ಲೋಕ್‍ತಾಕ್ ಸರೋವರವು ಈಶಾನ್ಯ ಭಾರತದಲ್ಲಿನ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ. ಇದು ಅದರ ಮೇಲೆ ತೇಲುವ ಫುಮ್ಡಿಗಳಿಗೆ (ವಿಘಟನೆಯ ವಿವಿಧ ಹಂತಗಳಲ್ಲಿರುವ ಸಸ್ಯಗಳು, ಮಣ್ಣು ಮತ್ತು ಸಾವಯವ ವಸ್ತುಗಳ ವೈವಿಧ್ಯಮಯ ದ್ರವ್ಯರಾಶಿ) ಪ್ರಸಿದ್ಧವಾಗಿದೆ. ಈ ಸರೋವರವು ಭಾರತದ ಮಣಿಪುರ ರಾಜ್ಯದಲ್ಲಿನ ಮೊಯಿರಾಂಗ್‌ನಲ್ಲಿ ಸ್ಥಿತವಾಗಿದೆ.[] ಲೋಕ್‍ತಾಕ್‍ನ ಶಬ್ದವ್ಯುತ್ಪತ್ತಿ ಹೀಗಿದೆ, ಲೋಕ್ = "ತೊರೆ" ಮತ್ತು ತಾಕ್ = "ಕೊನೆ".[] ಎಲ್ಲ ಫುಮ್ಡಿಗಳಲ್ಲಿ ಅತ್ಯಂತ ದೊಡ್ಡದು ೪೦ ಚದರ ಕಿ.ಮಿ. ಪ್ರದೇಶವನ್ನು ಆವರಿಸುತ್ತದೆ ಮತ್ತು ಸರೋವರದ ಆಗ್ನೇಯ ತಟದಲ್ಲಿ ಸ್ಥಿತವಾಗಿದೆ. ಈ ಫುಮ್ಡಿಯ ಮೇಲೆ ಸ್ಥಿತವಾಗಿರುವ ಕೈಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನವು ವಿಶ್ವದಲ್ಲಿನ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವಾಗಿದೆ. ಈ ಉದ್ಯಾನವು ಸಾಂಗಾಯ್‍ನ (ರಾಜ್ಯಪ್ರಾಣಿ) ಅಥವಾ ಮಣಿಪುರ್ ಕಂದು ಕವಲ್ಗೊಂಬಿನ ಜಿಂಕೆಯ ಕೊನೆಯ ನೈಸರ್ಗಿಕ ರಕ್ಷಿತ ಸ್ಥಾನವಾಗಿದೆ.[][]

ಲೋಕ್‍ತಾಕ್ ಸರೋವರ ಮತ್ತು ಫುಮ್ಡಿಗಳ ನೋಟ
ಲೋಕ್‍ತಾಕ್ ಸರೋವರ, ಡಿಸೆಂಬರ್ 2016

ಉಲ್ಲೇಖಗಳು

ಬದಲಾಯಿಸಿ
  1. "Integrated Wetland and River Basin Management – A Case Study of Loktak Lake". Wetlands International - South Asia, New Delhi, India. Archived from the original on 22 March 2012. Retrieved 2009-04-03.
  2. Khwairakpam Gajananda; Thokchom Sundari Chanu. "The Fate of Loktak Lake". Retrieved 2009-04-03.
  3. "Loktak Lake". WWF India. Archived from the original on 2010-02-21.
  4. "Bishnupur: The Land of the Dancing Deer". National Informatics Centre, Government of India. Archived from the original on 10 April 2009. Retrieved 7 December 2018.

ಹೊರಗಿನ ಕೊಂಡಿಗಳು

ಬದಲಾಯಿಸಿ