ಲೀಲಾ ಪೂನಾವಾಲ

ಭಾರತೀಯ ಉದ್ಯಮಿ ಮತ್ತು ಮಾನವತಾವಾದಿ

ಲೀಲಾ ಪೂನಾವಾಲ ಒಬ್ಬ ಭಾರತೀಯ ಉದ್ಯಮಿ ಮತ್ತು ಮಾನವತಾವಾದಿ. ಇವರು ಲೀಲಾ ಫೌಂಡೇಷನಿನ ಸ್ಥಾಪಕರು. ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಪದವಿ ಪಡೆದ ಪ್ರಥಮ ಭಾರತೀಯ ಮಹಿಳೆ. ಅಲ್ಫಾ ಲಾವಲ್ ಕಂಪೆನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.[]

ಲೀಲಾ ಪೂನಾವಾಲ ಅಥವಾ ಲೀಲಾ ತಡನಿಯವರು ಸೆಪ್ಟಂಬರ್ ೧೬, ೧೯೪೪ ರಲ್ಲಿ ಹೈದರಾಬಾದಿನ ಸಿಂಧ್ ಪ್ರಾಂತ್ಯದಲ್ಲಿ ಜನಿಸಿದರು. ಲೀಲಾರವರು ಸಿಂಧಿ ಕುಟುಂಬದ ೫ ಜನ ಮಕ್ಕಳಲ್ಲಿ ಒಬ್ಬರಾಗಿದ್ದರು. ತಮ್ಮ ಮೂರನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು.

ಅದು ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಹೈದರಾಬಾದ್ ವಿಭಜನೆನೆಯ ಸಂದರ್ಭ ಅವರ ಕುಟುಂಬ ಪುಣೆಗೆ ವಲಸೆ ಬಂದಿತು. ಲೀಲಾರವರು ಪುಣೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಹೈದರಾಬಾದಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದರು. ಅಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಆಯ್ದುಕೊಂಡು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಆ ಮೂಲಕ ಲೀಲಾ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಭಾರತದ ಪ್ರಥಮ ಮಹಿಳೆ ಎಣಿಸಿದ್ದಾರೆ. ಮುಂದೆ ರಶ್ಟನ್ ಆಂಡ್ ಹಾರ್ನ್ಸ್ ಬೈ ನಲ್ಲಿ ತಮ್ಮ ವ್ರತ್ತಿ ಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಫಿರೋಜ್ ಪೂನಾವಾಲರ ಪರಿಚಯವಾಗುತ್ತದೆ. ಶೀಘ್ರದಲ್ಲೇ ಲೀಲಾರಿಗೆ ಫಿರೋಜ್ ಜೊತೆ ವಿವಾಹವಾಗುತ್ತದೆ. ಕಂಪೆನಿಯ ನಿಯಮದ ಪ್ರಕಾರ ಪತಿ ಪತ್ನಿ ಒಂದೇ ಕಡೆ ಕೆಲಸ ಮಾಡುವಂತಿರಲಿಲ್ಲ. ಹೀಗಾಗಿ ಲೀಲಾ ಅಲ್ಫಾ ಲಾವಲ್ ಎನ್ನುವ ಒಂದು ಅಂತರಾಷ್ಟ್ರೀಯ ಸ್ವೀಡಿಶ್ ಕಂಪೆನಿ ಸೇರಿಕೊಳ್ಳುತ್ತಾರೆ. ೨ ದಶಕಗಳ ದೀರ್ಘ ಪರಿಶ್ರಮದ ನಂತರ ಅದರ ಸಿ.ಇ.ಒ ಆಗಿ ನೇಮಕಗೊಳ್ಳುತ್ತಾರೆ. ಆ ಮೂಲಕ ಸಿ.ಇ.ಒ ಆಗಿ ಆಯ್ಕೆಗೊಂಡ ಮೊದಲ ಮಹಿಳೆ ಎಣಿಸಿಕೊಂಡಿದ್ದಾರೆ. ಅವರ ನಿರ್ದೇಶನದ ಅವಧಿಯಲ್ಲಿ ಅಲ್ಫಾ ಲಾವಲ್ ಕಂಪೆನಿಯ ಒಟ್ಟು ವಹಿವಾಟು ೫೦೦ ಮಿಲಿಯನ್ ನಿಂದ ೨.೫ ಬಿಲಿಯನ್ ವರೆಗೆ ಹೆಚ್ಚಿತು. ಪ್ರಸ್ತುತ ಲೀಲಾರವರು ಪುಣೆಯಲ್ಲಿ ತಮ್ಮ ಪತಿಯೊಂದಿಗೆ ವಾಸವಾಗಿದ್ದಾರೆ.

ಲೀಲಾ ಫೌಂಡೇಷನ್

ಬದಲಾಯಿಸಿ

೧೯೯೬ರಲ್ಲಿ ಪೂನಾವಾಲ ದಂಪತಿಗಳು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.ಲೀಲಾರು ತಮ್ಮ ೫೩ನೆಯ ವರ್ಷದ ಹುಟ್ಟುಹಬ್ಬಕ್ಕಾಗಿ ಉಡುಗೊರೆಯ ರೂಪದಲ್ಲಿ ಬಂದಿದ್ದ ಹಣವನ್ನು ೨೦ ಜನ ಹೆಣ್ಣು ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕಾಗಿ ತೊಡಗಿಸುವ ಮೂಲಕ ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಪುಣೆ,ಅಮರಾವತಿ ಮತ್ತು ವಾರ್ದಾ ಜಿಲ್ಲೆಗಳಿಂದ ವಿಧ್ಯಾರ್ಥಿನಿಯರನ್ನು ಉನ್ನತ ವಿಧ್ಯಾಭ್ಯಾಸಕ್ಕಾಗಿ ಆಯ್ದುಕೊಳ್ಳುತ್ತದೆ.[]

ಇದರ ೨೦ ವರ್ಷದ ಇತಿಹಾಸದಲ್ಲಿ ಈ ಸಂಸ್ಥೆ ೮೨೨೫ ವಿಧ್ಯಾರ್ಥಿನಿಯರ ಉನ್ನತ ವಿಧ್ಯಾಭ್ಯಾಸಕ್ಕೆ ನೆರವಾಗಿದೆ. ಪೂನಾವಾಲರ ಪತಿಯೂ ಅವರಿಗೆ ಈ ಸಂಸ್ಥೆಯನ್ನು ನಿರ್ವಹಿಸುವಲ್ಲಿ ನೆರವಾಗುತ್ತಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. http://www.theweekendleader.com/Relationship/970/a-love-story.html
  2. https://economictimes.indiatimes.com/magazines/corporate-dossier/how-alfa-lavals-lila-poonawalla-is-leveraging-lessons-from-career-to-promote-higher-education-for-underprivileged-girls/articleshow/34829121.cms?intenttarget=no