ಲಿಂಗದಹಳ್ಳಿ ಚೇತನ್ ಕುಮಾರ್

ಲಿಂಗದಹಳ್ಳಿ ಚೇತನ್ ಕುಮಾರ್ ಹುಟ್ಟಿದ್ದು ತುಮಕೂರು ಸಿರಾ ತಾಲ್ಲೂಕಿನ ಲಿಂಗದಹಳ್ಳಿ ಎಂಬ ಕುಗ್ರಾಮದಲ್ಲಿ. ಕಡು ಬಡತನದಲ್ಲಿ ಹುಟ್ಟಿ ವಿದ್ಯಾಭ್ಯಾಸದ ಸಲುವಾಗಿ ಬಿ.ಸತ್ಯನಾರಾಯಣ ರವರ ಸಹಕಾರದೊಂದಿಗೆ ಹುಯಿಲ್‌ದೊರೆ ವಸತಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ. ಸಿರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ. ಬೆಂಗಳುರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದರು.

ಲಿಂಗದಹಳ್ಳಿ ಚೇತನ್ ಕುಮಾರ್
ಲಿಂಗದಹಳ್ಳಿ ಚೇತನ್ ಕುಮಾರ್
Born
ಸಿರಾ
Citizenshipಭಾರತೀಯ
Occupation(s)ಪತ್ರಕರ್ತ, ಕವಿ, ಬರಹಗಾರ, ಪ್ರಕಾಶಕ, ಸಾಮಾಜಿಕ ಹೋರಾಟಗಾರ
Known forಸ್ಪರ್ಧಾ ಗೈಡ್- ಸ್ಪರ್ಧಾತ್ಮಕ ಪರೀಕ್ಷೆಗಳ ಮಾಸ ಪತ್ರಿಕೆ
Movementವಿದ್ಯಾರ್ಥಿ ಕ್ರೀಯಾ ಪರಿಷದ್
Partnerಮಾನಸ ಕೆ ಪಿ
Parents
  • ಶ್ರೀನಿವಾಸಯ್ಯ ಟಿ (father)
  • ಚಂದ್ರಮ್ಮ (mother)
Awardsಕನ್ನಡ ರಾಜ್ಯೋತ್ಸವ ಪ್ರಶಸ್ತಿ- ತುಮಕೂರು ಜಿಲ್ಲಾ

ಸ್ಪರ್ಧಾಗೈಡ್ ಪತ್ರಿಕೆ

ಬದಲಾಯಿಸಿ
 
ಸ್ಪರ್ಧಾಗೈಡ್ ಪತ್ರಿಕೆ

ಶೈಕ್ಷಣಿಕ ದೃಷ್ಠಿಯಿಂದ ಸ್ಪರ್ಧಾಗೈಡ್ ಪತ್ರಿಕೆ ಪ್ರಾರಂಭಿಸಿ ಸಾವಿರಾರು ಐಎಎಸ್, ಕೆಎಎಸ್, ಎಸ್‌ಡಿಎ, ಎಫ್‌ಡಿಎ ಅಭ್ಯರ್ಥಿಗಳಿಗೆ ಸ್ಪರ್ಧಾಗೈಡ್ ಪತ್ರಿಕೆಯ ಮೂಲಕ ಚಿರಪರಿಚಿತರಾವರು. ಉದ್ಯೋಗ ಬಯಸಿದ ಸಾವಿರಾರು ಅಭ್ಯರ್ಥೀಗಳ ಭವಿಷ್ಯಕ್ಕೆ ದಾರಿ ದೀಪವಾದರು.

ಸಾಂಸ್ಕೃತಿಕ, ಕವಿ, ಸಾಹಿತಿ, ಪತ್ರಿಕೋದ್ಯಮಿ

ಬದಲಾಯಿಸಿ

ಸಾಂಸ್ಕೃತಿಕವಾಗಿ ಕವಿ, ಸಾಹಿತಿ, ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು "ಮೈಮೇಲಿನ ಮುಳ್ಳುಗಳು" ಕವನ ಸಂಕಲನ, "ಕೃಷಿ ಹೋರಾಟ’ ಸಂಪಾದಿತ ಕೃತಿ ಮತ್ತು ‘ಗೋಲಿಬಾರ್ ಗರ‍್ನಮೆಂಟ್‌ನಲ್ಲಿ ರೈತರ ಕಗ್ಗೊಲೆ’ ಎಂಬ ಪುಸ್ತಕಗಳನ್ನು ಹೊರತಂದಿದ್ದಾರೆ.

ಸೇವೆ

  • ಡಾ. ನಟರಾಜ್ ಹುಳಿಯಾರ್ ರವರ ‘ಕನ್ನಡ ಟೈಮ್ಸ್’ ವಾರ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ.
  • ಸಿನಿಮಾ ನಿರ್ದೇಶಕ ಎನ್.ಆರ್. ನಂಜುಡೇಗೌಡರ ಸಂಪಾದಕತ್ವದ ‘ಚಿಲಿಪಿಲಿ ಮಕ್ಕಳ ಪತ್ರಿಕೆ’ಯಲ್ಲಿ ಬರಹಗಾರನಾಗಿ ಸೇವೆ
  • ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಸಂಪಾದಕತ್ವದ ‘ರೈತ ಚಳವಳಿ’ ಪತ್ರಿಕೆಯಲ್ಲಿ ಪ್ರಸರಣಾಧಿಕಾರಿಯಾಗಿ ಸೇವೆ.

ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವೆ

ಹಲವು ದಶಕಗಳಿಂದ ನೆಲದವ್ವ ಪ್ರಕಾಶನದ ಮೂಲಕ ಪುಸ್ತಕಗಳ ಪ್ರಕಟಣೆ ಮತ್ತು ನೆಲದವ್ವ ಸಾಂಸ್ಕೃತಿಕ ಟ್ರಸ್ಟ್ ಮೂಲಕ ಸಾಹಿತ್ಯ ಸೇವೆ

ಪಡೆದ ಪ್ರಶಸ್ತಿಗಳು

  1. 2000ನೇ ಸಾಲಿನ ರಾಮಕೃಷ್ಣ-ವಿವೇಕಾನಂದ ಆಶ್ರಮ 'ಆದರ್ಶ ವಿದ್ಯಾರ್ಥಿ ಪರಿಶೋಧನಾ ಪ್ರಶಸ್ತಿ'
  2. ಸಿರಾ ತಾಲ್ಲೂಕು ಸಾಹಿತ್ಯ ಪರಿಷದ್ 2005ರ ಜಿಲ್ಲಾ ಮಟ್ಟ ಕವಿಗೋಷ್ಠಿಗೆ ಆಯ್ಕೆ
  3. ಶ್ರೀ ಬಾಲಗಂಗಾಧರನಾಥ ಸ್ವಾಮಿಯ 2008ರ ಅಂತರರಾಷ್ಟಿçÃಯ ಕವಿಗೋಷ್ಠಿಯ ಅಭಿನಂದನಾ ಪ್ರಶಸ್ತಿ
  4. ಕುಪ್ಪಳ್ಳಿಯಲ್ಲಿ ನಡೆದ ಕುವೆಂಪು ಶತಮಾನೋತ್ಸವದ ಕಾನೂರು-75ರ ರಾಷ್ಟೀಯ ಕಾರ್ಯಗಾರಕ್ಕೆ ಸಾಹಿತ್ಯ ಅಕಾಡೆಮಿಯಿಂದ 2012ರಲ್ಲಿ ಆಯ್ಕೆ

ಯವ ಜನತೆಗಾಗಿ

ಬದಲಾಯಿಸಿ

2012ರಲ್ಲಿ All India Radioದಲ್ಲಿ ಯುವಜನತೆ ಹಾಗೂ ಸ್ಪರ್ಧಾತ್ಮಕ ಪರಿಕ್ಷೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

ಪುಸ್ತಕಗಳು

ಪ್ರಕಟಿತ ಸಂಕಲನ : ಮೈಮೇಲಿನ ಮುಳ್ಳುಗಳು

2007ರ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದ ಕೃತಿ

ಸಂಪಾದಿತ ಕೃತಿ : ಗೋಲಿಬಾರ್ ಗರ‍್ಮಮೆಂಡ್ನಲ್ಲಿ ರೈತರ ಕಗ್ಗೊಲೆ

ಪುಸ್ತಕ ಪ್ರಕಟಣೆ-2008, ಹಾವೇರಿ ರೈತರ ಹತ್ಯೆ ಕುರಿತ ಪುಸ್ತಕ

ವ್ಯಕ್ತಿ ಪರಿಚಯ ಕೃತಿ : ದಿ. ಮಾಜಿ ಶಾಸಕ ಬಿ. ಸತ್ಯನಾರಾಯಣ ಕುರಿತ 'ಜನನಾಯಕ' ಕೃತಿ

ಕವನ ಸಂಕಲನ : ನೀಲಿ ಮರದ ಹೂ

ಉಲ್ಲೇಖಗಳು:

ಬದಲಾಯಿಸಿ
  1. Spardha Guide Magzine : https://spardhaguide.wordpress.com/