ನಮ್ಮ ನಾಡಿನ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್, ಕೋಲಾರದ ಪುಟ್ಟಪ್ಪ , ರಾಮ ಗೋಪಾಲ್, ಬಾಲಸುಬ್ರಹ್ಮಣ್ಯ ಪಿಳ್ಳೆ ,ಮೈಲಾರದ ಗೌರಿ ಅಮ್ಮಾಳ್, ಮೀನಾಕ್ಷಿ ಸುಂದರಂ ಪಿಳ್ಳೈ, ಮುತ್ತಯ್ಯ ಪಿಳ್ಳೆ, ಮತ್ತು ಕಿಟ್ಟಪ್ಪ ಪಿಳ್ಳೆ , ಯವರ ಬಳಿ ಭರತನಾಟ್ಯ ಶಿಕ್ಷಣಗಳಿಸಿ ಈ ಸಿರಿಕಲೆಯಯನ್ನು ಮೈಗೂಡಿಸಿಕೊಂಡಿದ್ದಾರೆ. ಕೆ. ಪಿ. ಕಿಟ್ಟಪ್ಪಪಿಳ್ಳೆಯವರ ಬಳಿ ಭರತನಾಟ್ಯ ಶಿಕ್ಷಣ ಪಡೆದು, ಕಲೆಯ ಅಂತರಂಗ-ಬಹಿರಂಗ ಅರಿತಿದ್ದಾರೆ. 'ಭೌರಿ ಪ್ರಸಾದ್,' ರಿಂದ ಕಥಕ್ ನೃತ್ಯವನ್ನೂ,, 'ಚೆಂದೂ ಪಣಿಕ್ಕರ್', ಅವರಿಂದ ಕಥಕ್ಕಳಿ ನೃತ್ಯವನ್ನೂ, 'ದೇವಿಪ್ರಸಾದ್,' ರಿಂದ ಓಡಿಸ್ಸಿ ನೃತ್ಯವನ್ನೂ,, ಅಭ್ಯಾಸಮಾಡಿದ್ದಾರೆ. ಲೀಲಾ ರಾಮನಾಥನ್, ಪಂದನಲ್ಲೂರ್ ಎಮ್. ಗೋಪಾಲಕೃಷ್ಣರ ಜೊತೆಗೆ, ತಮ್ಮ ಬಹುಮುಖ ಪ್ರತಿಭೆಗಾಗಿ ದುಡಿದರು. ನೃತ್ಯ ಕೇವಲ ಸೃಜನಾತ್ಮಕ ಅಭಿವ್ಯಕ್ತಿಯಲ್ಲ; ಅದೊಂದು ಅನಂತದೊಂದಿಗೆ ಒಂದಾಗುವ ಕಲೆ, ಎಂಬ ಸಿದ್ದಾಂತದಲ್ಲಿ ಅಪಾರ ನಂಬಿಕೆ ಹೊಂದಿರುವ ನೃತ್ಯ ಕಲಾವಿದೆ ಶ್ರೀಮತಿ ಲೀಲಾ ರಾಮನಾಥನ್, ವಿಶ್ವದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಅಭಿನಯನೀಡಿದ್ದಾರೆ.

ವಿದ್ಯಾಭ್ಯಾಸ, ನೃತ್ಯ ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳುಸಂಪಾದಿಸಿ

ಲೀಲಾರವರು, ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಭಾಷೆಯಲ್ಲಿ ಎಮ್. ಎ. (ಆನರ್ಸ್) ಪದವಿ ಗಳಿಸಿರುತ್ತಾರೆ. ಅನೇಕ ನೃತ್ಯ ರೂಪಕಗಳನ್ನೂ ನಿರೂಪಿಸಿದ್ದಾರೆ. ನೃತ್ಯ ಕಲೆಯ ಬಗ್ಗೆ ಆಗಾಗ ಅತ್ಯುತ್ತಮ ಗುಣಮಟ್ಟದ ಲೇಖನಗಳನ್ನು ಇಂಗ್ಲೀಷ್ ದೈನಿಕದಲ್ಲಿ ಬರೆಯುತ್ತಿದ್ದಾರೆ. ಬಹಳ ವರ್ಷಗಳಿಂದ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯಲ್ಲಿ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ 'ಮೀನಾಕ್ಷಿ ಸುಂದರಂ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ', ಯನ್ನು ಸ್ಥಾಪಿಸಿ, ಅತ್ಯುತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೃತ್ಯಕಲೆಯಲ್ಲಿ ಒಳ್ಳೆಯ ತರಬೇತಿಯನ್ನು ಕೊಡಲಾಗುತ್ತಿದೆ.

ಗೌರವ, ಪ್ರಶಸ್ತಿಗಳುಸಂಪಾದಿಸಿ

  • ೧೯೮೮-೮೯ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • 'ಕರ್ನಾಟಕ ಕಲಾ ತಿಲಕ' ಬಿರುದನ್ನು ನೀಡಿ ಗೌರವಿಸಲಾಗಿದೆ.

'ನೂಪುರ ಕಲಾ ಕಲಹಂಸ', ಬಿರುದು, ಮತ್ತು ಜೀವಮಾನ ಸಾಧನೆಯ ಪ್ರಶಸ್ತಿಸಂಪಾದಿಸಿ

'ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿ,' ಹಾಗೂ 'ಬೆಂಗಳೂರಿನ ಭಾರತೀಯ ವಿದ್ಯಾಭವನ, ಜಂಟಿಯಾಗಿ ಆಯೋಜಿಸಿದ, 'ಭಾರತೀಯ ನೃತ್ಯ ಸಂಶೋಧನ ಸಮ್ಮೇಳನ ೨೦೧೩ ರಲ್ಲಿ, 'ಖಿಂಚಾ ಸಭಾಂಗಣ'ದಲ್ಲಿ ಜರುಗಿತು. ಮೊಟ್ಟಮೊದಲ ನೃತ್ಯ ಸಂಶೋಧನ ನಿಯತಕಾಲಿಕೆ, 'ನೂಪುರಾಗಮನ' ದ ಅನಾವರಣವನ್ನು ಕರ್ನಾಟಕ ನೃತ್ಯಕಲಾವಿದರ ವಿಶೇಷ ಸಂಶೋಧನ ಸಮೀಕ್ಷೆಗಳನ್ನೊಳಗೊಂಡ 'ನೂಪುರ ಭ್ರಮರಿ ವಿಶೇಷ ಸಂಚಿಕೆ' ಮತ್ತು ಒಂದು ಪರಿಷ್ಕೃತ ಆವೃತ್ತಿಯ ಇಂಟರ್ನೆಟ್ ತಾಣದ [೧] ಲೋಕಾರ್ಪಣ ಕಾರ್ಯಕ್ರಮ ನಡೆಯಿತು. ಡಾ. ಎಚ್. ಎಸ್. ಗೋಪಾಲ್ ರಾವ್ ಸಮ್ಮೇಳದ ಅಧ್ಯಕ್ಷರು. ಹೆಸರಾಂತ ಸಂಶೋಧಕ, ಕನ್ನಡ ವಿದ್ವಾಂಸ, ಟಿ. ವಿ. ವೆಂಕಟಾಚಲಶಾಸ್ತ್ರಿಯವರು, ಸಂಶೋಧನೆಯ ಅಗತ್ಯವನ್ನು ಮನದಟ್ಟುಮಾಡಿದರು. ಈ ಸುಸಂದರ್ಭದಲ್ಲಿ ಹಿರಿಯ ನೃತ್ಯ ಕಲಾವಿದೆ, ವಿದುಷಿ, 'ಲೀಲಾ ರಾಮನಾಥನ್' ಗೆ 'ನೂಪುರ ಕಲಾ ಕಲಾಹಂಸ' ಬಿರುದನ್ನು ಮತ್ತು 'ಜೀವಮಾನ ಸಾಧನೆಯ ಪ್ರಶಸ್ತಿ'ಯನ್ನೂ ನೀಡಿ ಗೌರವಿಸಲಾಯಿತು. 'ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ'ರಿಗೆ 'ವರ್ಷದ ಶ್ರೇಷ್ಠ ನೃತ್ಯವಿಮರ್ಶೆ ಪ್ರಶಸ್ತಿ' ಯನ್ನು `ವಿಮರ್ಶಾ ವಾಙ್ಮಯಿ', ಬಿರುದಿನೊಂದಿಗೆ ಪ್ರದಾನಮಾಡಲಾಯಿತು. ನಂತರ ಕಲಾವಿದರಿಂದ ಸಂಶೋಧನಾಧಾರಿತ ನಾಟ್ಯಶಾಸ್ತ್ರ, ಚಿತ್ರ ಪೂರ್ವರಂಗ ಹಾಗೂ 'ನವರಸ ಕೃಷ್ಣ ನೃತ್ಯ ' ಪ್ರಸ್ತುತಗೊಳಿಸಲಾಯಿತು.

ಆಧಾರಸಂಪಾದಿಸಿ