ರಿಚರ್ಡ್ ಗಾರ್ನೆಟ್

ಗಾರ್ನೆಟ್, ರಿಚರ್ಡ್

ಬದಲಾಯಿಸಿ
 
Garnett (1895)

1835-1906. ಇಂಗ್ಲಿಷ್ ಕಥೆಗಾರ, ಜೀವನ ಚರಿತ್ರೆಗಳ ಕರ್ತೃ.

ಬದುಕು ಮತ್ತು ಬರಹ

ಬದಲಾಯಿಸಿ

ಈತನ ತಂದೆ ಬ್ರಿಟಿಷ್ ಮ್ಯೂಸಿಯಂನ ಮುದ್ರಿತ ಗ್ರಂಥ ಭಾಗದ ಸಹಾಯಕ ಪಾಲಕನಾಗಿದ್ದ. ಹುಟ್ಟಿದ್ದು ಲಿಚ್ಫೀಲ್ಡನಲ್ಲಿ. ವಿದ್ಯಾಭ್ಯಾಸ ಬ್ಲೂಂಸ್ಬರೀ ಶಾಲೆಯಲ್ಲಿ. 1851ರಲ್ಲಿ ಬ್ರಿಟಿಷ್ ಮ್ಯೂಸಿಯಂನ ಸಹಾಯಕ ಗ್ರಂಥಪಾಲನಾಗಿ ಸೇರಿ ಸುಮಾರು 50 ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ. ನಿಂತು ಹೋಗಿದ್ದ ಪುಸ್ತಕಗಳ ಪಟ್ಟಿಯನ್ನು ಮುಂದುವರಿಸಿ ಮುಗಿಸಿದ. ಹೊಸ ಬಗೆಯ ಪುಸ್ತಕ ಕಪಾಟುಗಳನ್ನು ಸೇರಿಸಿದ ಕೀರ್ತಿ ಇವನದು. ಈ ಅವಧಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ಅಪಾರ ಜ್ಞಾನವನ್ನು ಗಳಿಸಿಕೊಂಡ. ಗ್ರೀಕ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆಗಳಿಂದ ಅನುವಾದ ಮಾಡಿದುದಲ್ಲದೇ ಕೆಲವು ಕವನಗಳನ್ನು ಬರೆದ. ಕಾರ್ಲೈಲ್, ಮಿಲ್ಟನ್, ಬ್ಲೇಕ್, ಎಮರ್ಸನ್ ಇವರ ಜೀವನ ಚರಿತ್ರೆಗಳನ್ನು ಬರೆದುದಲ್ಲದೆ ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿ ಎಂಬ ಕೋಶಕ್ಕೆ ಮತ್ತು ಇತರ ವಿಶ್ವಕೋಶಗಳಿಗೆ ಅನೇಕ ಲೇಖನಗಳನ್ನು ನೀಡಿದ. ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ರೆಲಿಕ್ಸ ಆಫ್ ಷೆಲಿ (1862) ಮತ್ತು ಇಟಲಿಯ ಸಾಹಿತ್ಯ ಚರಿತ್ರೆ (1898)-ಇವು ಈತನ ಮುಖ್ಯ ಕೃತಿಗಳು. ದಿ ಟ್ವೈಲೈಟ್ ಆಫ್ ದಿ ಗಾಡ್ಸ (1888) ನವುರು ವಿಡಂಬನೆಯಿಂದ ಕೂಡಿದ, ಮನಸ್ಸನ್ನೊಲಿಸುವ ನೀತಿಕಥೆಗಳ ಸಂಕಲನ. ಇದರಲ್ಲಿ ಆನಂದ, ದಿ ಮಿರಕಲ್ ವರ್ಕರ್ ಎಂಬ ಕಥೆ ಸ್ವಾರಸ್ಯವಾದದ್ದು. ಬುದ್ಧನ ಅಣತಿಯನ್ನು ಮೀರಿ ಪವಾಡಗಳಿಂದ ಬೌದ್ಧಧರ್ಮವನ್ನು ಹರಡಲು ಪ್ರಯತ್ನಿಸಿ ಪಾಡುಪಟ್ಟ ಆನಂದನ ಕಥೆ ಇದರ ವಸ್ತು.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: