ಲಗ್ನ
ಜ್ಯೋತಿಷದಲ್ಲಿ, ಲಗ್ನವು (ಉದಿಸುತ್ತಿರುವ ಕ್ರಾಂತಿ ವೃತ್ತದ ಬಿಂದು) ಆತ್ಮ ಮತ್ತು ಭೂಮಿಯ ಮೇಲೆ ಅದರ ಹೊಸ ಜೀವದ ಸಂಪರ್ಕದ ಮೊದಲ ಕ್ಷಣ.[೧] ಲಗ್ನದ ರಾಶಿ ಮತ್ತು ನಕ್ಷತ್ರಗಳು ಒಬ್ಬ ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸಿದರೆ, ಲಗ್ನದ ಅಧಿಪತಿಯು ಏಕೈಕ ಅತಿ ಪ್ರಮುಖ ಕುಂಡಲಿಯ ಗ್ರಹವನ್ನು ಮತ್ತು ಹಾಗಾಗಿ ಲಗ್ನದ ಅಧಿಪತಿ ಇರುವ ಸ್ಥಾನದ ರಾಶಿ ಹಾಗೂ ನಕ್ಷತ್ರಗಳನ್ನು ಪ್ರತಿನಿಧಿಸುತ್ತಾನೆ. ಲಗ್ನದ ಅಧಿಪತಿಯು ಆ ನಿರ್ದಿಷ್ಟ ರಾಶಿ ಮತ್ತು ನಕ್ಷತ್ರದ ಲಕ್ಷಣಗಳು ಮತ್ತು ಗುಣಗಳನ್ನು ಕೂಡ ಲೀನವಾಗಿಸಿಕೊಳ್ಳುತ್ತಾನೆ.
ಒಬ್ಬರ ಲಗ್ನವು ಅವರ ಜನ್ಮದ ಸಮಯದಲ್ಲಿ ಪೂರ್ವದ ದಿಗಂತದಲ್ಲಿ ಉದಯಿಸುತ್ತಿರುವ ರಾಶಿ ಮತ್ತು ನಕ್ಷತ್ರದ, ನಿರ್ದಿಷ್ಟವಾಗಿ ನಕ್ಷತ್ರ ಪಾದದ (೪ ವಿಭಿನ್ನ ಭಾಗಗಳಾಗಿ ನಕ್ಷತ್ರದ ವಿಭಾಗ ಎಂದೂ ಪರಿಚಿತವಾಗಿದೆ) ಕೋನವಾಗಿದೆ.
ಲಗ್ನದ ಅತ್ಯಂತ ಪರಿಣಾಮಕಾರಿ ಬಿಂದು ಎಂದರೆ ಒಂದು ನಿರ್ದಿಷ್ಟ ಜನ್ಮಸ್ಥಳಕ್ಕೆ ಜನ್ಮಕಾಲದಲ್ಲಿ ದಿಗಂತದ ಸ್ಥಾನದೊಂದಿಗೆ ಸಮನಾಗಿರುವ ರಾಶಿಚಕ್ರ ವಲಯದ ಬಿಂದು.
ಉಲ್ಲೇಖಗಳು
ಬದಲಾಯಿಸಿ- ↑ The Essentials of Vedic and thantrik Astrology, by Komilla Sutton, The Wessex Astrologer Ltd, England, 1999, p.96.