ರೆಕ್ಟಸ್ ಅಬ್ಡೋಮಿನಿಸ್ ಸ್ನಾಯು

  1. REDIRECT Template:Infobox muscle

ರೆಕ್ಟಸ್ ಅಬ್ಡೋಮಿನಿಸ್ ಸ್ನಾಯು ಮಾನವನ ಹೊಟ್ಟೆಯ (ಮತ್ತು ಕೆಲವು ಇತರ ಪ್ರಾಣಿಗಳ) ಮುಂಭಾಗದ ಹೊರಪದರದ ಎರಡೂ ಪಾರ್ಶ್ವದಲ್ಲಿ ಲಂಬವಾಗಿರುವ ಜೋಡಿ ಸ್ನಾಯುವಾಗಿದೆ. ಲಿನಿಯಾ ಆಲ್ಬಾ (ಬಿಳಿ ಗೆರೆ) ಎಂಬ ಸಂಯೋಜಕ ಅಂಗಾಶದ ಮಧ್ಯರೇಖೆಯಿಂದ ಬೇರ್ಪಟ್ಟ ಎರಡು ಸಮಾಂತರ ಸ್ನಾಯುಗಳಿವೆ. ಇದು ಪ್ಯೂಬಿಸ್‌ನ ಅಸ್ಥಿಸಂಗಮ/ಪ್ಯೂಬಿಸ್‌ನ ಎಲುಬಿನ ಏಣುವಿನಿಂದ ಮೇಲ್ತೆರನಾಗಿ ಕ್ಸಿಫಿಸ್ಟೆರ್ನಮ್/ಕ್ಸಿಫಾಯ್ಡ್ ಪ್ರೋಸೆಸ್(ಎದೆಮೂಳೆಯ ಕೆಳತುದಿಯ ದುರ್ಮಾಂಸ, ಗಂತಿ ಬೆಳವಣಿಗೆ ಪ್ರಕ್ರಿಯೆ)ನವರೆಗೆ ಮತ್ತು ಕೆಳಗಿನ ಪಕ್ಕೆಲುಬುಗಳ ಮೃದ್ವಸ್ಥಿ ಗಳಲ್ಲಿ (5–7) ಮೇಲ್ತೆರನಾಗಿ ಚಾಚಿಕೊಂಡಿದೆ.

ಇದು ರೆಕ್ಟಸ್ ಕೋಶದಲ್ಲಿ ಕಂಡುಬರುತ್ತದೆ.

ರೆಕ್ಟಸ್ ಸಾಮಾನ್ಯವಾಗಿ ಸ್ನಾಯುರಜ್ಜುಗಳಿಂದ ಕೂಡಿದ ಒಳರಚನೆಯಿಂದ ಕೂಡಿಸಲ್ಪಟ್ಟ ಮೂರು ನಾರಿನಿಂದ ಕೂಡಿದ ಪಟ್ಟಿಗಳಿಂದ ಛೇದಿಸಲ್ಪಡುತ್ತದೆ. "ಸಿಕ್ಸ್‌ಪ್ಯಾಕ್" ಬಹುಮಟ್ಟಿಗೆ ರೆಕ್ಟಸ್‌ನ ಹೊಟ್ಟೆಯ ಸ್ನಾಯುವಿನ ಸಾಮಾನ್ಯ ರಚನೆಯಾಗಿದೆ. ಇದರಲ್ಲಿ ವಿರಳ ಅಂಗರಚನಾಶಾಸ್ತ್ರದ ಭಿನ್ನತೆಗಳು ಕಂಡುಬರುತ್ತವೆ, ಇದು ಎಂಟು, ('ಯೆಯ್ಟ್‌ಪ್ಯಾಕ್'), ಹತ್ತು ಅಥವಾ ಅಸಮಪಾರ್ಶ್ವದಲ್ಲಿ ಜೋಡಿಸಲಾದ ಭಾಗಗಳ ಗೋಚರತೆಗೆ ಕಾರಣವಾಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಈ ಎಲ್ಲಾ ಭಿನ್ನತೆಗಳು ಕ್ರಿಯೆಗಳಿಗೆ ಸಂಬಂಧಪಟ್ಟಂತೆ ಸಮವಾಗಿರುತ್ತವೆ.

ಕ್ರಿಯೆಸಂಪಾದಿಸಿ

ರೆಕ್ಟಸ್ ಅಬ್ಡೋಮಿನಿಸ್ ಒಂದು ಪ್ರಮುಖ ದೇಹವಿನ್ಯಾಸದ ಸ್ನಾಯುವಾಗಿದೆ. ಇದು "ಶಬ್ದಮಾಡಿ ತಿನ್ನುವಾಗ" ಆಗುವಂತೆ, ಸೊಂಟದ ಬೆನ್ನೆಲುಬನ್ನು ಬಾಗಿಸಲು ಜವಾಬ್ದಾರವಾಗಿರುತ್ತದೆ. ಪಕ್ಕೆಲುಬು ಪಂಜರವನ್ನು ವಸ್ತಿಕುಹರ(ಪೆಲ್ವಿಸ್)ವು ಸ್ಥಿರವಾಗಿರುವಾಗ ವಸ್ತಿಕುಹರದವರೆಗೆ ತರಬಹುದು ಅಥವಾ ಪಕ್ಕೆಲುಬು ಪಂಜರವು ಸ್ಥಿರವಾಗಿರುವಾಗ ವಸ್ತಿಕುಹರವನ್ನು ಪಕ್ಕೆಲುಬು ಪಂಜರದವರೆಗೆ ತರಬಹುದು (ಹಿಂಭಾಗದ ವಸ್ತಿಯ ಓರೆಯಾಗಿರುವಿಕೆ), ಕಾಲು-ಸೊಂಟವನ್ನು ಎತ್ತುವಂತೆ. ಎರಡನ್ನು ಸ್ಥಿರವಾಗಿರಿಸದೆ ಇದ್ದಾಗ ಎರಡನ್ನೂ ಒಟ್ಟಿಗೆ ಒಮ್ಮೆಲೆ ಒಂದೇ ಸ್ಥಾನಕ್ಕೆ ತರಬಹುದು.

ರೆಕ್ಟಸ್ ಅಬ್ಡೋಮಿನಿಸ್ ಉಸಿರಾಟಕ್ಕೆ ನೆರವು ನೀಡುತ್ತದೆ ಮತ್ತು ರೋಗಿಯು ಉಸಿರಾಟದ ತೊಂದರೆಯನ್ನು ಅನುಭವಿಸಿದಾಗ ಇದು ಶ್ವಾಸೋಚ್ಛ್ವಾಸದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.[clarification needed] ವ್ಯಾಯಾಮ ಮಾಡುವಾಗ ಅಥವಾ ಭಾರಿ ತೂಕವನ್ನು ಎತ್ತುವಾಗ, ಬಲಯುತ ಮಲವಿಸರ್ಜನೆಯ ಅಥವಾ ಪ್ರಸವದ (ಮಗುವಿಗೆ ಜನ್ಮ ನೀಡುವಾಗ) ಸಂದರ್ಭದಲ್ಲಿ ಇದು ಒಳಗಿನ ಅಂಗಗಳಿಗೆ ಹಾನಿಯಾಗದಂತೆ ಉಳಿಸಲು ಮತ್ತು ಒಳಗಡೆ-ಹೊಟ್ಟೆಯ ಒತ್ತಡವನ್ನು ಉಂಟುಮಾಡಲು ಸಹಾಯ ಮಾಡುತ್ತದೆ.

ರಕ್ತದ ಪೂರೈಕೆಸಂಪಾದಿಸಿ

ರೆಕ್ಟಸ್ ಅಬ್ಡೋಮಿನಿಸ್ ಅಪಧಮನಿಯ ರಕ್ತ ಪೂರೈಕೆಯ ಅನೇಕ ಮೂಲಗಳನ್ನು ಹೊಂದಿದೆ. ಪುನಾರಚನೆ ಶಸ್ತ್ರಚಿಕಿತ್ಸೆಯ ಪರಿಭಾಷೆಯಲ್ಲಿ, ಇದು 2 ಪ್ರಮುಖ ಪೆಡಿಸಲ್‌ಗಳನ್ನು ಹೊಂದಿರುವ ಮ್ಯಾತೆಸ್ ಮತ್ತು ನಹೈ[೧] ಪ್ರಕಾರ III ಸ್ನಾಯುವಾಗಿದೆ. ಮೊದಲನೆಯದಾಗಿ, ಕೆಳಗಿನ ಮೇಲುಹೊಟ್ಟೆಯ ಅಪಧಮನಿ ಮತ್ತು ನರವು (ಅಥವಾ ನರಗಳು) ರೆಕ್ಟಸ್ ಅಬ್ಡೋಮಿನಿಸ್‌ನ ಹಿಂಭಾಗದ ಮೇಲ್ಮೆಯಲ್ಲಿ ಮೇಲ್ತರವಾಗಿ ಸಾಗಿ, ಬಾಗಿರುವ ಗೆರೆಯಲ್ಲಿ ರೆಕ್ಟಸ್ ತಂತುಕೋಶವನ್ನು ಪ್ರವೇಶಿಸಿ, ಈ ಸ್ನಾಯುವಿನ ಕೆಳಗಿನ ಭಾಗಕ್ಕೆ ರಕ್ತವನ್ನು ಪೂರೈಸುತ್ತದೆ. ಎರಡನೆಯದಾಗಿ, ಆಂತರಿಕ ಎದೆಗೂಡಿನ ಅಪಧಮನಿಯ ಅಂತಿಮ ಕವಲು ಮೇಲಿನ ಮೇಲುಹೊಟ್ಟೆಯ ಅಪಧಮನಿಯು ಈ ಸ್ನಾಯುವಿನ ಮೇಲಿನ ಭಾಗಕ್ಕೆ ರಕ್ತವನ್ನು ಪೂರೈಸುತ್ತದೆ. ಅಂತಿಮವಾಗಿ, ಕೆಳಗಿನ ಆರು ಪಕ್ಕೆಲುಬುಗಳ-ಒಳಗಿನ ಅಪಧಮನಿಗಳಿಂದಲೂ ಈ ಸ್ನಾಯುವಿಗೆ ಹಲವಾರು ಸಣ್ಣ ಪ್ರಮಾಣದ ರಕ್ತ ಪೂರೈಕೆಗಳು ಲಭಿಸುತ್ತವೆ.

ನರಗಳ ಜೋಡಣೆಸಂಪಾದಿಸಿ

ಈ ಸ್ನಾಯುಗಳಿಗೆ ಥೊರಾಕೊ-ಅಬ್ಡೋಮಿನಲ್ ನರಗಳಿಂದ ನರಗಳ-ಜೋಡಣೆ ಮಾಡಲಾಗುತ್ತದೆ, ಇವು ರೆಕ್ಟಸ್ ಕೋಶದ ಮುಂಭಾಗದ ಪದರವನ್ನು ಭೇದಿಸುತ್ತವೆ.

ಸ್ಥಾನಸಂಪಾದಿಸಿ

ರೆಕ್ಟಸ್ ಅಬ್ಡೋಮಿನಿಸ್ ಒಂದು ಉದ್ದ, ಚಪ್ಪಟೆಯಾದ ಸ್ನಾಯುವಾಗಿದೆ. ಇದು ಉದರದ ಮುಂಭಾಗದ ಸಂಪೂರ್ಣ ಉದ್ದದಾದ್ಯಂತ ಹರಡಿಕೊಂಡಿರುತ್ತದೆ ಮತ್ತು ಇದು ವಿರುದ್ಧ ದಿಕ್ಕಿನ ಅದರ ಜೋಡಿಯಿಂದ ಲಿನಿಯಾ ಆಲ್ಬಾದ ಮೂಲಕ ಬೇರ್ಪಡುತ್ತದೆ. ಈ ಸ್ನಾಯು ಐದನೇ, ಆರನೇ ಮತ್ತು ಏಳನೇ ಪಕ್ಕೆಲುಬುಗಳ ಮೃದ್ವಸ್ಥಿಗಳಲ್ಲಿ ಅಸಮ ಗಾತ್ರದ ಮೂರು ಭಾಗಗಳಲ್ಲಿ ಒಳಸೇರಿರುತ್ತದೆ. ಐದನೇ ಪಕ್ಕೆಲುಬಿನ ಮೃದ್ವಸ್ಥಿಗೆ ಬಹುಮಟ್ಟಿಗೆ ಹೊಂದಿಕೊಂಡ ಮೇಲಿನ ಭಾಗವು ಸಾಮಾನ್ಯವಾಗಿ ಪಕ್ಕೆಲುಬಿನ ಮುಂಭಾಗದ ತುದಿಗೆ ಒಳಸೇರಿರುವ ಕೆಲವು ತಂತುಗಳನ್ನು ಹೊಂದಿರುತ್ತದೆ.

ಕೆಲವು ತಂತುಗಳು ಕೋಸ್ಟಾಕ್ಸಿಫಾಯ್ಡ್ ಲಿಗಮೆಂಟುಗಳಿಗೆ ಮತ್ತು ಕ್ಸಿಫಾಯ್ಡ್ ಪ್ರಕ್ರಿಯೆಯ ಬದಿಗೆ ಜೋಡಿಸಿರುತ್ತವೆ.

ಹಾನಿಸಂಪಾದಿಸಿ

ಹೊಟ್ಟೆಯ ಸ್ನಾಯುವಿನ ಸೆಳೆತವೆಂದೂ ಕರೆಯಲಾಗುವ ಹೊಟ್ಟೆಯ ಸ್ನಾಯುವಿನ ನೋವು ಉದರದ ಹೊರಪದರದ ಸ್ನಾಯುಗಳಿಗೆ ಉಂಟಾದ ಘಾಸಿಯಾಗಿರುತ್ತದೆ. ಸ್ನಾಯುವನ್ನು ವಿಪರೀತವಾಗಿ ಎಳೆದರೆ ಸ್ನಾಯುವಿನ ನೋವು ಕಂಡುಬರುತ್ತದೆ. ಇದು ಕಂಡುಬಂದಾಗ ಸ್ನಾಯುವಿನ ತಂತುಗಳು ಛಿದ್ರವಾಗುತ್ತವೆ. ಸಾಮಾನ್ಯವಾಗಿ, ಈ ನೋವು ಸ್ನಾಯುವಿನೊಳಗೆ ಸೂಕ್ಷ್ಮ ಛಿದ್ರತೆಯನ್ನು ಉಂಟುಮಾಡುತ್ತದೆ. ಆದರೆ ಕೆಲವೊಮ್ಮೆ ತೀವ್ರ ಪೆಟ್ಟಿನ ಸಂದರ್ಭದಲ್ಲಿ, ಸ್ನಾಯು ಅದರ ಜೋಡಣೆಯಿಂದ ಛಿದ್ರವಾಗಬಹುದು.

ಪ್ರಾಣಿಗಳುಸಂಪಾದಿಸಿ

 
ಬೆಕ್ಕಿನ ಜಾತಿಯ ಪ್ರಾಣಿಯ ರೆಕ್ಟಸ್ ಅಬ್ಡೋಮಿನಿಸ್ ಸ್ನಾಯು.ಈ ಮಾದರಿಯು ಕೆಲವು ಉಳಿದಿರುವ ತಂತುಕೋಶಗಳನ್ನು ಹೊಂದಿದೆ ಮತ್ತು ಹೊರಗಿನ ಓರೆಯಾದ-ಸ್ನಾಯುವನ್ನು ತೋರಿಸುತ್ತಿದೆ.

ರೆಕ್ಟಸ್ ಅಬ್ಡೋಮಿನಿಸ್ ಹೆಚ್ಚಿನ ಕಶೇರುಕಗಳಲ್ಲಿ ಒಂದೇ ರೀತಿಯಿರುತ್ತದೆ. ಪ್ರಾಣಿ ಮತ್ತು ಮಾನವರ ಹೊಟ್ಟೆಯ ಸ್ನಾಯುರಚನೆಯ ನಡುವಿನ ಸ್ಪಷ್ಟ ವ್ಯತ್ಯಾಸವೆಂದರೆ - ಪ್ರಾಣಿಗಳಲ್ಲಿ, ವಿವಿಧ ಸಂಖ್ಯೆಯ ಸ್ನಾಯುರಜ್ಜುಗಳಿಂದ ಕೂಡಿದ ಒಳರಚನೆಗಳಿರುತ್ತವೆ.

ಹೆಚ್ಚುವರಿ ಚಿತ್ರಗಳುಸಂಪಾದಿಸಿ

ಇವನ್ನೂ ಗಮನಿಸಿಸಂಪಾದಿಸಿ

  • ರೆಕ್ಟಸ್ ಅಬ್ಡೋಮಿನಿಸ್ ಸ್ನಾಯುಗಳ ಕವಲೊಡೆಯುವಿಕೆ

ಉಲ್ಲೇಖಗಳುಸಂಪಾದಿಸಿ

  1. ಮ್ಯಾತೆಸ್ ಎಸ್‌ಜೆ, ನಹೈ ಎಫ್. ಕ್ಲಾಸಿಫಿಕೇಶನ್ ಆಫ್ ದಿ ವಾಸ್ಕ್ಯುಲಾರ್ ಅನಾಟಮಿ ಆಫ್ ಮಸಲ್ಸ್: ಎಕ್ಸ್ಪರಿಮೆಂಟಲ್ ಆಂಡ್ ಕ್ಲಿನಿಕಲ್ ಕೊರಿಲೇಶನ್. ಪ್ಲಾಸ್ಟ್ ರಿಕಂಸ್ಟರ್ ಸರ್ಜ್. ಫೆಬ್ರವರಿ 1981;67(2):177-87.

ಬಾಹ್ಯ ಕೊಂಡಿಗಳು‌ಸಂಪಾದಿಸಿ

  1. REDIRECT Template:Muscles of abdomen