ಲಕ್ಷ್ಮೀಪುರ ಗ್ರಾಮವು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕೇಂದ್ರದಿಂದ ಸುಮೂರು ೨೦ ಕಿ.ಮೀ. ದೂರದಲ್ಲಿ ಬೆಂಗಳೂರು-ಕಡಪ ಅಂತರರಾಜ್ಯ ರಸ್ತೆ ಸಮೀಪವಿದೆ. ಕೋಲಾರ ಜಿಲ್ಲೆ ಐತಿಹಾಸಿಕವಾಗಿ ಹಲವು ಸ್ಥಳಗಳ ತವರೂರು. ಜಿಲ್ಲೆಯ ಇತಿಹಾಸವನ್ನು ಗಮನಿಸಿದಾಗ ಅದರ ಕುರುಹುಗಳು ಕಂಡುಬರುತ್ತದೆ. ಕಳೆದ ನಾಲ್ಕು ಶತಮಾನಗಳ ಹಿಂದೆ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆದು, ಮೈಸೂರು ಸಂಸ್ಥಾನಾಧೀಶರ ಅಡಿಯಲ್ಲಿದ್ದ ಸಾಮಂತ ರಾಜ್ಯವೇ 'ಯೇರುಕಾಲ್ವೆ'. ಅಂದು 'ಯೇರುಕಾಲ್ವೆ' ಎಂದು ಪ್ರಸಿದ್ದಿ ಪಡೆದಿದ್ದ ಐತಿಹಾಸಿಕ ಸ್ಥಳವೇ ಇಂದಿನ ಲಕ್ಷ್ಮೀಪುರ.