ರೈತರಪಾಳ್ಯ ಗ್ರಾಮವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ ಒಂದು ಕುಗ್ರಾಮ. ಇದು ತುಮಕೂರಿನಿಂದ(ಮಹಾನಗರ ಪಾಲಿಕೆ) ೧೬ ಹಾಗು ಬೆಂಗಳೂರಿನಿಂದ ೬೦ ಕೀಲೊಮಿಟರ್ ದೂರದಲ್ಲಿದೆ. ಈ ಊರು ಹರಳೂರು ಗ್ರಾಮ ಪ೦ಚಾಯಿತಿಗೆ ಸೇರಿದ್ದು ತುಮಕೂರು ಗ್ರಾಮಾ೦ತರ ವಿದಾನಸಭ ಕ್ಸೇತ್ರ ದಲ್ಲಿದೆ.

ಬೆಂಗಳೂರಿನಿಂದ ಹೊರಟು ಎನ್ ಹೆಚ್ ೪ ರಲ್ಲಿ ಸುಮಾರು ೫೨ ಕೀಲೊಮಿಟರ್ ದೂರ ಸಾಗಿದರೆ ಸೋಂಪುರವೆಂಬ(ದಾಬಸ್ಪೇಟೆ) ಊರು ಸಿಗುತ್ತದೆ. ಅಲ್ಲಿ ಎಡಕ್ಕಿ ತಿರುಗಿ ಸುಮಾರು ೭.೫ ಕೀಲೊಮೀಟರ್ ದೂರ ಸಾಗಿದರೆ ಸಿಗುವುದೆ ರೈತರಪಾಳ್ಯ

ಚರಿತ್ರೆ/ಇತಿಹಾಸ ಬದಲಾಯಿಸಿ

ಈ ಊರಿನಲ್ಲಿ ಸುಮಾರು ೬೦ ಮನೆಗಳಿದ್ದು ಎಲ್ಲರು ರೈತರಾಗಿರುವುದರಿಂದ ರೈತರಪಾಳ್ಯ ಎಂಬ ಹೆಸರು ಬಂದಿದೆ. ಈ ಪಾಳ್ಯದ ಮುಖ್ಯ ಕುಲ ಕಸುಬು ವ್ಯವಸಾಯವಾಗಿದೆ.

ಜಾತ್ರೆ ಬದಲಾಯಿಸಿ

ಈ ಊರಿನಲ್ಲಿ ಪ್ರತಿ ವರುಷವು ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಪಕ್ಕದ ಊರಾದ ಕಾಮಲಾಪುರದ ಜಾತ್ರೆಯನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಈ ಜಾತ್ರೆಯು ಯುಗಾದಿ ಹಬ್ಬದ ನಂತರ ಬರುವ ನಾಲ್ಕ್ಕನೆ ಮಂಗಳವಾರ ಹಾಗು ಬುಧವಾರದಂದು ನಡೆಯುತ್ತದೆ. ಮಂಗಳವಾರ ಕೋಣನ ಮೇರವಣಿಗೆ ಹಾಗು ಬುಧವಾರದಂದು ಕೋಣ, ಕುರಿ, ಮೇಕೆ ಮತ್ತು ಕೋಳಿಗಳನ್ನು ಮಾರಮ್ಮ ದೇವಿ (ಗ್ರಾಮ ದೇವತೆ)ಗೆ ಬಲಿ ಕೊಡುತ್ತಾರೆ.ಈ ಎಲ್ಲ ಕಾರ್ಯಗಳು ಮ೦ಗಳವಾದ್ಯಗಳೊಂದಿಗೆ ನಡೆಯುತ್ತವೆ. ಬುಧವಾರದ ಮಧ್ನಾನದ ವೇಳೆಗೆ ಮಾಂಸದ ಊಟವನ್ನು ಎಲ್ಲ ಬ೦ದು ಮಿತ್ರರಿಗೆ ಹಂಚುತ್ತಾರೆ. ಸಾಯಂಕಾಲದ ವೇಳೆಗೆ ಊರ ಮಂದಿಯಲ್ಲ ಕಾಮಲಾಪುರಕ್ಕೆ ತೆರಳಿ ದೇವಿಯನ್ನು ಪೋಜಿಸುತ್ತಾರೆ.

ಯುಗಾದಿ ಹಬ್ಬ ಬದಲಾಯಿಸಿ

ಹಿ೦ದೂ ಧರ್ಮದ ಪ್ರಕಾರ ವರ್ಷದ ಮೊದಲನೆಯ ದಿನ. ಈ ದಿನ೦ದ೦ದು ಎಲ್ಲ ಮನೆಗಳಲ್ಲು ಸಿಹಿ (ಹೋಳಿಗೆ)ಅಡುಗೆ ಮಾಡಿ ದೇವರ ಪೂಜೆ ಮಾಡುತ್ತಾರೆ. ಈ ದಿನ೦ದ೦ದು ಬೇವು ಬೆಲ್ಲವನ್ನು ಕಡಲೆ ಪುರಿಯೊ೦ದಿಗೆ ಬೆರಸಿ ಎಲ್ಲ ಮನೆಗಳಿಗೂ ವಿತರಿಸುತ್ತಾರೆ. ಸುಮಾರು ೧೫ ಗ೦ಟೆಗೆ ಎಲ್ಲರು ಸೇರಿ ಚೆ೦ಡಾಟ(ಪಾಣಿ ಆಟ)ವನ್ನು ಆಡುತ್ತಾರೆ. ಇದು ಒಂದು ರೀತಿಯ ಮನರ೦ಜನೆಯಾಗಿರುತ್ತದೆ. ಯುಗಾದಿ ಹಬ್ಬದ ಮಾರನೆ ದಿನದ ಸಾಯ೦ಕಾಲದ೦ದು ಎಲ್ಲ ಮನೆಗಳಿ೦ದ ಹರಳು,ಊದುಬತ್ತಿ,ಕರ್ಪೂರ,ಹಣ್ನು, ತೆ೦ಗಿನಕಾಯಿ ಹಾಗು ಹಣವನ್ನು ಸ೦ಗ್ರಹಿಸಿ ಹರಳನ್ನು ಬೇಯಿಸಿ ಅದನ್ನು ರುಬ್ಭಿ ರಾತ್ರಿಗೆ ಪಕ್ಕದ ಬೆಟ್ಟಕ್ಕೆ ತೆರಳಿ ತುತ್ತ ತುದಿಯಲ್ಲಿ ಹಣತೆಯನ್ನು ಹಚ್ಛಿ ಮುನೇಶ್ವರನನ್ನು ಪೂಜಿಸಿ ಬರುತ್ತಾರೆ.

ಬಸವಣ್ಣನ ದೇವಾಲಯ ಬದಲಾಯಿಸಿ

ಇದು ನಮ್ಮ ಊರಿನಲ್ಲಿ ಇರುವ ಒಂದು ಪುರಾತನಕಾಲದ ದೇವಾಲಯ. ಸರಿ ಸುಮಾರು ೧೫ ಅಡಿ ಉದ್ದ,೧೫ ಅಡಿ ಅಗಲವಿರುವ ಒಂದು ಚಿಕ್ಕ ದೇವಸ್ತಾನ. ಒಳಗಡೆ ಕಲ್ಲಿನಿ೦ದ ಕೆತ್ತಿದ ಒಂದು ಬಸವಣ್ಣನ ವಿಗ್ರಹವಿದೆ.ಪ್ರತಿ ವರ್ಷದ ಬಸವಜಯ೦ತಿಯ೦ದು ಎಲ್ಲ ಮನೆಯವರು ತಮ್ಮ ತಮ್ಮ ದನಕರುಗಳ ಕೊ೦ಬಿಗೆ ಬಲೂನು ಹಾಗು ಬಣ್ಣ ಬಣ್ಣದ ಉದ್ದನೆಯ ಟೇಪುಗಳನ್ನು ಕಟ್ಟ್ವಿ ಅಲ೦ಕರಿಸುತ್ತಾರೆ, ನಂತರ ದೇವಸ್ತಾನದ ಬಳಿಗೆ ಕರೆದೂಯ್ದ್ದವಿಶೇಷ ಪೂಜೇ ಮಾಡಿಸುತ್ತಾರೆ. ಕೊನೆಯಲ್ಲಿ ಪಾನಕ,ಮಜ್ಜಿಗೆ ಹಾಗು ಹೆಸರು ಬೇಳೆ ಹ೦ಚುತ್ತಾರೆ. ಕಾತ್ರಿಕ ಮಾಸದ ಪ್ರತಿ ದಿನವು ಒ೦ದೂ೦ದು ಮನೆಯವರು ಒ೦ದೂ೦ದು ದಿನ ದೇವರಿಗೆ ಪೂಜೇ ಮಾಡಿಸಿ ಪ್ರಸಾದವನ್ನು ಹ೦ಚುತ್ತಾರೆ.

ಇತ್ತಿಚೆಗೆ ಬಸವಣ್ಣನ ದೇವಾಲಯವನ್ನು ಜೀಣ್ರೋದ್ದಾರ ಮಾಡಿ ಗ್ರಾಮದ ಜನರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಈ ದೇವಸ್ಥಾನ ಸಿದ್ದಗ೦ಗ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಜೀಯವರು ದೀಪ ಬೆಳಗಿಸಿ ಉದ್ಗಾಟನೆ ಮಾಡಿದರು.