ಲೂಯಿಸ್ ಬ್ಲಾಂಕ್
ಜೀನ್ ಜೋಸೆಫ್ ಲೂಯಿಸ್ ಬ್ಲಾಂಕ್ ನನ್ನು ರಾಜ್ಯ ಸಮಾಜಚಾದದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.ಅವನು ಒಬ್ಬ ಹೆಸರಾಂತ ಸಮಾಜ ಸುಧಾರಕ ಮತ್ತು ಇತಿಹಾಸಕಾರನಾಗಿದ್ದ.ಅವನು ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವನಾಗಿದ್ದರೂ ಸಹ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಬಡತನದ ಬೇಗೆಯಲ್ಲಿ ಸಿಲುಕಿಕೊಂಡ.ಸದಾ ದುಡಿಯುವ ವರ್ಗದವರ ಪರವಾಗಿ ತುಡಿಯುತ್ತಿದ್ದ ಅವನು ಹಲವಾರು ಉಪಯುಕ್ತ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವ ಪ್ರಯತ್ನದಲ್ಲಿ ಸಫಲನಾದ. ಜೀವನ ಚಿತ್ರನ:
ಲೂಯಿಸ್ ಬ್ಲಾಂಕ್ | |
---|---|
ಜನನ | ಲೂಯಿಸ್ ಬ್ಲಾಂಕ್ ಅಕ್ಟೊಬರ್ ೨೯,೧೮೧೧ ಮ್ಯಾಡ್ರಿಡ್,ಕಿಂಗ್ಡಮ್ ಆಫ್ ಸ್ಪೇನ್ |
ರಾಷ್ಟ್ರೀಯತೆ | ಫ್ರೆಂಚ್ |
ಜನನ
ಬದಲಾಯಿಸಿಜೀನ್ ಜೋಸೆಫ್ ಲೂಯಿಸ್ ಬ್ಲಾಂಕ್ ೧೮೧೧ರಲ್ಲಿ ಮಾದ್ರಿದ್ ನಲ್ಲಿ ಜನಿಸಿದನು.ರೋಡ್ಸ್ ಮತ್ತು ಪ್ಯಾರಿಸ್ ಗಳಲ್ಲಿ ವ್ಯಾಸಂಗ ಮಾಡಿದ ಈತ ತನ್ನ ಕಾಲದ ರಾಜಕಾರಣಿಗಳು ಮತ್ತು ಪತ್ರಕರ್ತರ ಪೈಕಿ ಒಬ್ಬ ವಿಶಿಷ್ಟ ವ್ಯಕ್ತಿಯಾಗಿದ್ದ. ಅವರ ತಂದೆಯು ಜೊಸೆಫ್ ಬೊನಪಾರ್ಟೆ ಕೆಳಗೆ ಇನ್ಸ್ಪೆಕ್ಟರ್ ಪದವಿಯನ್ನು ಹೊಂದಿದ್ದರು.ಅವರ ತಮ್ಮ ಹೆಸರು ಚಾರ್ಲ್ಸ್ ಬ್ಲಾಂಕ್.
ವಿದ್ಯಾಭ್ಯಾಸ
ಬದಲಾಯಿಸಿಲೂಯಿಸ್ ಬ್ಲಾಂಕ್ ರವರು ವಿಧಿನಿಬಂಧನೆಯನ್ನು ಪ್ಯಾರಿಸ್ ನಲ್ಲಿ ಓದಿದರು.ಅವರು ಬಡತನದಲ್ಲಿ ಹುಟ್ಟಿದರು,
ತಿರುಗುವಿಕೆ
ಬದಲಾಯಿಸಿ೧೮೪೮ರ ಫ್ರೆಂಚ್ ಕ್ರಾಂತಿಯಲ್ಲಿ ಸಕ್ರೀಯ ಪಾತ್ರವಹಿಸಿದ್ದ ಆತನನ್ನು ಪ್ರಾವಿನ್ಸಿಯಲ್ ಸರ್ಕಾರದ ಸದಸ್ಯನನ್ನಾಗಿ ನೇಮಿಸಲಾಯಿತು.ಕೆಲಕಾಲದ ನಂತರ ಆತನನ್ನು ದೇಶದಿಂದ ಹೊರದಬ್ಬಲಾಯಿತು.೧೮೭೦ರವರೆಗೆ ಇಂಗ್ಲೆಂಡಿನಲ್ಲಿ ನೆಲೆಸಿದ್ದ ಈತ ತನ್ನ ವಾಪಸಾತಿಯ ನಂತರ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯನಾದ. ಪ್ರಭಾವಿ ಬರವಣಿಗೆಯ ಮೂಲಕ ಪ್ರಖ್ಯಾತಿ ಪಡೆದ ಬ್ಲಾಂಕ್ (೧೨ ಸಂಪುಟಗಳು)ನನ್ನು ಪ್ರಕಟ ಪಡಿಸಿದ.Organisation of Labor ಎಂಬ ಇನ್ನೊಂದು ಗ್ರಂಥ ೧೮೪೧ರಲ್ಲಿ ಪ್ರಕಟಗೊಂಡಿತು.ಈ ಗ್ರಂಥವು ಅವನಿಗೆ ಸಾಕಷ್ಟು ಹೆಸರು ಮತ್ತು ಪ್ರಖ್ಯಾತಿಯನ್ನು ತಂದಿತ್ತಿತು.೧೮೪೮ರಲ್ಲಿ ಲೂಯಿಸ್ ಬ್ಲಾಂಕ್ ಗೆ ನಿಜವಾದ ಅವಕಾಶವು ಅವರಿಗೆ ದೊರಕಿತ್ತು, ತನ್ನ ಕಲ್ಪನೆಗಳನ್ನು ತೋರಿಸಲು. ಬ್ಲಾಂಕ್ ನ ಆರ್ಥಿಕ ಅಭಿಪ್ರಾಯಗಳು:
ನವ ಸಾಮಾಜಿಕ ವ್ಯವಸ್ಥೆ
ಬದಲಾಯಿಸಿಬ್ಲಾಂಕ್ ಒಂದು ಹೊಸ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸುವ ಅಪೇಕ್ಷೆ ಹೊಂದಿದ್ದ.ಈ ವ್ಯವಸ್ಥೆಯ ನಿರ್ಮಾಣಕ್ಕೆ ಕಾರ್ಮಿಕರ ವಿಮೋಚನೆ ಅತ್ಯವಶ್ಯಕ ಎಂದು ನಂಬಿದ್ದ.ಅವನ ಪ್ರಕಾರ ರಾಜ್ಯವು ಬಡವರ ಬ್ಯಾಂಕ್ ಇದ್ದ ಹಾಗೆ.ಅದು ಅವಶ್ಯಕ ಉತ್ಪಾದನಾ ಸಾಧನಗಳನ್ನು ಪೂರೈಸಬೇಕು.ಕೆಳವರ್ಗದ ಜನರ ಒಳಿತಿಗಾಗಿ ಸರ್ಕಾರ ಶ್ರಮಿಸಬೇಕು.ಆರ್ಥಿಕ ಬಲಹೀನತೆಗಳನ್ನು ತೊಡೆದು ಹಾಕಿದಾಗ ಬಡವರು ತಮ್ಮ ಸ್ವಾತಂತ್ರ್ಯವನ್ನು ಅನುಭವಿಸಬಹುದು.ಅವನ ಪ್ರಕಾರ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಹಗಳು ಒಟ್ಟೊಟ್ಟಿಗೆ ಸಾಗುತ್ತವೆ.ಆದ್ದರಿಂದಾಗಿ ಸರ್ಕಾರದ ಮಧ್ಯಪ್ರವೇಶ ಅವಶ್ಯವೆನಿಸುತ್ತದೆ. ಪೈಪೋಟಿಯ ಟೀಕೆ: ಬ್ಲಾಂಕ್ ಬಂಡವಾಳಶಾಹಿ ಪದ್ದತಿ ಮತ್ತು ಪೈಪೋಟಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದನು.ಬಡವರ ಶೋಷಣೆ,ಶ್ರೀಮಂತರ ಅಟ್ಟಹಾಸ, ನೈತಿಕ ಅಧಃಪತನ,ಆರ್ಥಿಕ ಬಿಕ್ಕಟ್ಟು ಮತ್ತು ಅಪರಾದಗಳನ್ನು ಹುಟ್ಟು ಹಾಕುವುದೇ ಈ ಪೈಪೋಟಿ ವ್ಯವಸ್ಥೆ.ಪೈಪೋಟಿಯುತ ಉತ್ಪಾದನೆಯ ಕಾರಣದಿಂದಾಗಿ ಕೂಲಿ ಕಡಿಮೆಗೊಳ್ಳುತ್ತದೆ ಹಾಗು ಬಡತನ ಹೆಚ್ಚುತ್ತದೆ.ಈ ಬಡತನವು ಅಪರಾಧಗಳಿಗೆ ದಾರಿಯಾಗುತ್ತದೆ.ಆದ್ದರಿಂದ ಲೂಯಿಸ್ ಬ್ಲಾಂಕ್ ಪ್ರಕಾರ ಈ ಎಲ್ಲ ಆರ್ಥಿಕ ಅನಿಷ್ಟಗಳಿಗೆ ಏಕೈಕ ಮದ್ದು ಎಂದರೆ ಪೈಪೋಟಿಯನ್ನು ರದ್ದುಪಡಿಸುವುದು ಮತ್ತು ಸಂಘ ತತ್ವದ ಆಧಾರದ ಮೇಲೆ ಹೊಸ ಸಾಮಾಜಿಕ ಜೀವನವನ್ನು ಕಟ್ಟುವುದು.
ಸಾಮಾಜಿಕ ಕಾರ್ಯಾಗಾರಗಳು
ಬದಲಾಯಿಸಿಹೊಸ ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕೆ ಮತ್ತು ಪ್ರತ್ಯೇಕ ಕೈಗಾರಿಕೆಗಳಲ್ಲಿ ಸಮಾಜವಾದದ ಅಭಿವೃದ್ದಿಗಾಗಿ ಬ್ಲಾಂಕ್ ಸಾಮಾಜಿಕ ಅಥವ ರಾಷ್ಟ್ರೀಯ ಕಾರ್ಯಾಗಾರಗಳ ಸ್ಥಾಪನೆಗೆ ಕರೆಕೊಟ್ಟನು.ಅವನ ಪ್ರಕಾರ ಒಂದು ನಿರ್ದಿಷ್ಟ ವ್ಯಾಪಾರ ಅಥವಾ ಕೈಗಾರಿಕೆಯಲ್ಲಿ ಸಾಮಾಜಿಕ ಕಾರ್ಯಾಗಾರವನ್ನು ಸ್ಥಾಪಿಸಿ ಇಲ್ಲಿರುವ ಜನರು ಪರಸ್ಪರ ಸಹಕರಿಸುವಂತೆ ಮಾಡಬೇಕು.
ಬಂಡವಾಳಶಾಹಿ
ಬದಲಾಯಿಸಿಇದಕ್ಕೆ ಅಗತ್ಯವಿರುವ ಆರಂಭಿಕ ಬಂಡವಾಳವನ್ನು ಸರ್ಕಾರ ಕೊಡಬೇಕು ಹಾಗು ಈ ಬಂಡವಾಳಕ್ಕೆ ಸೂಕ್ತ ಬಡ್ಡಿಯನ್ನು ನೀಡಲಾಗುತ್ತದೆ.ಎಲ್ಲ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು.ಈ ಸಾಮಾಜಿಕ ಕಾರ್ಯಾಗಾರಗಳ ಆಡಳಿತ ಪ್ರಜಾಪ್ರಭುತ್ವ ತತ್ವದ ಆಧಾರ ಹೊಂದಿರಬೇಕು.ಇಂತಹ ಉತ್ಪಾದಕರ ಸಂಘಟನೆಗಳು ತಮ್ಮದಕ್ಷ ಪೈಪೋಟಿ ಸಾಮರ್ಥ್ಯದಿಂದ ಬಂಡವಾಳಶಾಹಿ ಸಂಘಟನೆಗಳನ್ನು ಹೊರದಬ್ಬುತ್ತವೆ.ಬ್ಲಾಂಕ್ ಪ್ರಕಾರ ಪ್ರಸ್ತುತ ವ್ಯವಸ್ಥೆಯನ್ನು ಇನ್ನು ಉತ್ತಮ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಸರ್ಕಾರದ ಮಧ್ಯಪ್ರವೇಶ ಅತ್ಯಗತ್ಯವೆನಿಸುತ್ತದೆ.ಬ್ಲಾಂಕ್ ನ ಆದರ್ಶ ವ್ಯವಸ್ಥೆಯಲ್ಲಿ ಜನರಿಗೆ ಅವರವರ ಅಗತ್ಯಗಳಿಗೆ ಅನುಸಾರವಾಗಿ ಪ್ರತಿಫಲವನ್ನು ನೀಡಲಾಗುತ್ತದೆಯೇ ಹೊರತು ಉತ್ಪಾದಕತೆ ಅಥವಾ ಸೇವೆಯ ಆಧಾರದಲ್ಲಲ್ಲ.ಜನರಿಗೆ ಕೆಲಸದ ಹಕ್ಕನ್ನು ಕೊಡಲಾಗಿರುತ್ತದೆ ಮತ್ತು ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಉದ್ದೇಶದಿಂದ ರಾಷ್ಟ್ರೀಯ ಕಾರ್ಯಾಗಾರಗಳನ್ನು ಸಂಘಟಿಸುತ್ತದೆ.ವ್ಯಕ್ತಿವಾದ,ಪೈಪೋಟಿ ಮತ್ತು
ದೇಶಭ್ರಷ್ಟತೆ
ಬದಲಾಯಿಸಿಲೂಯಿಸ್ ಬ್ಲಾಂಕ್ ಬ್ರಿಟನ್ ನಲ್ಲಿ ಇದ್ದ ಸಮಯದಲ್ಲಿ ಅವರು ವಿವಿದ ಸಂಗ್ರಹಣೆಗಳ ವಸ್ತುಗಳನ್ನು ಕ್ರಾಂತಿಗಳ ಸಮಯದಲ್ಲಿ ಬ್ರಿಟಿಷ್ ಮ್ಯೂಸಿಯಂನಲ್ಲಿ ಹಿಸ್ಟೋಯಿರೆ ಡೇ ಲ ರೆವೊಲ್ಯೂಷನ್ ಫ್ರಾಂಚೈಸ್ ೧೨ ಪರಿಮಾನವನ್ನು ಮುಗಿಸಿದ್ದರು. ಖಾಸಗಿ ಆಸ್ತಿಗಳನ್ನು ರದ್ದು ಪಡಿಸುವುದು ಬ್ಲಾಂಕನ ಗುರಿಯಾಗಿತ್ತು.ಬ್ಲಾಂಕ್ ಉಳಿತಾಯವನ್ನು ಸ್ವಾರ್ಥತೆಯ ಪರಮಾವಧಿ ಎಂದು ತಿರಸ್ಕರಿಸುತ್ತಾನೆ. ಹೀಗೆ ಲೂಯಿಸ್ ಬ್ಲಾಂಕ್ ಸುಧಾರಣೆಯ ಭಾರವನ್ನು ಸರ್ಕಾರದ ಹೆಗಲ ಮೇಲೆ ಹೇರಿದ ಪ್ರಥಮ ಸಮಾಜವಾದಿ.ಅವನ ಆರ್ಥಿಕ ಅಭಿಪ್ರಾಯಗಳಲ್ಲಿ ನಾವು ಕೆಲ ಆಧುನಿಕ ಅಂಶಗಳನ್ನ್ಯ್ ಕಾಣುವುದು ಸಾಧ್ಯವಿದೆ.ಅವನು ಯಾವುದೇ ಹಿಂಸೆ ಅಥವಾ ರಕ್ತಪಾತವಿಲ್ಲದೆ ಪ್ರಸ್ತುತ ಸಮಾಜವನ್ನು ಪರಿವರ್ತಿಸುವ ಗುರಿ ಹೊಂದಿದ್ದ.ಅವ್ನು ಒಬ್ಬ ಸೌಮ್ಯ ಸಮಾಜವಾದಿ ಎಂದರೆ ತಪ್ಪಾಗಲಾರದು., [೧]