ಎಲ್. ಕೆ. ಅಡ್ವಾಣಿ
ಭಾರತದ ಉಪ ಪ್ರಧಾನ ಮಂತ್ರಿ, ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
(ಲಾಲ್ ಕೃಷ್ಣ ಅಡ್ವಾಣಿ ಇಂದ ಪುನರ್ನಿರ್ದೇಶಿತ)
ಲಾಲ್ ಕಿಶನ್ಛಂದ್ ಅಡ್ವಾಣಿ, ಭಾರತ ದೇಶದ ಒಬ್ಬ ಅನುಭವಿ ರಾಜಕಾರಣಿ. ಲಾಲ್ ಕೃಷ್ಣ ಅಡ್ವಾಣಿ ಎಂದು ಜನಪ್ರಿಯರಾಗಿರುವ ಇವರು, ೮ ನವೆಂಬರ್ ೧೯೨೭ರಂದು ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್ ನಲ್ಲಿ ಜನಿಸಿದರು. ಇವರು ಸ್ವತಂತ್ರ್ಯ ಭಾರತದ ೭ನೇ ಉಪ ಪ್ರಧಾನ ಮಂತ್ರಿಗಳಾಗಿ ೨೦೦೨ರಿಂದ ೨೦೦೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಡ್ವಾಣಿರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತ ರಾಜಕೀಯಕ್ಕೆ ಧುಮುಕಿದರು.
ಬಾರತ ರತ್ನ ಎಲ್. ಕೆ. ಅಡ್ವಾಣಿ | |
---|---|
ಅಧಿಕಾರ ಅವಧಿ ೫-೨-೨00೨ – ೨೨-೫- ೨00೪ |
ಎಲ್.ಕೆ.ಅಡ್ವಾಣಿಯವರ ರಾಜನೀತಿ
ಬದಲಾಯಿಸಿ- (ಮುಖ್ಯಭಾಗದ ಕನ್ನಡ ಅನುವಾದ)
- ಅಡ್ವಾನಿಯವರು ತಮ್ಮ ಜೀವನದಲ್ಲಿ ಅನುಸರಿಸಿದ ರಾಜನೀತಿಯನ್ನು ಬಿಜೆಪಿಯ ಸಂಸ್ಥಾಪನಾ ದಿನವಾದ ಏಪ್ರಿಲ್ ೬ ರ ದಿನ ನೆನಪಿಸಿಸಕೊಂಡು ಬರೆದಿದ್ದಾರೆ. ಅವರು ಬರೆದ ಬ್ಲಾಗನ್ನು ಅನೇಕ ಇಂಗ್ಲಿಷ್ ಮತ್ತು ಕನ್ನಡ ಹಾಗೂ ಇತರ ಪತ್ರಿಕೆಗಳು ಯಥಾವತ್ (ಅದರ ನಕಲನ್ನು) ಪ್ರಕಟಿಸಿವೆ. (ಆದ್ದರಿಂದ ಅದು ಸಾರ್ವಜನಿಕರಿಗೆ ಬಿಡುಗಡೆಯಾಗಿದ್ದು ಕಾಪಿರೈಟಿನಿಂದ ಮುಕ್ತವಾಗಿದೆ ಎಂದು ಭಾವಿಸಬಹುದು)
ಅದರ ಕೆಲವು ಭಾಗ ಮತ್ತು ಸಾರಾಂಶ ಹೀಗಿದೆ:
- ಏಪ್ರಿಲ್ 6 ಬಿಜೆಪಿಯ ಸಂಸ್ಥಾಪನಾ ದಿನವಾಗಿರುವುದರಿಂದ ಬಿಜೆಪಿಯಲ್ಲಿರುವ ನಾವೆಲ್ಲರೂ ಒಮ್ಮೆ ಹಿಂದೆ ತಿರುಗಿ ನೋಡಬೇಕಾಗಿದೆ. ಸಂಸ್ಥಾಪಕರಲ್ಲಿ ಒಬ್ಬನಾಗಿರುವ ನಾನು ನನ್ನ ಅಭಿಪ್ರಾಯಗಳನ್ನು ಭಾರತೀಯರೊಂದಿಗೆ ಅದರಲ್ಲೂ ವಿಶೇಷವಾಗಿ ನನ್ನ ಪಕ್ಷದ ಲಕ್ಷಾಂತರ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಪ್ರೀತಿ ಮತ್ತು ಅಗಾಧ ಗೌರವ ತೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಾವೆಲ್ಲ ಒಟ್ಟಾಗಿ ಪ್ರಜಾಸತ್ತೆ ವ್ಯವಸ್ಥೆಯನ್ನು ಬಲಪಡಿಸೋಣ. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳು.
- 14ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವ ಸಂಘ ಸೇರಿದ ನನಗೆ ಅಂದಿನಿಂದಲೂ ನನ್ನ ತಾಯಿನಾಡಿಗೆ ಸೇವೆ ಸಲ್ಲಿಸುವುದು ಉತ್ಸಾಹವಾಗಿತ್ತು. ಎಂದೂ ಬೇರ್ಪಡೆಯಾಗದೇ ನನ್ನ ಪಕ್ಷದೊಂದಿಗೆ 7 ದಶಕಗಳ ಕಾಲ ನನ್ನ ರಾಜಕೀಯ ಜೀವನ ನಡೆದುಕೊಂಡು ಬಂದಿದೆ. ಮೊದಲಿದ್ದ ಭಾರತೀಯ ಜನ ಸಂಘ ಹಾಗೂ ನಂತರ ಬದಲಾದ ಭಾರತೀಯ ಜನತಾ ಪಕ್ಷದ ಎರಡಕ್ಕೂ ನಾನು ಸಂಸ್ಥಾಪಕ ಸದಸ್ಯನಾಗಿದ್ದೇನೆ.
- ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ಸಂಪ್ರದಾಯದ ರಕ್ಷಣೆ ಎರಡೂ ಕೂಡ ಪಕ್ಷ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ. ಇದು ಬಿಜೆಪಿಯ ಹೆಗ್ಗುರುತು. ಭಾರತೀಯ ಪ್ರಜಾಪ್ರಭುತ್ವದ ಪ್ರಮುಖ ಅಂಶವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವೈವಿಧ್ಯೆತೆಯನ್ನು ಗೌರವಿಸುವುದು. ಪ್ರಾರಂಭದಿಂದಲೂ ನಮ್ಮ ಪಕ್ಷದ ಪರ ಯಾರಿಗೆ ಒಲವು ಇರುವುದಿಲ್ಲವೋ ಅವರನ್ನು ನಾವೆಂದೂ ಶತ್ರುಗಳೆಂದು ಅವರನ್ನು ಪರಿಗಣಿಸಲಿಲ್ಲ. ಅವರನ್ನು ಎದುರಾಳಿಗಳು ಎಂದಷ್ಟೇ ಭಾವಿಸಿದೆವು. ಭಾರತೀಯ ರಾಷ್ಟ್ರೀಯತೆಯ ಬಗ್ಗೆ ನಮಗಿರುವ ಕಲ್ಪನೆಯಂತೆ ನಮ್ಮ ಪಕ್ಷವನ್ನು ಯಾರು ವಿರೋಧಿಸುತ್ತಾರೋ ಅವರನ್ನು ರಾಷ್ಟ್ರ ವಿರೋಧಿ ಎಂದು ಎಂದಿಗೂ ಪರಿಗಣಿಸಬಾರದು. ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬ ನಾಗರಿಕನ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಡಿಯಲು ಪ್ರತಿಯೊಂದು ಪಕ್ಷವೂ ಬದ್ಧರಾಗಿರಬೇಕು. ಅದನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಮಾಧ್ಯಮಗಳು ಸೇರಿದಂತೆ ಎಲ್ಲಾ ಪ್ರಜಾಪ್ರಭುತ್ವದ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ, ನ್ಯಾಯ ಮತ್ತು ದೇಶದ ದೃಢತೆ ಹಾಗೂ ರಕ್ಷಣೆಗಾಗಿ ಒತ್ತಾಯಿಸುವಲ್ಲಿ ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿತ್ತು.(ಎಲ್.ಕೆ.ಅದ್ವಾನಿ)
- ತಮ್ಮದೇ ಬ್ಲಾಗಿನಲ್ಲಿ ಅವರು ಪಾಲಿಸಿದ ರಾಜನೀತಿಯನ್ನು ಬರೆದಿದ್ದಾರೆ:[೧]
ಪಕ್ಷದ ನೀತಿಯ ಬಗ್ಗೆ ಅಸಮಾಧಾನ
ಬದಲಾಯಿಸಿ- ೨೦೧೩ ರಲ್ಲಿ ಪಕ್ಷದ ನೀತಿಯ ಬಗ್ಗೆ ಅಸಮಾಧಾನಗೊಂಡು ಅಧ್ಯಕ್ಷ ರಾಜನಾಥ ಸಿಂಗ್‍ರಿಗೆ ಪಕ್ಷದ ಎಲ್ಲಾ ಪದಾಧಿಕಾರ ಸ್ಥಾನಗಳಾದ- ನ್ಯಾಶನಲ್ ಎಕ್ಷಿಕುಟಿವ್, ಪಾರ್ಲಿಮೆಂಟರಿ ಬೋರ್ಡ್, ಮತ್ತು ಚುನಾವಣಾ ಸಮಿತಿಗಳಿಗೆ ರಾಜಿನಾಮೆ ಸಲ್ಲಿಸಿದ್ದರು. [೨]