ರಿಚರ್ಡ್ ಜಾನ್ಸನ್
ರಿಚರ್ಡ್ ಜಾನ್ಸನ್, 1573-1659. ಸಂಕೀರ್ಣ ಬರೆಹಗಾರ.
ಹುಟ್ಟಿದ್ದು ಲಂಡನಿನಲ್ಲಿ.
ಬರಹಗಳು
ಬದಲಾಯಿಸಿಈತನ ಮೊದಲ ಕೃತಿ ದಿ ನೈನ್ ವರ್ದೀಸ್ ಆಫ್ ಲಂಡನ್ (1592). ಈತನ ಪ್ರಸಿದ್ಧ ಕೃತಿ ದಿ ಫೇಮಸ್ ಹಿಸ್ಟರಿ ಆಫ್ ದಿ ಸೆವೆನ್ ಚಾಂಪಿಯನ್ಸ್ ಆಫ್ ಕ್ರಿಸನ್ ಡಮ್ (1596). ಇದು ಆ ಕಾಲದ ಪ್ರಸಿದ್ಧ ರಂಜಕ ಗದ್ಯಕೃತಿಗಳಲ್ಲಿ ಒಂದೆಂಬ ಖ್ಯಾತಿ ಪಡೆಯಿತು. ಇಂಗ್ಲೆಂಡಿನ ಸೇಂಟ್ ಜಾರ್ಜ್, ವೇಲ್ಸಿನ ಸೇಂಟ್ ಡೇವಿಡ್, ಸ್ಕಾಟ್ಲೆಂಡಿನ ಸೇಂಟ್ ಆಂಡ್ರ್ಯೂ, ಐರ್ರೆಂಡಿನ ಸೇಂಟ್ ಪ್ಯಾಟ್ರಿಕ್, ಫ್ರಾನ್ಸಿನ ಸೇಂಟ್ ಡೇನಿಸ್, ಸ್ಪೇನಿನ ಸೇಂಟ್ ಜೇಮ್ಸ್ ಮತ್ತು ಇಟಲಿಯ ಸೇಂಟ್ ಆಂತೊನಿ-ಇವರುಗಳೇ ಆ ಕೃತಿಯಲ್ಲಿ ಬರುವ ಏಳುಜನ ವೀರರು. 1608ರಲ್ಲಿ ಇದರ ಎರಡನೆಯ ಭಾಗವೂ 1616ರಲ್ಲಿ ಇದರ ಮೂರನೆಯ ಭಾಗವೂ ಪ್ರಕಟಗೊಂಡಿತು. ಅಲ್ಲದೆ 1607ರಲ್ಲಿ ದಿ ಪ್ಲೆಸಂಟ್ ವಾಕ್ಸ್ ಆಫ್ ಮೂರ್ ಫೀಲ್ಡ್ಸ್; ದಿ ಪ್ಲೆಸೆಂಟ್ ಕನ್ಸೀಟ್ಸ್ ಅಫ್ ಓಲ್ಡ ಹಾಬ್‍ಸನ್, ದಿ ಮೆರಿ ಲಂಡನರ್; ದಿಮೋಸ್ಟ್ ಪ್ಲೆಸೆಂಟ್ ಹಿಸ್ಟರಿ ಆಫ್ ಟಾಮ್ ಎ ಲಿಂಕನ್-ಎಂಬ ಈತನ ಮೂರು ಕೃತಿಗಳು ಪ್ರಕಟಗೊಂಡವು. ಆಂಗ್ಲೋರಮ್ ಲ್ಯಾಚ್ರಿಮೆ (1603) ಎಲಿಜûಬೆತ್ ರಾಣಿಯ ಮೇಲೆ ಬರೆದ ಶೋಕಗೀತೆ ; ಲಿಕ್ ಆನ್ ಮಿ, ಲಂಡನ್ (1613); ದಿ ಗೋಲ್ಡನ್ ಗಾರ್ಲೆಂಡ್ ಆಫ್ ಪ್ರಿನ್ಸ್‍ಲಿ ಪ್ಲಷರ್ಸ್ ಅಂಡ್ ಡೆಲಿಕೇಟ್ ಡಿಲೈಟ್ಸ್ (1620); ದಿ ಹಿಸ್ಟರಿ ಆಫ್ ಟಾಮ್ ತಂಬ್ (1621); ಡೇಂಟಿ ಕನ್ಸೀಟ್ಸ್ (1630) - ಇವು ಈತನ ಇತರ ಕೃತಿಗಳು.