ಲವ್ಲಿನಾ ಬೊರ್ಗೊಹೈನ್
ಭಾರತೀಯ ಬಾಕ್ಸರ್
ಲವ್ಲಿನಾ ಬೊರ್ಗೊಹೈನ್ ರವರು ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಅವರು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್ (ವೆಲ್ಟರ್‌ವೈಟ್) ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು, ಒಲಿಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ.[೧][೨]
ವೈಯುಕ್ತಿಕ ಮಾಹಿತಿ | |
---|---|
ಜನನ | ಬರೋಮುಖಿಯಾ, ಗೋಲಘಾಟ, ಅಸ್ಸಾಂ, ಭಾರತ | ೧೨ ಡಿಸೆಂಬರ್ ೧೯೯೭
ಎತ್ತರ | ೧.೭೯ ಮೀ |
Sport | |
ದೇಶ | ಭಾರತ |
ಕ್ರೀಡೆ | ಬಾಕ್ಸಿಂಗ್ |
ಸ್ಪರ್ಧೆಗಳು(ಗಳು) | ೬೯ kg |
ಆರಂಭಿಕ ಜೀವನ
ಬದಲಾಯಿಸಿಲವ್ಲಿನಾ ಬೊರ್ಗೊಹೈನ್ ರವರು 2 ಅಕ್ಟೋಬರ್ 1997 ರಂದು ಜನಿಸಿದರು ಮತ್ತು ಅಸ್ಸಾಂನ ಗೋಲಘಾಟ್ ಜಿಲ್ಲೆಯವರು. ಆಕೆಯ ಪೋಷಕರು ಟಿಕೆನ್ ಮತ್ತು ಮಾಮೋನಿ ಬೊರ್ಗೊಹೈನ್.
ಸಾಧನೆಗಳು
ಬದಲಾಯಿಸಿ2020 ಟೋಕಿಯೊ ಒಲಿಂಪಿಕ್ಸ್
ಬದಲಾಯಿಸಿಅವರು ಟೋಕಿಯೊ ಒಲಿಂಪಿಕ್ಸ್ ಬಾಕ್ಸಿಂಗ್ (ವೆಲ್ಟರ್‌ವೈಟ್) ಪ್ರಾಥಮಿಕ ಸುತ್ತಿನಲ್ಲಿ ಜರ್ಮನ್ ಬಾಕ್ಸರ್ ನಡಿನ್ ಅಪೆಟ್ಜ್ ಅವರನ್ನು ಸೋಲಿಸಿದರು ಮತ್ತು 30 ಜುಲೈ 2021 ರಂದು ಅವರು ತೈವಾನ್‌ನ ಚೆನ್ ನಿಯೆನ್-ಚಿನ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವರು ವಿಶ್ವ ನಂ ೧ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋತು ಕಂಚಿನ ಪದಕ ಗೆದ್ದರು.