ರೋಸಾರಿಯೋ ಕೆಥೆಡ್ರಲ್, ಮಂಗಳೂರು

ಪೋರ್ಚುಗೀಸರಿಂದ 1568 ರಲ್ಲಿ ಈ ಕ್ಯಾಥೆಡ್ರಲ್‌ ನಿರ್ಮಾಣವಾಗಿದೆ. ರೋಮನ್‌ ವಿನ್ಯಾಸದ ವಾಸ್ತುಶಿಲ್ಪ ಹೊಂದಿದ್ದು ಅತ್ಯಂತ ಹಳೆಯದಾಗಿರುವ ಈ ಚರ್ಚ್ ಅನ್ನು 1910 ರಲ್ಲಿ ನವೀಕರಿಸಲಾಗಿದೆ. ಮಂಗಳೂರಿನ ಹಂಪಕಟ್ಟಾ ಎಂಬ ಪ್ರದೇಶದ ಪ್ರಶಾಂತ ವಾತಾವರಣದಲ್ಲಿರುವ ಈ ಚರ್ಚ್ ನಗರಕ್ಕೆ ಹತ್ತಿರವಾಗಿಯೇ ಇದೆ. ಇದನ್ನು 1910 ರಲ್ಲಿ ಪ್ಯಾರಿಶ್‌ ಸಂತ ಪ್ರಾ. ಎಚ್‌.ಐ. ಬುಸಿನಿ ಎಂಬುವರು ಇಲ್ಲಿದ್ದ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡದ ನಿರ್ಮಾಣ ಆರಂಭಿಸಿದರು.[] ಈ ಕ್ಯಾಥೆಡ್ರಲ್‌ ಹೈಸ್ಕೂಲ್‌ ಸಹ ನಡೆಸುತ್ತಿದ್ದು, ಅದನ್ನು ರೊಸಾರಿಯೋ ಹೈಸ್ಕೂಲ್‌ ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಸೇಂಟ್‌ ವಿನ್ಸೆಟ್‌ ಪೌಲ್‌ ಸೊಸೈಟಿ ಕೂಡ ನಡೆಸುತ್ತಿದ್ದು, ಅದರ ಮೂಲಕ ಬಡವರು ಹಾಗೂ ಹಿಂದುಳಿದ ವರ್ಗದವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.[]

Diocese of Mangalore
Dioecesis Mangalorensis
मंगलौर के सूबा
Our Lady of Rosary of Mangalore
Cathedral of Our Lady of the Rosary
Location
CountryIndia
TerritoryKarnataka
Ecclesiastical provinceBangalore
MetropolitanBangalore
Statistics
Area5,924 km2 (2,287 sq mi)
Population
- Total
- Catholics
(as of 2012)
2,978,560
267,343 (9%)
Parishes112
Information
DenominationRoman Catholic
RiteLatin Rite
Established1 September 1886
CathedralOur Lady of Rosary of Mangalore
Patron saintSaint Joseph
Current leadership
Popeಟೆಂಪ್ಲೇಟು:Incumbent pope
BishopAloysius Paul D'Souza
Metropolitan ArchbishopBernard Moras
Map
Diocese of Mangalore map
Map highlighting districts falling under the Mangalore Diocese
Website
dioceseofmangalore.org/


ಈ ಚರ್ಚ್ ಸದಾ ಒಂದಲ್ಲಾ ಒಂದು ದಾಳಿ, ಭೀತಿಗೆ ಒಳಗಾಗುತ್ತಲೇ ಬಂದಿದ್ದು, ಆಗಾಗ ಧಕ್ಕೆಗೂ ಒಳಗಾಗುತ್ತಿದೆ. ಈ ಇಡೀ ಕಟ್ಟಡವನ್ನು ಟಿಪ್ಪು ಸುಲ್ತಾನ್‌ ಆವರಿಸಿಕೊಂಡು ಸಂಪೂರ್ಣ ನಾಶಪಡಿಸಿದ್ದ. ನಂತರ ವಿದೇಶಿ ಪಡೆಗಳು 1784 ರಲ್ಲಿ ಇದನ್ನು ಮರು ನಿರ್ಮಿಸಿದವು. ಈ ಕ್ಯಾಥೆಡ್ರಲ್‌ ಡೋಮ್‌ನ್ನು ಒಳಗೊಂಡಿದ್ದು, ಅದರ ಮೇಲೆ ಶಿಲುಭೆ ನಿಲ್ಲಿಸಲಾಗಿದೆ. ರಾತ್ರಿ ಹೊತ್ತು ಮೀನುಗಾರಿಕೆಗೆ ತೆರಳುವವರಿಗೆ ದೀಪದ ಸೌಲಭ್ಯವನ್ನು ಇದು ಒದಗಿಸುತ್ತದೆ. ಇದಲ್ಲದೇ ಇಲ್ಲಿರುವ ವರ್ಜಿನ್‌ ಮೇರಿಯ ಚಿತ್ರ ಕೂಡ ಮೀನುಗಾರರು ಸಮುದ್ರದಲ್ಲಿ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿದ್ದು ಎನ್ನಲಾಗುತ್ತದೆ. ಈ ರೀತಿ ಹತ್ತು ಹಲವು ಐತಿಹಾಸಿಕ ಹಿನ್ನೆಲೆಗಳು ಈ ಚರ್ಚ್ ಹಿಂದೆ ಇದೆ. ಈ ಮೂಲಕ ಇದೊಂದು ಮಹತ್ವದ ತಾಣ ಎನಿಸಿದೆ. ಅಲ್ಲದೇ ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಬೇಕು. ಅಷ್ಟು ಸುಂದರವಾದ ತಾಣ ಇದಾಗಿದೆ.[]

ಉಲ್ಲೇಖಗಳು

ಬದಲಾಯಿಸಿ