ರೊದ್ದಂ ನರಸಿಂಹ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪ್ರೊಫೆಸರ್ ರೊದ್ದಂ ನರಸಿಂಹ [೨೦ ಜುಲೈ ೧೯೩೩ - ೧೪ ಡಿಸೆಂಬರ್ ೨೦೨೦] ಅವರು ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು. ಅವರು ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾಂತರಿಕ್ಷ (ಏರೋಸ್ಪೇಸ್ ) ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (NAL) ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ (JNCASR) ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು JNCASRನಲ್ಲಿ ಗೌರವ ಪ್ರಾಧ್ಯಾಪಕರೂ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಆಗಿದ್ದರು.
ಪ್ರಶಸ್ತಿ, ಪುರಸ್ಕಾರಗಳು
ಬದಲಾಯಿಸಿ- ೨೦೧೩ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ
- ಭಟ್ನಾಗರ್ ಪ್ರಶಸ್ತಿ(1976),
- ರಾಜ್ಯೋತ್ಸವ ಪ್ರಶಸ್ತಿ (1986),
- ಪದ್ಮಭೂಷಣ (1987),
- ಶ್ರೀನಿವಾಸ ರಾಮಾನುಜನ್ ಪದಕ (1998),
- ಅಮೆರಿಕದ ಇನ್ಸ್‌ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಕೊಡುವ ತರಲ ಬಲವಿಜ್ಞಾನ ಪ್ರಶಸ್ತಿ (2000),
- ಆರ್ಯಭಟ ಪ್ರಶಸ್ತಿ (2004),
- ಟ್ರಿಸ್ಟೆ ವಿಜ್ಞಾನ ಪುರಸ್ಕಾರ (2008),
- ಸರ್.ಎಂ.ವಿ. ರಾಜ್ಯ ಪ್ರಶಸ್ತಿ (2012),
- ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಭಾಗದ ಅಮೃತ ಮಹೋತ್ಸವದ ವಿಶಿಷ್ಟ ವಿಜ್ಞಾನ ಪ್ರಶಸ್ತಿ (2017) .
- ರೂರ್ಕಿ, ಬನಾರಸ್, ಗುಲಬರ್ಗಾ ವಿ.ವಿ.ಗಳಿಂದ ಗೌರವ ಡಾಕ್ಟರೇಟ್,
- ಶಾಂತಿನಿಕೇತನದಿಂದ ದೇಶಿಕೋತ್ತಮ ಗೌರವ
ಹೊರಗಿನ ಕೊಂಡಿಗಳು
ಬದಲಾಯಿಸಿವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ, ಎಸ್. ಮಂಜುನಾಥ, ಪ್ರಜಾವಾಣಿ, ೧೬ ಡಿಸೆಂಬರ್ ೨೦೨೦
ಉಲ್ಲೇಖಗಳು
ಬದಲಾಯಿಸಿ