ರಿಚಿ ಬೆನಾಡ್ ಇವರು ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕರು, ಉತ್ತಮ ಲೆಗ್ ಸ್ಪಿನ್ ಬೌಲರರು. ಇವರು ೧೯೬೪ರಲ್ಲಿ ಕ್ರಿಕೆಟ್ ದಿಂದ ನಿವೃತ್ತಿಯನ್ನು ಹೊಂದಿದರು. ನಿವೃತ್ತಿಯ ನಂತರ ಇವರು ಕ್ರಿಕೆಟ್ ವಿವರಣೇಕಾರರಾಗಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇಂದಿಗೂ ಕ್ರಿಕೆಟ್ ವಿವರಣೆಯನ್ನು ಆಸ್ಟ್ರೇಲಿಯಾದ ಚ್ಯಾನೆಲ್ ೯ ಮೂಲಕ ನೀಡುತ್ತಿದ್ದಾರೆ.
ಇವರು ಟೆಸ್ಟ್ ಕ್ರಿಕೆಟ್ನ ಉತ್ತಮ ಆಲ್-ರೌಂಡರ್ರಲ್ಲಿ ಒಬ್ಬರು. ಇವರ ಹಾಗೆಯೇ ಬೌಲಿಂಗ್ ಆಲ್-ರೌಂಡರ್ ಆಗಿದ್ದ ಆಲನ್ ಡೇವಿಡ್ಸನ್ ಜೊತೆಗೂಡಿ ಆಸ್ಟ್ರೇಲಿಯಾ ತಂಡವನ್ನು ೧೯೫೦ರ ದಶಕದ ಕೊನೆಯಲ್ಲಿ ಮತ್ತು ೧೯೬೦ರ ದಶಕದಲ್ಲಿ ಜಗತ್ತಿನ ಉತ್ತಮ ತಂಡವನ್ನಾಗಿ ರೂಪಿಸಿದರು. ೧೯೫೦ರ ದಶಕದಲ್ಲಿ ಆಸ್ಟ್ರೇಲಿಯಾ ತಂಡ ಅಧೋಗತಿಗೆ ಇಳಿದಿತ್ತು. ೧೯೫೮ರಲ್ಲಿ ತಂಡದ ನಾಯಕತ್ವವನ್ನು ವಹಿಸಿದ ಇವರು ಕ್ರಿಕೆಟ್ ಆಟವನ್ನು ಪುನರುಜ್ಜಿವನಗೊಳಿಸಿ ಹೊಸ ಆಯಾಮವನ್ನು ನೀಡಿದರು. ಇವರು ಆಟಕ್ಕೆ ಧನಾತ್ಮಕ ಗತಿ ಕೊಟ್ಟರು, ತಮ್ಮ ಉತ್ತಮ ವಾಕ್ ಪಟುತ್ವದ ಮೂಲಕ ತಮ್ಮ ತಂಡದ ನಿಲುವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು.
ಖ್ಯಾತ ಕ್ರಿಕೆಟ್ ಲೇಖಕ ಗಿಡಿಯನ್ ಹೈ ಇವರನ್ನು "ಎರಡನೇಯ ವಿಶ್ವ ಯುದ್ಧದ ಬಳಿಕ ಕ್ರಿಕೆಟ್ ಕಂಡ ಅತ್ಯಂತ ತೇಜಸ್ಸನ್ನು ಹೊಂದಿದ ಕ್ರಿಕೆಟಿಗ" ಎಂದು ಹೊಗಳಿದ್ದಾರೆ.