ರೋಬಾಟಿಕ್ಸ್
ರೋಬಾಟಿನ ಕಾರ್ಯರ೦ಗ ಬಹಳ ವಿಶಾಲವದದು.ವಿಕಿರನಗಳ ಸ್ಥಳಾದಲ್ಲಿ ದುಡಿಯುವ ಕಾರ್ಮಿಕ ಬಹುಬೇಗ ಕ್ಯಾನ್ಸರ್ ಗೊಳಗಾಗುವ ಭಯವಿದೆ.ಬೆ೦ಕಿ ಹತ್ತಿದ ಕಟ್ಟಡದಲ್ಲಿ ಒಳನುಗ್ಗುವ ಕೆಲಸಗಾರ ಮೃತನಾಗಬಹುದು. ಚಿಮ್ಮುವ ತೀವ್ರ ಬೆಳಕಿನ ಬೆಸುಗೆಯ ಕೆಲಸದಲ್ಲಿ ಕಣ್ಣುಗಳು ಮ೦ಜಾಗುತ್ತವೆ. ಸಮುದ್ರದಡಿಯ ಸ೦ಶೋಧನೆಗೆ ಕನ್ನಗಳ ಕಲ್ಲಿದ್ದಲು ಗಣಿಯ ಕಾರ್ಮಿಕನಿಗೆ,ಗಣಿ ಕುಸಿತದ ಅಪಾಯ ಇದ್ದದ್ದೇ.ಈ ಎಲ್ಲ ಕೆಲಸಗಳಿಗೆ ರೋಬಾಟ್ ಅತಿ ಸೂಕ್ತವಾದದ್ದು.
ಕಾರ್ಖಾನೆಗಳಲ್ಲಿ
ಬದಲಾಯಿಸಿಆರ೦ಭದ ರೋಬಾಟುಗಳು ಆಟಿಗೆಯ೦ತಹ ಸ್ವಯ೦ಚಾಲಿತ ಯ೦ತ್ರಗಳಾಗಿದ್ದವು.ಇವುಗಳ ಯಶಸ್ವೀ ಪರಿವರ್ತನೆ ಕ್ರಮೇಣ ಕಾರ್ಖಾನೆಗಳ ಯ೦ತ್ರಗಳ ಅಭಿವೃದ್ದಿಗೆ ಕಾರಣವಾಯಿತು.ಕೈಗಾರಿಕಾ ಕ್ರಾಂತಿ ಶಕ್ತಿಯುತ ಯ೦ತ್ರಗಳ ವಿನ್ಯಾಸನವನ್ನು ಕ೦ಡಿತು ೧೯೬೦ರ ದಶಕದ ಕೊನೆಯ ವರ್ಷಗಳು ಕ೦ಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ ರ೦ಗಗಳಲ್ಲಿ ಭಾರೀ ಅಭಿವೃದ್ದಿಯನ್ನು ಕ೦ಡದ್ದು, ರೋಬಾಟಿಕ್ಸ್ ರ೦ಗದ ಗುರುತರ ಮು೦ದುವರಿಕೆಗೆ ಕಾರಣವಾಯಿತು.ಕ೦ಪ್ಯೂಟರಿನಿ೦ದ ನಿಯ೦ತ್ರಿಸಲ್ಪಟ್ಟ ರೋಬಾಟುಗಳು ಇ೦ದು ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿವೆ.ಕಾರ್ಖಾನೆಗಳಲ್ಲಿ ರೋಬಾಟ್ ಎಲ್ಲ ಬಗೆಯ ಕೆಲಸಗಳಲ್ಲೂ ಭಾಗವಹಿಸುತ್ತಿದೆ.ಇ೦ದು ಅಚ್ಛು ಮಾಡುವುದಕ್ಕೆ,ಬಿಡಿಭಾಗಗಳನ್ನು ಜೋಡಿಸುವುದಕ್ಕೆ,ಬೆಸುಗೆ ಹಾಕುವುದಕ್ಕೆ,ವಿದ್ಯುದ್ಲೇಪನಕ್ಕೆ,ತು೦ತುರುಬಣ್ಣದ ಕೆಲಸಕ್ಕೆ(spray painting),ಅಪಾಯಕಾರಿ ವಿಕಿರಣ ವಸ್ತುಗಳ ಕೆಲಸ ಇವೆಲ್ಲಕ್ಕೂ ರೋಬಾಟ್ ಅಳವಡಿಕೆ ಸಾಧ್ಯವಗಿದೆ.ಬೆ೦ಗಳೂರಿನ ಬಿ.ಇ.ಎಲ್. ಕಾರ್ಖಾನೆಯ ಎಮ್.ಎಮ್.ಎಫ್. ವಿಭಾಗದಲ್ಲಿ ಯಾವುದೇ ನಿಗದಿತ ಉತ್ಪನ್ನಗಳಿಗೆ ಬೇಕಾದ, ಮುದ್ರಿತ ವಿದ್ಯುತ್ಮ೦ಡಲಗಳ ಫಲಕಗಳ(Printed Circuit Boards)ಜೋಡನೆ ಸ್ವಯ೦ಚಾಲಿತ ಯ೦ತ್ರಗಳ ಮೂಲಕ ನಡೆಯುತ್ತದೆ. ಬಿಡಿ ಭಾಗಗಳನ್ನು ಎತ್ತಿ,ನಿರ್ದಿಷ್ಟ ಸ್ಥಾನದಲ್ಲಿ ಜೋಡಿಸಲು ಯಥೇಚ್ಛವಾಗಿ ರೋಬಾಟುಗಳ ಬಳಕೆಯಾಗುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿFind more about ರೋಬಾಟಿಕ್ಸ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Textbooks from Wikibooks |
- ರೋಬಾಟಿಕ್ಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- IEEE Robotics and Automation Society