ಲುಂಗಿ
ಲುಂಗಿಯು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ಉಡುಪು. ಇದನ್ನು ಸೊಂಟದ ಸುತ್ತ ಸುತ್ತಿಕೊಳ್ಳಲಾಗುತ್ತದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಕಂಬೋಡಿಯಾ, ಮ್ಯಾನ್ಮಾರ್, ಥೈಲಂಡ್‍ಗಳಲ್ಲಿ ಜನಪ್ರಿಯವಾಗಿದೆ. ವಿಶೇಷವಾಗಿ ಸೆಕೆ ಮತ್ತು ಆರ್ದ್ರತೆಯು ಪ್ಯಾಂಟ್‍ಗಳಿಗೆ ಅಹಿತಕರ ಹವೆಯನ್ನು ಸೃಷ್ಟಿಸುವ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ.
ಬಳಕೆ
ಬದಲಾಯಿಸಿಸ್ಥಳೀಯ ಸಂಪ್ರದಾಯವನ್ನು ಅವಲಂಬಿಸಿ, ಪುರುಷರು ಮತ್ತು/ಅಥವಾ ಸ್ತ್ರೀಯರು (ಅಪರೂಪವಾಗಿ) ಲುಂಗಿಗಳನ್ನು ಧರಿಸಬಹುದು. ಇವನ್ನು ವಿವಿಧ ರೀತಿಗಳಲ್ಲಿ ಕಟ್ಟಿಕೊಳ್ಳಲಾಗುತ್ತದೆ, ಮತ್ತು ಮಾಮೂಲಿನ ದೈನಂದಿನ ಜೀವನದಿಂದ ಹಿಡಿದು ಸಂಕೀರ್ಣವಾದ ವಿವಾಹ ಸಮಾರಂಭಗಳವರೆಗಿನ ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಳಸಬಹುದು. ದೈನಂದಿನ ಉದ್ದೇಶಗಳಿಗಾಗಿ, ಸರಳ "ಎರಡು ತಿರುಚಿನ" ಗಂಟು ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಲುಂಗಿಯ ಮೇಲಿನ ಬದಿಯ ಎರಡು ಬಿಂದುಗಳನ್ನು ಒಟ್ಟಾಗಿ ತಂದು ಎರಡು ಬಾರಿ ತಿರುಚಲಾಗುತ್ತದೆ, ಮತ್ತು ತುದಿಗಳನ್ನು ಸೊಂಟಕ್ಕೆ ಸಿಕ್ಕಿಸಲಾಗುತ್ತದೆ.