ರೊಮಾನಿ ಜಾನಪದ
You must add a |reason=
parameter to this Cleanup template - replace it with {{Cleanup|reason=<Fill reason here>}}
, or remove the Cleanup template.
ಇಂಗ್ಲಿಷ ಜಿಪ್ಸಿ ಎಂದು ಕರೆಯಲಾಗುವ ಜನಗಳ ಗುಂಪಿಗೆ ರೊಮಾನಿ ಎಂದು ಹೆಸರು . ಅವರು ಯಾವ್ಯಾವ ದೇಶಗಳಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲ ಅವರಿಗೆ ಬೇರೆ ಬೇರೆ ಹೆಸರುಗಳಿವೆ. ಜಿಪ್ಸಿಗಳು , ಫ್ಯಾರೋನ ಜನಗಳು , ಸಿಂಗಾನಿ , ಜಿಗಾನಿ , ಜೆಗನೇರ್ , ಜಿಂಗಾರಿ , ಜಿಂಕಾಲಿ ಎಂದೆಲ್ಲ ಅವರಿಗೆ ಹೆಸರುಗಳಿವೆ . ಸ್ಟೇನ್ ನಲ್ಲಿ ಅವರನ್ನು ಗ್ರೀಕರು ಅಥವಾ ಬೊಹಿಮಿಯನ್ನರು ಎಂದು ಕರೆಯೂತ್ತಿದ್ದರು . ಸ್ಕ್ಕಾಟ್ಲೆಂಡಿನಲ್ಲಿ ಮೂರ್ ಎನ್ನುತ್ತಿದ್ದರು . ರೊಮಾನಿ ಪದದ ನಿಷ್ಟತ್ತಿಯ ಬಗ್ಗೆ ಅನೇಕ ಸಿದ್ದಾಂತಗಳಿವೆ . ಸಂಸ್ಕೃತದಲ್ಲಿ ಡೋಮ ಎಂದರೆ ಕೆಳಜಾತಿಯವರು . ಇದರಿಂದ ರೊಮ್ ಎಂದರೆ ಜಿಪ್ಸಿ ಗಂಡಸು ಬಂದಿರಬೇಕೆಂದು ಹೇಳಲಾಗುತ್ತದೆ . ರೊಮಾನಿಗಳು ಮೊದಲಿಗೆ ಅಲೆಮಾರಿಗಳಾಗಿದ್ದರು . ಈಗ ಸಾಕಷ್ಟು ಜನರು ನಗರಗಳಲ್ಲಿ ಬೀಡುಬಿಟ್ಟಿದ್ದಾರೆ. ಸಾಮಾನ್ತ ವ್ಯಾಪಾರಗಳನ್ನು ಮಾಡುತ್ತಾರೆ. ಅದರೆ ಬೇಸಿಗೆಯಲ್ಲಿ ಅವರು ಸಂಚರಿಸುತ್ತಾರೆ . ಜನಾಂಗೀಯ ಸಂಕರ ಮತ್ತು ಮದುವೆಗಳು ಆಗಿದ್ದಗಲೂ ರೊಮಾನಿಗಳು ಜಗತ್ತಿನ ಎಲ್ಲ ಭಾಗಗಳಲ್ಲಿ ಇದ್ದು ತಮ್ಮ ಪ್ರಾಚೀನ ಕಲೆ , ಕೌಶಲ್ಯಗಲನ್ನು ಅನುಸರಿಸುತ್ತಾರೆ. ಈಗಲೂ ಯೂರೋಪ್ , ಎಷ್ಯಾಗಳಲ್ಲಿ ಜಿಪ್ಸಿ ಕ್ಯಾರವಾನ್ಗಳನ್ನು ಕಾಣಬಹುದು .
ರೊಮಾನಿಜಾನಪದ ಜಾನಪದ ಎಂದರೆ ರೊಮಾನಿಗಳು ಸೃಷ್ಟಿಸಿರುವ ಜಾನಪದ ಮತ್ತು ಅವರ ಬಗ್ಗೆ ಇರುವ ಜಾನಪದ ಎರಡೂ ಆಗುತ್ತದೆ . ಆದರೆ ಜಿಪ್ಸ್ಸಿಗಳ ಬಗ್ಗೆ ಇರುವ ಜಾನಪದವೇ ಅವರು ಸೃಷ್ಟಿಸಿದ ಜಾನಪದಕ್ಕಿಂತ ಹೆಚ್ಚಾಗಿದೆ. ಜಿಪ್ಸಿಗಳಿಗೆ ಮಾಟಮಂತ್ರ ಗೊತ್ತು , ಅವರಿಗೆ ಎರಡನೇ ದೃಷ್ಟಿ ಇದೆ . ಅವರು ರೋಗ ವಾಸಿಮಾತ್ತಾರೆ . ಮನೆಗೆ ಬೆಂಕಿ ಬಿದ್ದಾಗ ರಕ್ಷಿಸುತ್ತಾರೆ , ಭವಿಷ್ಯ ಹೇಳುತ್ತಾರೆ. ಸಣ್ಣ ಪುಟ್ತದನ್ನು ಕದಿಯೂತ್ತಾರೆ , ಮಕ್ಕಳನ್ನು ಅಪಹರಿಸುತ್ತಾರೆ ಎಂದೆಲ್ಲಾ ಹೇಳುತ್ತಾರೆ. ನಿಜವಾದ ಜಿಪ್ಸಿ ಜಾನಪದ ಯಾವುದು ಎಂಬುದರ ಬಗ್ಗೆ ಹೇಳುವುದು ಕಷ್ಟ . ಜಿಪ್ಸಿ ಮದುವೆ ಪದ್ದತಿಗಳು , ನಾಮಕರಣದ ವಿಧಿಗಳು .ಶವಸಂಸ್ಕಾರದ ಪದ್ಧತಿಗಳು , ಪ್ರಸವ ಮತ್ತು ಬಹಿಷ್ಠೆಯಾದಾಗಿನ ನಿಷೇಧಗಳು . ಇವೆಲ್ಲವನ್ನೂ ಅವರು ತಾವು ಯಾವ ಯಾವ ದೇಶಗಳಲ್ಲಿ ಜೀವಿಸಿದ್ದರೋ ಅಲ್ಲೆಲ್ಲಕಡೆಗಳಿಂದೂ ತೆಗೆದುಕೊಂಡಿದ್ದಾರೆ . ಅವರಿಗೆ ಶಕುನಗಳು , ಭೂತಗಳು , ಕೆಟ್ಟಕಣ್ಣು ಭಳ ಜಿಪ್ಸಿಗಳಿಗೆ ಎರಡು ಹೆಸರುಗಳಿರುತ್ತವೆ . ಒಂದು ಹೆಸರು ತಮ್ಮ ತಮ್ಮಲ್ಲೆ ಬಳಸಿಕೊಳ್ಳುವುದಕ್ಕೆ, ಇನ್ನೊಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ .
ದೇಹವನ್ನು ಸುಡುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ. ಸತ್ತವರನ್ನು ಕಡೆಗಣೆಸಿದರೆ ಅವರು ವಾಪಸ್ಸು ಬಂದು ಜೀವಂತವಾಗಿರುವವರನ್ನು ಕಾಡುತ್ತಾರೆ. ಯುದ್ದ ಕಾಲದಲ್ಲಿ ಕೂಡು ಜಿಪ್ಸಿಗಳು ಯೋಧರ ಹೆಣ ಹುಡುಕಿ ಕೊಂಡು ಸುಡುತ್ತಿದರು . ಎಷ್ಟೇ ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದರೂ ಅವರು ಈ ಕೆಲಸ ನಡೆಸಿಯೇ ತೀರುತ್ತಿದ್ದರು . ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.ಒಂದೇ ಪ್ರದೇಶಕ್ಕೆ ಅವರು ಅಂಟಿಕೊಳ್ಳುವವರಲ್ಲವಾದ್ದರಿಂದ , ಕಡಿಮೆ ಉಪಕರಣಗಳನ್ನು ಬಯಸುವ ವೃತ್ತಿಗಳನ್ನು ಅವರು ಕರಗತಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿಪ್ಸಿ ಗಂಡಸರು , ಕುಂಬಾರರೋ ಲೋಹದ ಕೆಲಸಗಾರರೋ ಆಗಿರುತ್ತಾರೆ. ಪೂರ್ವಯೂರೋಪಿನಲ್ಲಿ ಅವರು ಸಂಗೀತಗಾರರಾಗಿ , ಹಾಡುಗಾರರಾಗಿ, ನರ್ತಕರಾಗಿ , ಬೊಂಬೆಯಾಟದವರಾಗಿ ಪ್ರಸಿದ್ಧರಾಗಿದ್ದಾರೆ . ಕುದುರೆ ಮತ್ತು ಹಂದಿ ಮಾರಾಟಗಾರರಾಗಿಯೂ ಅವರು ಖ್ಯಾತರಾಗಿದ್ದಾರೆ . ಅವರಿಗೆ ಕುದುರೆ ಕಂಡರೆ ಬಹಳ ಪ್ರೀತಿ ಇರುವುದರಿಂದ ಕುದುರೆಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತರಂತೆ . ಕುದುರೆಗಳ ಮದುವೆ ಮಾಡುತ್ತಾರೆ . ಅದಕ್ಕೆ ವೈದ್ಯವನ್ನೂ ಅವರು ತಿಳಿದಿದ್ದಾರೆ. ಆದರೆ ಈಗೀಗ ಈ ಜ್ಞಾನ ಅವರಲ್ಲಿ ನಶಿಸಿ ಹೋಗುತ್ತಿದೆ . ಜಿಪ್ಸಿಗಳ ಪ್ರಯಾಣದ ವೇಗವನ್ನು ವಾಹನಗಳ ಬಳಕೆ ಒಂದಿಷ್ಟೂ ತಗ್ಗಿಸಿಲ್ಲ . ಜಿಪ್ಸಿಗಳ ಕುದುರೆ ಗಾಡಿಗಳ ಹಾಗೆಯೇ ಅವರ ಕ್ಯಾರವಾನ್ ಕೂಡ ವರ್ಣರಂಜಿತವಾದದ್ದು . ಹೆಂಗಸರು ಕಸೂತಿ ಕೆಲಸ . ಕಣಿ ಹೇಳುವುದರಲ್ಲಿ ಪ್ರವೀಣರು . ಅವರು ಬೇರೆ ಹೆಂಗಸರ ಬಂಜೆತನವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯನ್ನು ಪಡೆದುಕೊಂಡಿರುತ್ತಾರತೆ . ಓಡಿಹೋದ ಗಂಡಂದಿರನ್ನು ವಾಪಸು ಬರಿಸುವ , ಒಲ್ಲದ ಪ್ರೇಮಿಗಳನ್ನು ಹೆಂಗಸರ ಬಳಿ ತರಿಸುವ ಶಕ್ತಿಯನ್ನೂ ಅವರು ಪಡೆದಿರುತ್ತಾರಂತೆ.
ಕೊಲೆ ಬಿಟ್ಟರೆ ಮಿಕ್ಕೆಲ್ಲ ಅಪರಾಧಗಳನ್ನು ಅವರು ಮಾಡುತ್ತಾರೆಂದು ರೊಮಾನಿಗಳ ಬಗ್ಗೆ ಬರೆದಿರುವವರು ಹೇಳಿದ್ದಾರೆ . ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು ಮಾಡುವುದಿಲ್ಲ . ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ . ಕ್ರಿಸ್ತನ ಶಿಲುಬೆಗೆ ಜಿಪ್ಸಿ ಕುಮ್ಮಾರನೊಬ್ಬನು ಮೊಳೆಗಳನ್ನು ತಯಾರಿಸದ್ದರಿಮ್ದ ಅವರಿಗೆ ಶಾಪ ತಗುಲಿದೆಯೆಂದು ರುಮಾನಿಯಾದಲ್ಲಿ ಕಥೆಯಿದೆ . ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು ಇದಕ್ಕೆ ಪ್ರತಿಕಥೆ ಹೇಳುತ್ತಾರೆ . ಇದರಿಂದ ಮೇರಿಯು ಅವರನ್ನು ಹರಸಿ , ಅವರು ಕೆಲಸ ಹಗುರವಾಗಿ . ಲಾಭ ಹೆಚ್ಚಾಗಿರುವಂತೆ ಮಾಡಿದಳೆಂದು ಹೇಳುತ್ತಾರೆ . ಜಿಪ್ಸಿ
ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .
ಜಿಪ್ಸಿಗಳ ಭಾಷೆ ಇಂಡೋ-ಯೂರೋಪಿಯನ್ ವರ್ಗಕ್ಕೆ ಸೇರಿದ್ದು , ಸಂಸ್ಕೃತ ಮೂಲವನ್ನು ಹೊಂದಿದೆ . ಸ್ಥಳಿಯ ಭಿನ್ನತೆಗಳನ್ನು ಒಳಗೊಂಡಿದ್ದರೂ ಭಾಷೆಯನ್ನು ಎಲ್ಲೆ ಅಡಲಿ ಅದು ಒಂದೇ ಆಗಿರುತ್ತದೆ . ಬೇರೆ ಎಲ್ಲದಕ್ಕಿಂತ ಅದು ಹಿಂದಿ ಭಾಷೆಗೆ ಹತ್ತಿರವಾಗಿದೆ . ಟರ್ಕಿಷ್ ಜಿಪ್ಸಿ. ವಲ್ಷ್ ಜಿಪ್ಸಿ ಇಬ್ಬರೂ ಮಾತನಾಡಿ ಪರಸ್ಪರ ಅರ್ಥ ಮಾಡಿಕೊಳ್ಳಬಲ್ಲರು. ಜಿಪ್ಸಿಗಳಿಗೆ ಪಟ್ಟೆರಾನ್ ಎಂಬ ಸಂಕೇತ ಭಾಷೆಯೂ ಗೊತ್ತು ಅದು ಅವರಿಗೆ ಮಾತ್ರ ಅರ್ಥವಾಗುತ್ತದೆ . ಎರಡು ಸಣ್ಣ ರೆಂಬೆ , ಒಂದು ಎಲೆ . ಇಷ್ಟನ್ನು ಅವರು ಬೇರೆ ಬೇರೆ ಆಕಾರದಲ್ಲಿ ಪ್ರತಿ ನೊರಡಿಗೊಮ್ಮೆ ಜೋಡಿಸಿಡುತ್ತಾರೆ . ಹಿಂದೆ ಬರುತ್ತಿರುವ ಜಿಪ್ಸಿಗಳಿಗೆ ಇದು ಯಾವುದಾದರೂ ಸಂಕೇತವನ್ನು ತಿಳಿಸುತ್ತದೆ . ಜಗತ್ತಿನಲ್ಲಿರುವ ಸಾಮಾಜಿಕ ರಚನೆಯ ಪ್ರತಿಯೊಂದು ಮಾದರಿಯೂ ಜಿಪ್ಸಿ ಬಂಡಕಟ್ಟುಗಳಲ್ಲಿದೆ .ಸಾಮಾನ್ಯವಾಗಿ ಗುಂಪಿನ ಯಜಮಾನ ಗಂಡಸೇ ಆಗಿದ್ದರೂ ಹೆಂಗಸರೂ ಈ ಸ್ಥಾನದಲ್ಲಿ ಇರುವುದುಂಟು . ಈ ಸ್ಥಾನ ಚುನಾಯಿತವಾಗಬೇಕು ಮತ್ತು ಜೀವನಾವಧಿ ಅವರು ಆ ಸ್ಥಾನದಲ್ಲಿರುತ್ತಾರೆ . ನಾಯಕನಿಗೆ ತುಂಬ ಅಧಿಕಾರಗಳಿರುತ್ತವೆ . ಅವನು ಬುಡ್ಕಟ್ಟಿನ ಎಲ್ಲ ಆಸ್ತಿಯನ್ನು ನಿಯಂತ್ರಿಸುತ್ತಾನೆ . ಮದುವೆ ಮುಂತಾದುವನ್ನು ಮಾಡಿಸುತ್ತಾನೆ. ಹೊರಗಿನವರೊಂದಿಗೆ ಮಾತುಕತೆ ನಡೆಸುತ್ತಾನೆ.
ಇವರ ವಿವಾಹ ಸಂಬಂಧಗಳಲ್ಲಿ ಆಂಥ ಕಟ್ಟುನಿಟ್ಟೇನಿಲ್ಲ. ಗಂಡಸರು ತಮ್ಮ ಸೋದರಸೊಸೆಯರನ್ನು, ಸೋದರರ ಹೆಣ್ಣು ಮಕ್ಕಳನ್ನು , ಮೊಮ್ಮಕ್ಕಳನು , ಬಲಸೋದರಿಯರನ್ನು ಒಮ್ಮೊಮ್ಮೆ ಅತ್ತೆ ಚಿಕ್ಕಮ್ಮಂದಿರನ್ನು ಸಹ ಮದವೆಯಾಗುತ್ತಾರೆ . ಸೋದರ ಮಾವನ ಮಗಳಿಗೆ ಇಂಥ ಕಡೆ ಬೇಡಿಕೆ ಹೆಚ್ಚು . ಜಿಪ್ಸಿ ಮದುವೆ ಸಂಪ್ರದಾಯಗಳು ಬಂಡಟ್ಟುಗಳ್ಳು ನೆಲೆನಿಂತ ಸ್ಥಳ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ . ಪ್ರೇಮ ಮುಗಿದು ಹೋದರೆ ಒಬ್ಬರನ್ನೂಬ್ಬರು ಬಿಟ್ಟುಬಿಡುವ ಪ್ರತಿಜ್ಞೆಯನ್ನು ಗಂಡು ಹೆಣ್ಣುಗಳು ಕೈಕೊಳ್ಳುವುದೂ ಮದುವೆ ಸಂಪ್ರದಾಯಗಳಲ್ಲಿ ಒಂದು . ಅವರಲ್ಲಿ ಪಾತಿವ್ರತ್ಯದ ಬಗ್ಗೆ ಗೌರವ ಹೆಚ್ಚು ನಂಬಿಕೆಗೇಡಿಯಾದವಳ ನಾಲಿಗೆಯನ್ನು ಗಂಡನು ಸಾರ್ವಜನಿಕವಾಗಿ ಕಡಿದುಹಾಕುವ ರೂಢಿ ಉಂಟು . ಇದಕ್ಕೆ ಲುಬುನಿಚುಂಬನ ಎಂದು ಹೆಸರು , ರಕ್ತ ಮದುವೆ ಸಂಪ್ರದಾಯವೂ ಇವರಲ್ಲಿದೆ . ಗಂಡು ಹೆಣ್ಣುಗಳ ಮುಂಗೈನ ಚೂರುಭಾಗ ಕತ್ತರಿಸಿ . ಅವರ ರಕ್ತ ಒಂದಕ್ಕೊಂದು ಸೇರುವ ಹಾಗೆ ಕೈಗಳನ್ನು ಕಟ್ಟಲಾಗುತ್ತದೆ . 'ಜಿಪ್ಸಿ ಮದುವೆ ' ಎಂದರೆ "ಮದುವೆಯೇ ಇಲ್ಲ" ಎಂಬ ಅರ್ಥ ಇತ್ತು . ಏಕೆಂದರೆ ಒಂದು ಕಸಬರಿಗೆಯ ಮೇಲೆ ಜಿಗಿಯುವುದರಲ್ಲಿ ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಕಡೆಗಳಲ್ಲಿ ಅದರಲ್ಲೂ ಜರ್ಮನಿ ನೆದರ್ಲ್ಯಾಂಡ್ಸ್ ನ್ಲ್ಲಿ . ಇದು ಸಂಪ್ರದಾಯವಾಗಿತ್ತು .
ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು. ಜಿಪ್ಸಿ ಬ್ಯಾಂಡ್ ಮತ್ತು ಕಣಿ ಹೇಳುವವರಿಲ್ಲದೆ ಪೂರ್ವ ಮತ್ತು ಆಗ್ನೇಯ ಯೂರೋಪಿನ ಯಾವ ಸಂತೋಷಕೂಟವೂ ಯಶಸ್ವಿ ಯಾಗುತ್ತಿರಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನ ಯಾಗುತ್ತಿರಲ್ಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನಪದ ಗೀತೆಗಳನ್ನು ಉಳಿಸಿ , ತಮ್ಮ ಸ್ವಂತ ಲಯಕ್ಕೆ ಅವನ್ನು ಹೊಂದಿಸಿಕೊಂಡಿರುತ್ತಾರೆ .ಹಂಗೇರಿ , ರುಮಾನಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಇದು ಹೆಚ್ಚು . ಅವರ ಸಂಗೀತದ ಭಾವನಳು ತೀವ್ರ ವಿಷಾದದಿಂದ ಉತ್ಯಾಹ ಸಂತೋಷಗಳವರೆಗೆ ಇದ್ದು , ಧಾಟಿ, ನೃತ್ಯ , ಹಾಡು ಹೀಗೆ ಜಿಪ್ಸಿಗಳು ಯಾವುದನ್ನು ಮುಟ್ಟಲಿ ಅಲ್ಲಿ ತೀವ್ರತೆ ಇರುತ್ತದೆ . ರೊಮಾನಿಗಳು ಇಸ್ಲಾಂ , ಕ್ಯಾಥೋಲಿಕ್ , ಪ್ರಾಟಿಸ್ಟೆಂಟೆ ಧರ್ಮಗಳನ್ನು ಅನೇಕ ಕಡೆ , ಅನೇಕ ಕಾಲಗಳಲ್ಲಿ ಅನುಸರಿಸಿದ್ದಾರೆ . ಜರ್ಮನಿಯ ಜಿಪ್ಸಿಗಳು ಮಗುವಿಗೆ ಸಾರ್ವಜನಿಕ ಹೆಸರನ್ನು ಇಡುವಾಗ ಕ್ರೈಸ್ತ ಬಾಪ್ಪಿಸಮ್ ಪದ್ದತಿ ಅನುಸರಿಸುತ್ತಾರೆ . ಇಂಗ್ಲೆಂಡಿನ ಜಿಪ್ಸಿಗಳು ಅನೇಕ ಬಾರಿ ಬಾಪ್ಟೈಸ್ ಮಾಡಿಸುತ್ತಾರೆ. ದಕ್ಷಿಣ ಫ್ರಾನ್ನ್ ನಲ್ಲಿರುವ ಬೋಚಸ್-ಡು-ರೋನ್ ನ ಇಲೆಡೆಲ ಕುಮಾರನೊಳಗಿರುವ ಸೈಂಟೆಸ್ ಮೇರಿಸ್ ಡಿಲಮೇರ್ನ ಚರ್ಚಿಗೆ ಮೇ ೨೩ ರಂದು ಯೂರೋಪಿನಾದ್ಯಂತ ವಾಸಿಸುವ ಜಿಪ್ಸಿಗಖು ಯಾತ್ರೆ ನಡೆಸುತ್ತಾರೆ. ಮೇರಿಯ ಸಮಾಧಿ ಈ ಚರ್ಚಿನಲ್ಲಿದೆ . ಅವರು ಎರಡು ದಿನ ಒಂದು ರಾತ್ರಿ , ಆ ಸಮಾಧಿಯನ್ನು ಎಚ್ಚರಿಕೆಯಿಂದ ಕಾದು ಮರಳುತ್ತಾರೆ.
ಪೂರ್ವ ಯೂರೋಪಿಯನ್ ಸ್ಲಾವ್ ಗಳ ಗ್ರೀನ್ ಜಾರ್ಜ್ ಹಬ್ಬದಲ್ಲೂ ಜಿಪ್ಸಿಗಳು ಉತ್ಯಾಹದಿಂದ ಭಾಗವಹಿಸುತ್ತಾರೆ . ಇದರಲ್ಲಿ ಸಣ್ಣ ವಿಲ್ಲೋಮರವನ್ನು ಕಡಿದುಕೊಂಡು ಬಂದು ಅದನ್ನು ಹೂವು ಎಲೆಗಳಿಂದ ಸಿಂಗರಿಸುತ್ತಾರೆ. ಗರ್ಭಿಣಿ ಹೆಂಗಸರು ಈ ಗಿಡದ ಕೆಳಗೆ ಒಂದು ಜಮಕಾನ ಹಾಸುತ್ತಾರೆ. ಬೆಳೆಗ್ಗೆ ಆಗುವುದರೊಳಗೆ ಅದರ ಮೇಲೇನಾದರೂ ಒಂದು ಎಲೆ ಉದುರಿದ್ದರೆ ಅವರಿಗೆ ಸುಖಪ್ರಸವ ಆಗುತ್ತದೆ ಎಂದು ನಂಬುತ್ತಾರೆ. ಖಾಯಿಲಿಯವರು ಮತ್ತು ಮುದುಕರು ಗಿಡದ ಮೇಲೆ ಮೂರು ಬಾರಿ ಉಗುಳಿ, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. "ನಾವು ಬಾಳೊಣ" ಎಂದು ಹೇಳುತ್ತಾರೆ. ಮಾರನೇ ಬೆಳ್ಳಗ್ಗೆ ಹಸಿರು ಎಲೆಗಳಿಂದ ಮೈ ಮುಚ್ಚಿಕೊಂಡ ಹುಡಗನೊಬ್ಬ ಪ್ರಾಣಿಗಳಿಗೆ ಹುಲ್ಲು ಎಸೆಯುತ್ತಾನೆ.
ಜಿಪ್ಸಿ ಜನಪದ ಕಥೆಯೆಂದರೆ ಸಾಮಾನ್ಯವಾಗಿ ಯುರೊಪಿನ ಜನಪದ ಕಥೆಯೇ. ಆದರೆ ಅದರಲ್ಲಿ ಜಿಪ್ಸಿ ಸೊಗಡು ಮತ್ತು ತಿರುವುಗಳು ಇರುತ್ತವೆ.ಜಿಪ್ಸಿಗಳಿಂದ ಯುರೋಪಿನ ಕಥೆಗಳಲ್ಲಿ ಆದ ಪ್ರಸಾರವನ್ನು ಗೂಮ್ ಸಿದ್ದಾಂತವಾಗಿ ಪ್ರತಿಪಾದಿಸುತ್ತಾರೆ. ಆದರೆ ಇದು ಮುಂದಿನವರಿಂದ ತಿರಸ್ಕೃತವಾಗಿದೆ. ರೂಮಾನಿಯ ಮತ್ತು ಇತರ ಯುರೋಪಿಯನ್ ಜನಪದ ಕಥೆಗಳಲ್ಲಿ ಖಳನಾಯಕನ ಪಾತ್ರವನ್ನು ಜಿಪ್ಸಿಗಳಿಗೆ ಕೊಡಲಾಗಿದೆ. ಎಂಬ ಸೂಚನೆಯು ಗಾಸ್ಟರ್ನಿಂದ ಬಂದಿದೆ. ಸಾಮಾನ್ಯವಾಗಿ ಅಲ್ಲಿ ಹಾಸ್ಯಕ್ಕೂ ಜಿಪ್ಸಿ ಪಕ್ಕಾಗುತ್ತಾನೆ.