ರೋಗವಾಹಕ ಎಂದರೆ ಒಂದು ರೋಗಜನಕದಿಂದ ಸೋಂಕು ಉಂಟಾಗಿರುವ, ಆದರೆ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಪ್ರದರ್ಶಿಸದ ಒಬ್ಬ ವ್ಯಕ್ತಿ ಅಥವಾ ಇತರ ಜೀವಿ.[]

ರೋಗಕಾರದಿಂದ ಪ್ರಭಾವಿತವಾಗದಿದ್ದರೂ, ರೋಗವಾಹಕವು ಅದನ್ನು ಇತರರಿಗೆ ಹರಡಬಹುದು ಅಥವಾ ರೋಗವಾಹಕದಲ್ಲಿ ರೋಗದ ನಂತರದ ಹಂತಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ವಿಷಮಶೀತ ಜ್ವರ, ಶೀತಜ್ವರಗಳು, ಮತ್ತು ಎಚ್‌.ಐ.ವಿ.ಯಂತಹ ಸಾಮಾನ್ಯ ಸಾಂಕ್ರಾಮಿಕ ರೋಗಗಳ ಪ್ರಸರಣದಲ್ಲಿ ರೋಗವಾಹಕಗಳು ಗಂಭೀರ ಪಾತ್ರವನ್ನು ವಹಿಸುತ್ತವೆ. ರೋಗವಾಹಕತೆಯ ಕ್ರಿಯಾವಿಧಿಯು ಈಗಲೂ ತಿಳಿದಿಲ್ಲವಾದರೂ, ಕೆಲವು ರೋಗಕಾರಕಗಳು ಒಂದು ಸಮಯಾವಧಿಯವರೆಗೆ ಮಾನವರಲ್ಲಿ ಹೇಗೆ ಸುಪ್ತವಾಗಿ ಉಳಿಯಬಲ್ಲವು ಎಂದು ತಿಳಿದುಕೊಳ್ಳುವತ್ತ ಸಂಶೋಧಕರು ಪ್ರಗತಿ ಸಾಧಿಸಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. "Dictionary Definition". Medical-dictionary.thefreedictionary.com. Retrieved 20 August 2013.
  2. "Denise M. Monack". WikiGenes. Archived from the original on 2016-02-17. Retrieved 2016-02-14.
"https://kn.wikipedia.org/w/index.php?title=ರೋಗವಾಹಕ&oldid=1224032" ಇಂದ ಪಡೆಯಲ್ಪಟ್ಟಿದೆ