ರಾಸ್‍ಬೆರಿ ಗುಲಾಬಿ ಕುಟುಂಬದ ರೂಬಸ್ ಜಾತಿಯಲ್ಲಿನ ಬಹುಸಂಖ್ಯೆಯ ಸಸ್ಯ ಪ್ರಜಾತಿಗಳ ತಿನ್ನಲರ್ಹ ಹಣ್ಣು, ಇದರಲ್ಲಿ ಬಹುತೇಕ ಹಣ್ಣುಗಳು ಉಪಜಾತಿ ಇಡೇಯೊಬೇಟಸ್‍ನಲ್ಲಿವೆ; ಈ ಹೆಸರು ಈ ಸಸ್ಯಗಳಿಗೂ ಅನ್ವಯಿಸುತ್ತದೆ. ರಾಸ್‍ಬೆರಿಗಳು ಮರದಂಥ ಕಾಂಡಗಳನ್ನು ಹೊಂದಿದ್ದು ಬಹುವಾರ್ಷಿಕವಾಗಿವೆ. ರಾಸ್‍ಬೆರಿಗಳು ಒಂದು ಪ್ರಮುಖ ವಾಣಿಜ್ಯ ಹಣ್ಣು ಬೆಳೆಯಾಗಿವೆ, ಮತ್ತು ವಿಶ್ವದ ಎಲ್ಲ ಸಮಶೀತೋಷ್ಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತವೆ. ರಾಸ್ ಬೆರಿಯುನ್ನು ವಾಣಿಜ್ಯ ಬೆಳೆಯೆಂದು ಕರೆಯಲಾಗುತ್ತದೆ.ಇದನ್ನು ಬೇಸಿಗೆಯ ಮಧ್ಯದಲ್ಲಿ ಬೆಳೆಯಲಾಗುತ್ತದೆ.ಒಂದು ರಾಸ್ ಬೆರಿ ೩-೫ ಗ್ರಾಂ ತೂಕವಿರುತ್ತದೆ.ಇದನ್ನು ೧೦೦೦ ಡ್ರ್ಯುಪ್ಲೆಟ್ಸ್ ನಿಂದ ಕೂಡಿರುತ್ತದೆ.ಪ್ರತಿಯೊಂದು ಹಣ್ಣಿನಲ್ಲು ರಸವತ್ತಾದ ತಿರುಳು ಹಾಗು ಬೀಜಗಳನ್ನು ಹೊಂದಿರುತ್ತದೆ.

ವಿವಿಧ ರೀತಿಯ ರಾಸ್‍ಬೆರಿ ಹಣ್ಣುಗಳು ಬದಲಾಯಿಸಿ

  • ಕೆಂಪು ರಾಸ್‍ಬೆರಿ
  • ಕಪ್ಪು ರಾಸ್‍ಬೆರಿ
  • ನೇರಳೆ ಬಣ್ಣದ ರಾಸ್‍ಬೆರಿ - ಇವುಗಳನ್ನು ಕೆಂಪು ಮತ್ತು ಕಪ್ಪು ರಾಸ್‍ಬೆರಿ ತಳಿಗಳ ಸಂಕರೀಕರಣದಿಂದ ತಯಾರಿಸಲಾಗುತ್ತದೆ.ಕೆಲವೊಮ್ಮೆ ಕೆಂಪು ಮತ್ತು ಕಪ್ಪು ರಾಸ್‍ಬೆರಿ ಬೆಳೆಯುವಂತಹ ಕಾಡುಗಳಲ್ಲಿ ನೈಸರ್ಗಿಕವಾಗಿಯೂ ದೊರೆಯುತ್ತವೆ.
  • ನೀಲಿ ರಾಸ್‍ಬೆರಿ