ರಿಚರ್ಡ್ ಟ್ರೆವೆತಿಕ್

ರಿಚರ್ಡ್ ಟ್ರೆವೆತಿಕ್ (1771-1883). ಆಂಗ್ಲ ಎಂಜಿನಿಯರ್.

Richard Trevithick portrait.jpg

ಬದುಕು ಮತ್ತು ಸಾಧನೆಸಂಪಾದಿಸಿ

ಕಾರ್ನ್‍ವಾಲಿನ ಇಲ್ಲೋಗನ್‍ನಲ್ಲಿ ಜನನ (13-4-1771). ಅಧಿಕ ಸಂಮರ್ದದ ಉಗಿಯಂತ್ರವನ್ನು ಪ್ರಥಮವಾಗಿ ರಚಿಸಿ (1800) ಪ್ರಸಿದ್ಧನಾದ. ನಯವಾದ ಕಬ್ಬಿಣದ ಕಂಬಿಯ ಮೇಲೆ ಚಲಿಸುವ, ಹೊರಚಾಚಿರುವ ಅಂಚುಳ್ಳ ಚಕ್ರ ಸಾಕಷ್ಟು ಘರ್ಷಣೆಯನ್ನು ಮತ್ತು ಚಾಲನ ಸಾಮಥ್ರ್ಯವನ್ನು ಪಡೆದಿರುವುದೆಂದು ಈತ ಪ್ರಾಯೋಗಿಕವಾಗಿ ತೋರಿಸಿಕೊಟ್ಟ. ಇವನು ತಯಾರಿಸಿದ ಉಗಿಚಾಲಿತ ರೈಲ್ವೇ ಎಂಜಿನ್ನು 1804ನೆಯ ಫೆಬ್ರುವರಿ ತಿಂಗಳಿನಲ್ಲಿ 70 ಮಂದಿ ಪ್ರಯಾಣಿಕರು ಮತ್ತು 10 ಟನ್ ಕಬ್ಬಿಣವಿದ್ದ 5 ರೈಲ್ವೇ ಬಂಡಿಗಳನ್ನು ಗಂಟೆಗೆ 5 ಮೈಲು ವೇಗದಲ್ಲಿ ಮೈಲು ದೂರಕ್ಕೆ ಒಯ್ದಿತು. ಅಂದಮಾತ್ರಕ್ಕೆ ಟ್ರೆವೆತಿಕ್‍ನ ಅನ್ವೇಷಣೆಗಳಲ್ಲೆಲ್ಲ ಮುಖ್ಯವಾಗಿರುವುದು ಈ ನಿರ್ಮಾಣ ಅಲ್ಲ, ಬದಲು, ಅವನು ತಯಾರಿಸಿದ ರಸ್ತೆ ಎಂಜಿನ್. ಇಂಥ ಒಂದು ಎಂಜಿನ್ 1801ರಲ್ಲಿ ಪ್ರಥಮವಾಗಿ ಪ್ರಯಾಣಿಕರನ್ನು ಒಯ್ದಿತು. ಉಗಿಯನ್ನು ಸಾಗಾಣಿಕೆ, ಕೃಷಿ ಮತ್ತು ಗಣಿಕಾರ್ಯಗಳಿಗೆ ಬಳಸುವ ವಿಧಾನಗಳನ್ನು ಕುರಿತೂ ಅವನು ಬಹಳಷ್ಟು ಪ್ರಯೋಗಗಳನ್ನು ನಡೆಸಿದ. ಆದರೆ ಈ ಪ್ರಯೋಗಗಳಲ್ಲಿ ಅವನು ಹೆಚ್ಚು ಕೃತಕೃತ್ಯನಾಗಲಿಲ್ಲ. ಡಾರ್ಟ್‍ಫೋರ್ಡ್‍ನಲ್ಲಿ ಕೊನೆಯುಸಿರೆಳೆದ (22-4-1883).


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: