಕ

ಮೇ 6-2013 ರಿಂದ - ಡಿಸೆಂಬರ 27-2013 ವರಿಗೆ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ದೇಶದಲ್ಲಿರುವ 

12 ಜ್ಯೋತಿರ್ಲಿಂಗಗಳ ದಿವ್ಯದರ್ಶನ ಪಡೆದು, ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಗ್ರಾಮದಲ್ಲಿ

ಶ್ರೀ ಮಹಾಕಾಳಿ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಸರಸ್ವತಿ ಶ್ರೀ ಮಹಾಶಿವಲಿಂಗ ಮೂರ್ತಿಗಳು ಪ್ರತಿಷ್ಠಾಪಿಸಿದ್ದು,

ಇದು ಬಾರತ ದೇಶದಲ್ಲೇ ಮೊದಲನೇಯ ಶಿವ-ತ್ರಿಶಕ್ತಿಯರ ಏಕೈಕ ಮಂದರಿವಾಗಿದೆ.

05-05-2014 TO 17-12-2014 --> 227 ದಿನಗಳು ಶ್ರೀ ಮಲ್ಲಯ್ಯ ತಾತನವರು ಮೌನದಲ್ಲಿದ್ದರು, ದಿನಕ್ಕೆ 11,108 ಸರಥಿ

ಒಟ್ಟು 25, 21, 516 ಸಲ  ಶ್ರೀ ಗಾಯತ್ರಿ ಮಹಾಮಂತ್ರ - ಗಾಯತ್ರಿ ಪುರಶ್ಚರಿಣೆ.

ದಿನಾಂಕ 16-12-2014 ಮಂಗಳವಾರ ಶ್ರೀ ಮಲ್ಲಯ್ಯ ತಾತನವರು ಒಂದೇ ದಿನದಲ್ಲಿ ಬೆಳಗ್ಗೆ 3:02 ನಿ.ದಿಂದ

ಮದ್ಯಾಹ್ನ 2:47 ನಿ.ದವರೆಗೆ (11 ತಾಸು 45 ನಿಮಿಷದಲ್ಲಿ) ಒಂದು ಗ್ರಾಮಕ್ಕೆ 6 ನಿಮಿಷ 52 ಸೆಕೆಂಡ್ ರಂತೆ

108 ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದಾರೆ.

ಅಖಂಡ ಹನ್ನೇರಡು ವರ್ಷ ತ್ರಿಕಾಲ ಪೂಜೆಯಲ್ಲಿರುವ ಶ್ರೀ ಮಲ್ಲಯ್ಯ ತಾತನವರು ಲೋಕ ಕಲ್ಯಾಣಕ್ಕಾಗಿ, ಭುವನಮಂಗಲಕ್ಕಾಗಿ, ಸರ್ವಜನಾಂಗದ

ಶಾಂತಿಗಾಗಿ 2ನೇ ಬಾರಿಗೆ ಕೈಗೊಂಡ ಯಾತ್ರೆ : "ದಿವ್ಯಜ್ಯೋತಿಯ ಜಗದ ಮಂಗಲಯಾತ್ರೆ"

12-02-2017 ರವಿವಾರ ದಿಂದ 12-12-2017 ಮಂಗಳವಾರ ದವರಿಗೆ 3 ದೇಶಗಳಲ್ಲಿ(ಭಾರತ, ಶ್ರೀಲಂಕಾ ಮತ್ತು ನೇಪಾಳ ) 304 ದಿನಗಳು.

ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಖಂಡ "ದಿವ್ಯಜ್ಯೋತಿ ಜಗದ ಮಂಗಲಯಾತ್ರೆ"ಯ ಮುಖಾಂತರ

ನಮ್ಮ ಭಾರತ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳು, 18 ಶಕ್ತಿಪೀಠಗಳು, 52 ಉಪಶಕ್ತಿಪೀಠಗಳು ದರ್ಶನ, 

ಶ್ರೀಲಂಕಾ ದೇಶದಲ್ಲಿರುವ ಶ್ರೀ ಶಾಂಕರಿ ದೇವಿ ಶಕ್ತಿಪೀಠವನ್ನು ಸ್ಪರ್ಶ ಜ್ಯೋತಿಯಿಂದ ದರ್ಶನ, ನೇಪಾಳ ದೇಶದಲ್ಲಿರುವ ಶ್ರೀ ಪಶುಪತಿನಾಥ ಜ್ಯೋತಿರ್ಲಿಂಗ ದರ್ಶನ ಪಡೆದಿದ್ದಾರೆ.

"ದಿವ್ಯಜ್ಯೋತಿ ಜಗದ ಮಂಗಲಯಾತ್ರೆ"ಯ ಮುಖಾಂತರ ನಮ್ಮ ಭಾರತ ದೇಶದಲ್ಲಿರುವ ಪಂಚಭೂತ ಶಿವ ದೇವಾಲಯಗಳು, ನಾಲ್ಕು ದಿಕ್ಕುಗಳಲ್ಲಿರುವ

ನಾಲ್ಕು ಪೀಠಗಳು, ಹರಿಯಾಣ ರಾಜ್ಯದಲ್ಲಿರುವ ಶ್ರೀ ಮದ್ "ಭಗವದ್ಗೀತೆ"ಯ ಜನ್ಮಭೂಮಿ ಧರ್ಮಕ್ಷೇತ್ರ-ಕುರುಕ್ಷೇತ್ರ ಮತ್ತು ಪಂಜಾಬ ರಾಜ್ಯದಲ್ಲಿರುವ

ಶ್ರೀ ಮಹರ್ಷಿ ವಾಲ್ಮೀಕಿ ಋಷಿಗಳು ರಚಿಸಿರುವ ಮಹಾಕಾವ್ಯ "ಶ್ರೀ ರಾಮಾಯಣ" ಜನ್ಮಭೂಮಿ“ವಾಲ್ಮೀಕಿತೀರ್ಥ” ದರ್ಶನ ಪಡೆದಿದ್ದಾರೆ.

ಎರಡು ಬಂಗಾರದ ದೇವಸ್ಥಾನಗಳು (ಅಮೃತಸರ್, ಪಂಜಾಬ್ ಮತ್ತು ವೆಲ್ಲೂರು, ತಮಿಳುನಾಡು ಗೋಲ್ಡನ್ ಟೆಂಪಲಗಳು) ದರ್ಶನ ಪಡೆದಿದ್ದಾರೆ, 

ಹಿಂದು ಮಹಾಸಾಗರ-ಬಂಗಲಕೋಲ್ಲಿ-ಅರಬ್ಬೀ ಈ ಮೂರು ಸಮುದ್ರಗಳ ತಟ್ಟದಲ್ಲಿ ಪೂಜೆ,

ಮಂಧಾಕಿನಿ, ಗಂಗೋತ್ರಿ, ಯಮನೋತ್ರಿ, ನರ್ಮದಾ, ಗೋದಾವರಿ, ಭೀಮಾ ನದಿಗಳ ಉಗಮ ಸ್ಥಳಗಳಲ್ಲಿ ಪೂಜೆ ಮಾಡಿದ್ದಾರೆ. 

ಕರ್ನಾಟಕ ರಾಜ್ಯದ ತಲಕಾಡು ನಲ್ಲಿರುವ ಪಂಚಲಿಂಗಗಳು, ಆಂಧ್ರಪ್ರದೇಶ ರಾಜ್ಯದ ಆಹೋಬಿಲಂ ನಲ್ಲಿರುವ ನವ-ನರಸಿಂಹ ಕ್ಷೇತ್ರಗಳು

ಮತ್ತು ನಮ್ಮ ಭಾರತ ದೇಶದಲ್ಲಿರುವ ಇನ್ನಿತರ ಪ್ರಸಿದ್ಧ ಪುಣ್ಯಕ್ಷೇತ್ರಗಳ ದರ್ಶನ ಪಡೆದಿದ್ದಾರೆ.