ಡಾ.ಎಂ.ಎಸ್.ಲಠ್ಠೆ : -ಉತ್ತರ ಕರ್ನಾಟಕದ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಡಾ.ಎಂ.ಎಸ್.ಲಠ್ಠೆ ಶ್ರೇಷ್ಠ ಜಾನಪದ ವಿದ್ವಾಂಸರು. ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ ಇಲ್ಲಿಯೇ ಉಪನ್ಯಾಸದ ಸೇವೆಯನ್ನು ಪ್ರಾರಂಭಿಸಿದ ಶ್ರೀಯುತರು ಕೊನೆಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯಕ್ಕೆ ಸಂಧು, ಅಲ್ಲಿಂದಲೇ ನಿವೃತ್ತರಾಗಿದ್ದಾರೆ. ಈ ರೀತಿ ಸಂಧ ಸೇವೆಯ ಪರಿಣಾಮವಾಗಿ ಡಾ.ಲಠ್ಠೆಯವರ ಜಾನಪದ ಅಧ್ಯಯನ ಕ್ಷೇತ್ರ ಸಾಕ್ಷಟ್ಟು ವಿಸ್ತೃತವಾಗಿದೆ. ಮುಂಬಯಿ ಕರ್ನಾಟಕ, ಹೈದರಬಾದ್ ಕರ್ನಾಟಕ ಎರಡು ಭಾಗಗಳ ರಾಯಭಾರಿಯಂತೆ ಇವರ ಅಧ್ಯಯನದ ಹರಹು ಇದೆ.

ಸಂಪಾದನೆ, ಸಂಶೋಧನೆ ಎರಡೂ ನಿಟ್ಟಿನಲ್ಲಿ ಲಠ್ಠೆಯವರು ಜಾನಪದವನ್ನು ಅಭ್ಯಸಿಸಿದ್ದಾರೆ. ಉತ್ತರ ಕರ್ನಾಟಕದ ಗದ್ಯ-ಪದ್ಯ ಎರಡೂ ಬಗೆಯ ಜನಪದ ಸಾಹಿತ್ಯವನ್ನು ಅಧ್ಯಯನಕ್ಕೆ ಎತ್ತಿಕೊಂಡು ಅಮೂಲ್ಯ ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಜಾನಪದೇತರ ಸಾಹಿತ್ಯದಲ್ಲೂ-ವಿಶೇಷವಾಗಿ ಶರಣ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ೧೯೨೪ರಿಂದ ಅನೇಕ ಜಾನಪದ ಕೃತಿಗಳು ಡಾ.ಲಠ್ಠೆಯವರಿಂದ ಬೆಳಕು ಕಂಡಿದೆ.

ಜಾನಪದ ಕೃತಿಗಳು

ಬದಲಾಯಿಸಿ

ಉತ್ತರ ಕರ್ನಾಟಕದ ಒಡಪುಗಳು, ಉತ್ತರ ಕರ್ನಾಟಕದ ಒಗಟುಗಳು, ಉತ್ತರ ಕರ್ನಾಟಕದ ಗಾದೆಗಳು, ಉತ್ತರ ಕರ್ನಾಟಕದ ಹಂತಿಯ ಹಾಡುಗಳು ಜಾನಪದದಲ್ಲಿ ಶ್ರೀಶರಣ ಬಸವೇಶ್ವರ, ಬಂಡೆಪ್ಪ ಕವಿಯ ಭಜನೆಯ ಹಾಡುಗಳು ಚನ್ನಮಲ್ಲಯ್ಯನ ಜಾನಪದ ಹಾಡುಗಳು, ಜಾನಪದ ದೀಪ್ತಿ, ಬಯಲಾಟದ ಸಾರಥಿ, "ಜಾನಪದ ಕವಿ ಚರಿತ್ರೆ" ಉತ್ತರ ಕರ್ನಾಟಕದ ಜಾನಪದ ನಂಬಿಕೆಗಳ-ಇವೇ ಮುಂತಾದವುಗಳು ಡಾ.ಎಂಎಸ್ ಲಠ್ಠೆಯವರ ಕೃತಿಗಳು.

ಕವಿ ಪ್ರವಾಹ ನಿಲ್ಲುವುದಿಲ್ಲ ಮುಂದಿನ ಜಾನಪದ ಕವಿಗಳನ್ನು ರಕ್ಷಿಸಿ ಬೇರೆಯವರು ಮುಂದುವರಿಸುತ್ತಾರೆ. ಲಠ್ಠೆಯವರು ಪ್ರಮುಖ ಪ್ರಮಾಣದಲ್ಲಿ ಕವಿಗಳನ್ನು ದಾಖಲಿಸಿ ಒಂದು ಜನಪದ ಕವಿ ಚರಿತ್ರೆಯ ಪರಂಪರೆಯನ್ನು ಹುಟ್ಟು ಹಾಕಿದ ಮೊದಲಿಗರಾಗಿದ್ದಾರೆ. ಇವರಿಗೆ 'ಉತ್ತರ ಕರ್ನಾಟಕದ ಒಡಪುಗಳು' ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ.