ರಿಯಲ್‌ಮಿ

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ

ರಿಯಲ್‌ಮಿ ಚೀನಾ ದೇಶದ, ಶೆನ್ಝೆನ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ. ಈ ಬ್ರಾಂಡ್ ಅನ್ನು ಅಧಿಕೃತವಾಗಿ ಮೇ ೪, ೨೦೧೮ರಂದು (ಚೀನಾದಲ್ಲಿ ರಾಷ್ಟ್ರೀಯ ಯುವ ದಿನ) ಸ್ಕೈ ಲಿ(ಒಪ್ಪೊ ಸಂಸ್ಥೆಯ ಮಾಜಿ ಉಪಾಧ್ಯಕ್ಷ) ಸ್ಥಾಪಿಸಿದರು.ಸ್ಮಾರ್ಟ್‌ಫೋನ್ ಅಲ್ಲದೆ ಟೆಲಿವಿಷನ್, ಹೆಡ್‌ಫೋನ್‌ಗಳು, ಫಿಟ್‌ನೆಸ್ ಬ್ಯಾಗ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌‌ಗಳಂತಹ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನೂ ಸಹ ಕಂಪನಿಯು ಉತ್ಪಾದಿಸುತ್ತದೆ.

ರಿಯಲ್‌ಮಿ
ಸ್ಥಾಪನೆಮೇ 4, 2018; 2366 ದಿನ ಗಳ ಹಿಂದೆ (2018-೦೫-04)
ಸಂಸ್ಥಾಪಕ(ರು)ಸ್ಕಿ ಲಿ
ಮುಖ್ಯ ಕಾರ್ಯಾಲಯಶೆನ್ಝೆನ್, ಗ್ವಾಂಗಡೊಂಗ್, ಚೀನಾ
ವ್ಯಾಪ್ತಿ ಪ್ರದೇಶಜಾಗತಿಕ
ಪ್ರಮುಖ ವ್ಯಕ್ತಿ(ಗಳು)ಮಾಧವ ಸೇಠ್ (ಭಾರತದಲ್ಲಿ), ಜೋಸೆಫ್ ವಾಂಗ್ (ಇಂಡೊನೇಷಿಯ)
ಉದ್ಯಮಇಲೆಕ್ಟ್ರಾನಿಕ್ಸ್
ಉತ್ಪನ್ನಸ್ಮಾರ್ಟ್‍ಫೋನ್
ಪೋಷಕ ಸಂಸ್ಥೆಬಿ ಬಿ ಕೆ ಇಲೆಕ್ಟ್ರಾನಿಕ್ಸ್
ಜಾಲತಾಣwww.realme.com

ಇತಿಹಾಸ

ಬದಲಾಯಿಸಿ

ರಿಯಲ್‌ಮಿ ಮೊದಲ ಬಾರಿಗೆ ಚೀನಾದಲ್ಲಿ ೨೦೧೦ರಲ್ಲಿ ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಅಂಗಸಂಸ್ಥೆಯಾದ ಒಪ್ಪೊದ ಉಪಬ್ರಾಂಡ್ ರೂಪದಲ್ಲಿ, ಒಪ್ಪೊ ರಿಯಲ್ ಹೆಸರಿನಲ್ಲಿ ಕಾಣಿಸಿಕೊಂಡಿತು[][].

ಜುಲೈ ೩೦, ೨೦೧೮ರಂದು, ಒಪ್ಪೊ ಸಂಸ್ಥೆಯ ಉಪಾಧ್ಯಕ್ಷ ಸ್ಕೈ ಲಿ, ರಿಯಲ್‌ಮಿಯನ್ನು ಸ್ವತಂತ್ರ ಬ್ರಾಂಡ್ ಆಗಿ ಸ್ಥಾಪಿಸುವ ಉದ್ದೇಶವನ್ನು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವೀಬೊದಲ್ಲಿ ಪ್ರಕಟಿಸಿದರು. ನವೆಂಬರ್ ೨೦೧೮ರಲ್ಲಿ, ರಿಯಲ್‌ಮಿ ಯ ಹೊಸ ಲೋಗೊವನ್ನು ಪರಿಚಯಿಸಲಾಯಿತು.

ಮೇ ೧೫, ೨೦೧೯ರಂದು, ಚೀನಾದ ಬೀಜಿಂಗ್‌ನಲ್ಲಿ ನಡೆದ ಸಮಾರಂಭದಲ್ಲಿ ರಿಯಲ್‌ಮಿ, ಅಧಿಕೃತವಾಗಿ ಚೀನೀ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಿಸಿತು[]. ಇದರ ಅಂಗವಾಗಿ, ರಿಯಲ್‌ಮಿ ಎಕ್ಸ್, ರಿಯಲ್‌ಮಿ ಎಕ್ಸ್ ಲೈಟ್ ಮತ್ತು ರಿಯಲ್‌ಮಿ ಎಕ್ಸ್ ಮಾಸ್ಟರ್ ಸ್ಮಾರ್ಟ್‌ಫೋನ್ ಮಾದರಿಗಳನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿತು.

ಜೂನ್ ೨೦೧೯ರಂದು ರಿಯಲ್‌ಮಿ, ಯುರೋಪ್ ದೇಶಗಳ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿತು[].

ಜುಲೈ ೨೦೧೯ರ ಹೊತ್ತಿಗೆ, ಚೀನಾ, ಭಾರತ, ಆಗ್ನೇಯ ಏಷ್ಯಾ ಮತ್ತು ಯುರೋಪ್ ಸೇರಿದಂತೆ ೨೦ ದೇಶಗಳ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಯಶಸ್ವಿಯಾಗಿ ಪ್ರವೇಶ ಪಡೆದಿತ್ತು[].

ಅಂತರರಾಷ್ಟ್ರೀಯ ವಿಶ್ಲೇಷಣಾ ಸಂಸ್ಥೆ ಕೌಂಟರ್‌ಪಾಯಿಂಟ್‌ನ ವರದಿಯ ಪ್ರಕಾರ, ರಿಯಲ್‌ಮಿ ಸಂಸ್ಥೆಯ ೨೦೧೯ನೇ ಇಸವಿಯಲ್ಲಿನ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ, ರಿಯಲ್‌ಮಿ, ವಿಶ್ವಾದ್ಯಂತ ೪೭ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಮತ್ತು ಈ ಮಾರಾಟ ದರ ವರ್ಷದಿಂದ ವರ್ಷಕ್ಕೆ ೮೪೮% ನಷ್ಟು ಹೆಚ್ಚಳವಾಗುತ್ತಾ ಸಾಗಿದೆ. ಈ‌ ಕಾರಣದಿಂದಾಗಿ ರಿಯಲ್‌ಮಿ, ವಿಶ್ವದ ಅಗ್ರ ೧೦ ಮೊಬೈಲ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ[].

ಆಗಸ್ಟ್ ೨೦೧೯ರ ಹೊತ್ತಿಗೆ, ರಿಯಲ್‌ಮಿ ವಿಶ್ವದಾದ್ಯಂತ ೧೦ ಮಿಲಿಯನ್(1 ಕೋಟಿ) ಗ್ರಾಹಕರನ್ನು ಹೊಂದಿತ್ತು[].

ಸರಿಸುಮಾರು ಇದೇ ಸಮಯದಲ್ಲಿ, ರಿಯಲ್‌ಮಿ ಚೀನಾ ಮತ್ತು ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗಾಗಿ ೬೪ ಮೆಗಾ ಪಿಕ್ಸೆಲ್‌ನ, ಕ್ವಾಡ್‌ ಕ್ಯಾಮೆರಾ ವಿನ್ಯಾಸ ಹೊಂದಿರುವ ಮೂಲಮಾದರಿಯೊಂದನ್ನು‌ ಬಿಡುಗಡೆ ಮಾಡಿತು[].

ಮಾರುಕಟ್ಟೆ ಗಾತ್ರ

ಬದಲಾಯಿಸಿ

ತನ್ನ ಮೊದಲನೆ ವಾರ್ಷಿಕೋತ್ಸವ ವರ್ಷ(ಮೇ ೨೦೧೯)ದಂದು, ರಿಯಲ್‌ಮಿ ಚೀನಾ ಮತ್ತು ತೈವಾನ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಿಸಿತು. ಹಾಗೆ ಕಾಲಿಟ್ಟ ಮೊದಲ ವರ್ಷವೇ ಸುಮಾರು ೧.೫ ಕೋಟಿ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಿತು[].

ರಿಯಲ್‌ಮಿ ತನ್ನ ಮೊದಲ ಸ್ಮಾರ್ಟ್‌ಫೋನ್ ಉತ್ಪನ್ನವಾದ ರಿಯಲ್‌ಮಿ ೧ನ್ನು ಭಾರತದ ಆನ್‌ಲೈನ್ ಮಾರಾಟ ಮಳಿಗೆಗಳಲ್ಲಿ ಒಂದಾದ ಅಮೆಜಾನ್‌ನಲ್ಲಿ ಮೇ ೨೦೧೮ರಲ್ಲಿ ಬಿಡುಗಡೆ ಮಾಡಿತು[೧೦]. ಜುಲೈ ೨೦೧೯ರ ವೇಳೆಗೆ ಚೀನಾ, ಇಂಡೋನೇಷ್ಯಾ, ಥೈಲ್ಯಾಂಡ್, ಮಲೇಷ್ಯಾ, ಸಿಂಗಾಪುರ್, ಮ್ಯಾನ್ಮಾರ್, ಫಿಲಿಪೈನ್ಸ್, ವಿಯೆಟ್ನಾಂ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಟಲಿ, ಸ್ಪೇನ್, ಮತ್ತು ರಷ್ಯಾ ದೇಶಗಳ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲೀರಿಸಿತು[೧೧]. ೨೦೧೯ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ನವೆಂಬರ್ ೨೦೧೯ರ ಹೊತ್ತಿಗೆ, ರಿಯಲ್‌ಮಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಟ್ಟು ೧೪.೩% ಪಾಲನ್ನು ಹೊಂದಿತ್ತು.[೧೨]

ಸ್ಮಾರ್ಟ್‌ಫೋನ್ ಮಾದರಿಗಳು

ಬದಲಾಯಿಸಿ

ಗಮನಿಸಿ: ಇಲ್ಲಿ ವಿವರಿಸಿದ ಫೋನ್ ಮಾದರಿಗಳು ಉದಾಹರಣೆಗೆ ಮಾತ್ರ. ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾದ, ಹೆಚ್ಚು ಸುಧಾರಿತ ಮಾದರಿಗಳ ಬಗ್ಗೆ ಇಲ್ಲಿ ವಿವರಿಸಲಾಗಿಲ್ಲ.

ರಿಯಲ್‌ಮಿ ೧

ಬದಲಾಯಿಸಿ

ರಿಯಲ್‌ಮಿ ತನ್ನ ಮೊದಲ ಸ್ಮಾರ್ಟ್‌ಫೋನ್ ಉತ್ಪನ್ನ, ರಿಯಲ್‌ಮಿ ೧ನ್ನು, ಭಾರತದಲ್ಲಿ ಮೇ ೨೦೧೮ರಲ್ಲಿ ಬಿಡುಗಡೆ ಮಾಡಿತು. ಈ ಮಾದರಿಯು ೬.೦-ಇಂಚಿನ ಫುಲ್ಎಚ್‌ಡಿ + ರೆಸಲ್ಯೂಶನ್ ಹೊಂದಿರುವ ೧೮:೯ ಅನುಪಾತ ಇರುವ ಪರದೆಯನ್ನು ಹೊಂದಿದೆ. ಮಿಡಿಯಾಟೆಕ್ ಹೀಲಿಯೊ ಪಿ ೬೦ ಚಿಪ್‌ಸೆಟ್ ಹೊಂದಿದ್ದು, ಸಿಂಗಲ್ ಟೋನ್ ಎಲ್ಇಡಿ ಫ್ಲ್ಯಾಷ್ ಹೊಂದಿರುವ ೧೩ಎಂಪಿ ಸಿಂಗಲ್ ಹಿಂಭಾಗದ ಕ್ಯಾಮೆರಾ, ಎಲ್ಇಡಿ ಫ್ಲ್ಯಾಶ್ ಇಲ್ಲದ ೮ಎಂಪಿ ಮುಂಭಾಗದ ಕ್ಯಾಮೆರಾ, ಮತ್ತು ತೆಗೆಯಲಾಗದ ೩೪೧೦ಎಮ್ಎಹೆಚ್ ಬ್ಯಾಟರಿಯ ಜೊತೆ ಸಂಯೋಜಿತವಾಗಿದೆ. ಇದು ಆರಂಭದಲ್ಲಿ ಮೂರು ಶೇಖರಣಾ ಸಂರಚನೆಗಳಲ್ಲಿ ಲಭ್ಯವಿತ್ತು: ೩ ಜಿಬಿ ರಾಮ್ ಮತ್ತು ೩೨ ಜಿಬಿ ಆಂತರಿಕ ಸಂಗ್ರಹ, ೪ ಜಿಬಿ ರಾಮ್ ಮತ್ತು ೬೪ ಜಿಬಿ ಸಂಗ್ರಹ, ಮತ್ತು ೬ ಜಿಬಿ ರಾಮ್ ಮತ್ತು ೧೨೮ ಜಿಬಿ ಆಂತರಿಕ ಸಂಗ್ರಹ[೧೩].

ಅಮೇಜಾನ್‌ನಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್, ಮೊದಲ ೩೦ ದಿನದಲ್ಲಿ ಒಟ್ಟು ೪೦೦೦೦೦ ಕ್ಕೂ ಹೆಚ್ಚು ಯುನಿಟ್‌ಗಳಷ್ಟು ಮಾರಾಟವಾಯಿತು.

ರಿಯಲ್‌ಮಿ ೨

ಬದಲಾಯಿಸಿ

ರಿಯಲ್‌ಮಿ ೨ನ್ನು ಸೆಪ್ಟೆಂಬರ್ ೪, ೨೦೧೮ರಂದು ಅನಾವರಣಗೊಳಿಸಲಾಯಿತು. ಇದು ೬.೨ ಇಂಚಿನ ಎಚ್‌ಡಿ + ಡಿಸ್ಪ್ಲೇಯೊಂದಿಗೆ ೧ ರ ಅನುಪಾತವನ್ನು ಹೊಂದಿದೆ. ಆಂಡ್ರಾಯ್ಡ್ ೯ರ ಆವೃತ್ತಿಯನ್ನು ಆಧರಿಸಿದ ಕಲರ್‌ಓಎಸ್ ೫.೧ ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. (ಕಲರ್‌ಓಎಸ್‌ನ ಪ್ರಸ್ತುತ ಆವೃತ್ತಿ ೭.೨) ಈ ಸ್ಮಾರ್ಟ್‌ಫೋನ್ ೪೨೩೦ ಎಮ್ಎಹೆಚ್ ಬ್ಯಾಟರಿಯನ್ನು ಮತ್ತು ಮತ್ತು ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ ೪೫೦ ಸಂಸ್ಕಾರಕವನ್ನು ಹೊಂದಿದೆ. ಇದರ ಇಡೀ ದೇಹ ಡೈಮಂಡ್-ಕಟ್ ಗಾಜಿನ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನನ್ನು ಮೂರು ವಿಧದಲ್ಲಿ ಅನ್‌ಲಾಕ್ ಮಾಡಬಹುದಾಗಿದೆ, ಅವು: ಸ್ಮಾರ್ಟ್ ಲಾಕ್, ಫೇಸ್ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್. ರಿಯಲ್‌ಮಿ ೨ ೧೩ಎಂಪಿ + ೨ಎಂಪಿ ಅವಳಿ ಹಿಂಬದಿ ಕ್ಯಾಮೆರಾ ಮತ್ತು ೮ಎಂಪಿ ಸ್ವಂತಿ ಕ್ಯಾಮೆರಾವನ್ನು ಹೊಂದಿದೆ[೧೪]. ಆನ್‌ಲೈನ್ ಮಾರಾಟ ಮಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ, ಬಿಡುಗಡೆಯಾದ ೫ ನಿಮಿಷಗಳಲ್ಲಿ ೨೦೦೦೦೦ ಯುನಿಟ್‌ಗಳು ಬಿಕರಿಯಾದವು.

ರಿಯಲ್‌ಮಿ ೨ ಪ್ರೊ

ಬದಲಾಯಿಸಿ

ರಿಯಲ್‌ಮಿ ೨ ಪ್ರೊ ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್ ೨೦೧೮ರಲ್ಲಿ ಬಿಡುಗಡೆ ಮಾಡಲಾಯಿತು. ಇದು ೬.೩-ಇಂಚಿನ, ಪ್ರತಿ ಇಂಚಿಗೆ ೪೦೯ ಪಿಕ್ಸೆಲ್‌ಗಳಷ್ಟು ಸಾಂದ್ರತೆ ಇರುವ ೧೦೮೦*೨೦೪೦ ಪಿಕ್ಸೆಲ್‌ಗಳ ರೆಸಲ್ಯೂಶನ್‌ ಇರುವ ಸ್ಪರ್ಶಪರದೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಅನ್ನು ಅಕ್ಟೋಬರ್ ೯ರಂದು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಸ್ಮಾರ್ಟ್‌ಫೋನ್, ಅಡ್ರಿನೊ ೫೧೨ ಜಿಪಿಯುನೊಂದಿಗೆ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ ೬೬೦ ೧.೯೫ ಗಿಗಾಹರ್ಟ್ (ಅಂಡರ್ ಕ್ಲಾಕ್) ಆಕ್ಟಾ-ಕೋರ್ ಸಂಸ್ಕಾರಕವನ್ನು ಹೊಂದಿದ್ದು, ೮ ಜಿಬಿ ರ‌್ಯಾಮ್ ಮತ್ತು ೧೨೮ ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ೨೫೬ ಗಿಗಾಬೈಟ್‌ವರೆಗೆ ವಿಸ್ತರಿಸಬಹುದಾಗಿದೆ. ರಿಯಲ್‌ಮಿ ೨ ಪ್ರೊ ೧೬ಎಂಪಿ (ಎಫ್ / ೧.೭) + ೨ಎಂಪಿ (ಎಫ್ / ೨.೪) ಅವಳಿ ಹಿಂಬದಿ ಕ್ಯಾಮೆರಾ ಮತ್ತು ೧೬ಎಂಪಿ (ಎಫ್ / ೨.೦) ಸ್ವಂತಿ ಕ್ಯಾಮೆರಾವನ್ನು ಹೊಂದಿದೆ. ಶಕ್ತಿಯ ಪೂರೈಕೆಗಾಗಿ ೩೫೦೦ ಎಮ್ಎಹೆಚ್ ತೆಗೆಯಲಾಗದ ಬ್ಯಾಟರಿಯನ್ನು ಅಳವಡಿಸಲಾಗಿದೆ ೧೫೬.೭೦x ೭೪.೦೦x ೮.೫೦ ಮಿಲಿಮೀಟರ್ (ಎತ್ತರ x ಅಗಲ x ದಪ್ಪ) ಮತ್ತು ೧೭೪ ಗ್ರಾಂ ತೂಗುತ್ತದೆ. ಇದು ಆಂಡ್ರಾಯ್ಡ್ ೮.೧ (ಓರಿಯೊ) ಆಧಾರಿತ ಕಲರ್ ಓಎಸ್ ೫.೨ ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೂನ್ ೨೦೨೦ ರಂದು ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮಿ ಯುಐ ನವೀಕರಣವನ್ನು ಸ್ವೀಕರಿಸಲಿದೆ.

ರಿಯಲ್‌ಮಿ ೨ ಪ್ರೊ ಡ್ಯುಯಲ್ ನ್ಯಾನೋ ಸಿಮ್+ ಮೆಮರಿ ಸ್ಲಾಟ್ (ಜಿಎಸ್ಎಂ + ಜಿಎಸ್ಎಂ) ವ್ಯವಸ್ಥೆಯನ್ನು ಹೊಂದಿದ್ದು, ವೈ-ಫೈ, ಜಿಪಿಎಸ್, ಬ್ಲೂಟೂತ್, ಯುಎಸ್‌ಬಿ ಒಟಿಜಿ, ಮೈಕ್ರೋ-ಯುಎಸ್‌ಬಿ, ಎರಡೂ ಸಿಮ್ ಕಾರ್ಡ್‌ಗಳಲ್ಲಿ ಆಕ್ಟಿವ್ ೪ಜಿ, ಮತ್ತು ೨ಜಿ ಮತ್ತು 4 ಜಿ (ಭಾರತದ ಕೆಲವು ಎಲ್‌ಟಿಇ ನೆಟ್‌ವರ್ಕ್‌ಗಳು ಬಳಸುವ ಬ್ಯಾಂಡ್ ೪೦ಗೆ ಬೆಂಬಲದೊಂದಿಗೆ) ಸೇರಿವೆ. ಫೋನ್‌ನಲ್ಲಿನ ಸಂವೇದಕಗಳಲ್ಲಿ ಫೇಸ್ ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್, ದಿಕ್ಸೂಚಿ / ಮ್ಯಾಗ್ನೆಟೋಮೀಟರ್, ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೋಪ್ ಸೇರಿವೆ[೧೫].

ರಿಯಲ್‌ಮಿ ಸಿ ೧

ಬದಲಾಯಿಸಿ

ರಿಯಲ್‌ಮಿ ೨ ಪ್ರೊ ಬಿಡುಗಡೆಯಾದ ಒಂದು ತಿಂಗಳ ನಂತರ (ಅಕ್ಟೋಬರ್ ೧೧ ೨೦೧೮) ರಿಯಲ್‌ಮಿ ಸಿ ೧ಅನ್ನು ಬಿಡುಗಡೆ ಮಾಡಲಾಯಿತು. ಸ್ನಾಪ್‌ಡ್ರಾಗನ್ ೪೫೦ ೧.೮ GHz ಆಕ್ಟಾ-ಕೋರ್ ಸಂಸ್ಕಾರಕ ಇದರಲ್ಲಿದೆ. ಆಂಡ್ರಾಯ್ಡ್ ಆಧಾರಿತ ಕಲರ್ ಒಎಸ್ ೫.೧ನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ[೧೬].

ಈ ಸ್ಮಾರ್ಟ್‌ಫೋನ್ ೬.೨ ಇಂಚಿನ ಎಚ್‌ಡಿ+ (೧೫೨೦*೭೨೦ ಪಿಕ್ಸೆಲ್, ೧೯:೯ ಅನುಪಾತ) ಪರದೆಯನ್ನು ಹೊಂದಿದ್ದು, ಸ್ಕ್ರೀನ್-ಟು-ಬಾಡಿ ಅನುಪಾತವು ೮೮.೮ ಪ್ರತಿಶತದಷ್ಟಿದೆ. ೧೩ಎಂಪಿ+೨ಮೆಗಾಪಿಕ್ಸೆಲ್‌ನ ಅವಳಿ ಹಿಂಬದಿ ಕ್ಯಾಮೆರಾ ಮತ್ತು ೫ಮೆಗಾಪಿಕ್ಸೆಲ್‌ನ (ಎಫ್ / ೨.೨) ಸ್ವಂತೀ ಕ್ಯಾಮೆರಾವನ್ನು ಹೊಂದಿದೆ. ಇದು ೪೨೩೦ ಎಮ್‍ಎ‍ಎಚ್ ಬ್ಯಾಟರಿ, 2 ಜಿಬಿ ರ‌್ಯಾಮ್, ಮತ್ತು ೧೬ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದೆ.

ಫಿಲಿಪೈನ್ಸ್‌ನಲ್ಲಿ ಈ ಫೋನನ್ನು ನವೆಂಬರ್ ೨೯, ೨೦೧೮ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು ಮತ್ತು ಅದರ ಮಿಂಚಿನ ಮಾರಾಟವು ಡಿಸೆಂಬರ್ ೨೫, ೨೦೧೮ರಂದು ನಡೆಸಲಾಯಿತು[೧೭].

ಜನವರಿ ೨೮, ೨೦೧೯ರಂದು, ರಿಯಲ್‌ಮಿ ಸಿ ೧ರ ಎರಡು ಹೊಸ ಆವೃತ್ತಿಗಳನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸಿತು. ಈ ಎರಡು ಆವೃತ್ತಿಗಳಲ್ಲಿ ೨ಜಿಬಿ ರಾಮ್ /೩೨ ಜಿಬಿ ಸಂಗ್ರಹ ಮತ್ತು ೩ಜಿಬಿ ರಾಮ್/೩೨ಜಿಬಿ ಸಂಗ್ರಹದೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು. ಉಳಿದಂತೆ ಬೇರೆ ಯಾವುದೇ ಬದಲಾವಣೆಗಳು ಇಲ್ಲ[೧೮].

ಇವನ್ನೂ ಗಮನಿಸಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Parent company of OnePlus, Oppo could soon surpass Samsung as top dog". Android authority. Android authority. Retrieved 23 June 2020.
  2. "Realme is a new e-commerce-only sub-brand from OPPO". Android Authority. Android Authority. Retrieved 23 June 2020.
  3. "Realme officially announces its entry in China". Gizmochina.com. Gizmochina. Retrieved 23 June 2020.
  4. "Realme Comes to Europe: Featuring "Dare-to-Leap" Experience with Premium Products". Pandaily.com. Pandaily. Retrieved 23 June 2020.
  5. "Worldwide user of realme has passed 10 million". www.technologytimes.pk. technologytimes. Archived from the original on 2019-08-23. Retrieved 2020-06-23.
  6. "Worldwide user of realme has passed 10 million". www.technologytimes.pk. technologytimes. Archived from the original on 2019-08-23. Retrieved 2020-06-23.
  7. "Worldwide user of realme has passed 10 million". www.technologytimes.pk. technologytimes. Archived from the original on 2019-08-23. Retrieved 2020-06-23.
  8. "Hands-on with the Realme 64MP Quad camera prototype: First base with 64MP". xda-developers.com. XDA Developer. Retrieved 23 June 2020.
  9. "Realme officially announces its entry in China". Gizmochina.com. Gizmochina. Retrieved 23 June 2020.
  10. "RealMe 1". Digit.in. 9.9 group. Archived from the original on 2020-06-25. Retrieved 2020-06-23.
  11. "REALME PEGGED AS FASTEST GROWING MOBILE BRAND WITH MORE THAN 10 MILLION USERS". Hungrygeeks.ph. Hungrygeeks. Archived from the original on 23 ಆಗಸ್ಟ್ 2019. Retrieved 23 June 2020.
  12. "Realme takes chunk of India mobile market as Samsung slides". Theverge.com. THE VERGE. Retrieved 23 June 2020.
  13. "Realme 1". gadgets.ndtv.com. NDTV. Retrieved 23 June 2020.
  14. "Realme 2". gadgets.ndtv.com. NDTV. Retrieved 23 June 2020.
  15. "Realme 2 pro". gadgets.ndtv.com. NDTV.
  16. "Realme C1 review: makes it's presence felt". Gadgetsnow.com. Gadgets now. Retrieved 27 June 2020.
  17. "Realme C1 Review". YugaTech.com. YugaTech.
  18. "Realme introduces two new RAM Storage variants of RealMe C1". TechloMedia.in. TechloMedia. Retrieved 27 June 2020.