ಲಕ್ನವರಂ ಸರೋವರ
ಲಕ್ನವರಂ ಸರೋವರವು ತೆಲಂಗಾಣದ ವಾರಂಗಲ್‍ನಿಂದ ಸುಮಾರು ೮೦ ಕಿ.ಮಿ. ದೂರದ ಗೋವಿಂದ್‍ರಾವ್‍ಪೇಟ್ ಮಂಡಲ್‍ನಲ್ಲಿ ಸ್ಥಿತವಾಗಿರುವ ಒಂದು ಸರೋವರವಾಗಿದೆ.[೧][೨]
ಪ್ರವಾಸಿ ತಾಣ
ಬದಲಾಯಿಸಿಸರೋವರವು ೧೦,೦೦೦ ಎಕರೆ ಪ್ರದೇಶದಲ್ಲಿ ಹರಡಿದೆ ಮತ್ತು ಸುಮಾರು 2.135 ಟಿಎಂಸಿಯಷ್ಟು ನೀರನ್ನು ಹೊಂದಿದೆ. ಇದು ೩,೫೦೦ ಎಕರೆಗಿಂತ ಹೆಚ್ಚಿನ ಪ್ರಮಾಣದ ಭೂಮಿಗೆ ನೀರೊದಗಿಸುತ್ತದೆ. ಇದನ್ನು ಕಾಕತೀಯ ರಾಜರು ನಿರ್ಮಿಸಿದರು. ಇದರಲ್ಲಿ ಸುಮಾರು ೧೩ ದ್ವೀಪಗಳಿವೆ ಮತ್ತು ಮೂರು ದ್ವೀಪಗಳಿಗೆ ಸಂಪರ್ಕ ಒದಗಿಸುವ ೧೬೦ ಮೀಟರ್ ಉದ್ದದ ಒಂದು ನೇತಾಡುವ ಸೇತುವೆಯಿದೆ. ಇದು ದಟ್ಟವಾದ ಪರ್ಣಪಾತಿ ಅರಣ್ಯದಿಂದ ಸುತ್ತುವರಿಯಲ್ಪಟ್ಟಿದ್ದು ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ.
ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ಲಕ್ನವರಂ ಸರೋವರದಲ್ಲಿ ಹೊಸ ತಂಗುಮನೆಗಳನ್ನು ಅಭಿವೃದ್ಧಿಪಡಿಸಿದೆ.
ಹೊಸ ಸೌಲಭ್ಯಗಳಲ್ಲಿ ಕುಟೀರಗಳು, ವೀಕ್ಷಣಾ ಗೋಪುರ, ಅಡುಗೆ ವಸ್ತುಗಳ ಉಗ್ರಾಣ ಸೇರಿವೆ. ಪ್ರಕೃತಿಪ್ರೇಮಿ ಪ್ರವಾಸಿಗಳಿಗಾಗಿ ಪ್ರಶಾಂತ ಜಲರಾಶಿಯಲ್ಲಿ ಮುಖ್ಯ ದಡದಿಂದ ದ್ವೀಪಕ್ಕೆ ಪ್ರಯಾಣಿಕರ ದೋಣಿಯನ್ನು ಕಲ್ಪಿಸಲಾಗಿದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ "Of sun-kissed waters". The Hindu.
- ↑ "Laknavaram lake – a perfect place to unwind". The Hindu. Archived from the original on 2014-12-05. Retrieved 2020-07-10.
- ↑ "New facilities opened at Laknavaram". 24 April 2016.