ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೇಷಣಾ ಯೋಜನೆ

'ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆ'

ಬದಲಾಯಿಸಿ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗು ತರಬೇತಿ ಸಂಸ್ಥೆ (NCERT)ಯು ತನ್ನ ವಿಜ್ಞಾನ ಶಿಕ್ಷಣ ವಿಭಾಗ ಹಾಗು ರಾಜ್ಯಗಳ ಶಿಕ್ಷ್ಹಣ ನಿರ್ದೇಶಕರ ಸಹಕಾರದೊಂದಿಗೆ ಪ್ರೌಢ ಶಾಲಾ ಹಂತದಲ್ಲಿ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಲು ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆಯನ್ನು ೧೯೬೩ರಲ್ಲಿ ರೂಪಿಸಿದರು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ೧೨+ನಿಂದ ೧೪ ವಯಸ್ಸಿನಲ್ಲಿ ಪ್ರಾರಂಭವಾಗಿ ೧೬+ನಿಂದ ೧೮ ವಯಸ್ಸಿಗೆ ಪಕ್ವತೆಯನ್ನು ಹೊಂದುತ್ತದೆಂದು ನಂಬಲಾಗಿದೆ. ಆಯ್ದ ಒರೆಗಳಿಂದ ರಾಷ್ಟ್ರಾದ್ಯಂತ ಮಕ್ಕಳನ್ನು ಪರೀಕ್ಷಿಸಿ ವರ್ಷಕ್ಕೆ ೩೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗು ಅವರಿಗೆ ಮುಂದಿನ ಅಭ್ಯಾಸಕ್ಕಾಗಿ ೩ ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ಮೊದಲು ಕೊಡಲಾಗುತಿತ್ತು. ಮುಂದೆ ಈ ಸೌಲಭ್ಯವನ್ನು ೯ ವರ್ಷಗಳವರೆಗೆ ವಿಸ್ತರಿಸಲಾಯ್ತು. ಪಿಎಚ್.ಡಿ ವರೆಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯ್ತು. ಅವರ ಹೆಸರುಗಳನ್ನು ವಿಜ್ಞಾನಿಗಳ ಯಾದಿಯಲ್ಲಿ ಪಟ್ಟಿಮಾಡಿ, ಅವರಿಗೆ ಆಡಳಿತಾತ್ಮಕ ನೌಕರಿಗಳನ್ನು ಕೊಡಲಾಗುತ್ತಿದೆ. ಅಲ್ಲದೆ ಉದ್ಯಮಿಗಳು ಯೋಜನೆ ಹಾಗು ಸಂಶೋಧನಾ ಸಂಸ್ಥೆಗಳಲ್ಲಿ ಅವರಿಗೆ ನೌಕರಿಯ ಅವಕಾಶವಿದೆ. ೧೯೭೨ರಿಂದ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಶೆಯನ್ನು ನಡೆಸಲಾಗುತ್ತದೆ.

ಈ ಯೋಜನೆಯ ಗುರಿಗಳು :

ಬದಲಾಯಿಸಿ
  1. ವಿಜ್ಞಾನದ ಬಗ್ಗೆ ವಿಶೇಷ ಒಲವುಗಳ ವಿದ್ಯಾರ್ಥಿಗಳನ್ನು ಶಾಲಾ ಹಂತದ ಕೊನೆಗೆ ಆಯ್ಕೆ ಮಾಡಲಾಗುವುದು.
  2. ಸ್ಪರ್ಧೆಯ ಮೂಲಕ ಗುಣವನ್ನು ಗುರುತಿಸಿ ವೈಜ್ಞಾನಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು.
  3. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನೆಯನ್ನು ನೀಡಿ ಮೂಲ ವಿಜ್ಞಾನದ ಅಭ್ಯಾಸಕ್ಕೆ ನೆರವಾಗುವುದು.
  4. ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಲು ವಿಜ್ಞಾನದಲ್ಲಿ ವಿಶೇಷ ಕಾರ್ಯಕ್ರಮಗಲನ್ನು ಒದಗಿಸುವುದು.
  5. ವಿಜ್ಞಾನದ ಅಭ್ಯಾಸ ಪತ್ರಿಕೆಯ ಸುಧಾರಣೆ, ಬೋಧನಾ ವಿಧಾನ ಹಾಗು ಮೌಲ್ಯಮಾಪನ ತಂತ್ರಗಳಲ್ಲಿ ಸುಧಾರಣೆ ತರುವುದು.
  6. ವಿಶ್ವವಿದ್ಯಾಲಯ, ಕಾಲೇಜುಗಳು ಹಾಗು ಸಂಶೋಧನಾ ಸಂಸ್ಥೆಗಳಿಗೆ ಅರ್ಹ ವಿದ್ಯಾರ್ಥಿಗಳು ಪ್ರವೇಶಿಸಲು ಪ್ರೋತ್ಸಾಹಿಸುವುದು.

ಈ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹತೆಗಳು :

ಬದಲಾಯಿಸಿ
  1. ಹಿಂದಿನ ಪರೆಕ್ಷೆಯಲ್ಲಿ ೫೫% ಅಂಕಗಳನ್ನು ಪಡೆದ ವಿದ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಅರ್ಹರು.
  2. ಈ ಪರೀಕ್ಷೆಗೆ ಕೂರಲು ಒಂದೇ ಒಂದು ಅವಕಾಶ ಕೊಡಲಾಗುವುದು.
  3. ಈ ಕೆಳಗಿನ ವಿದ್ಯಾರ್ಥಿಗಳು ಅರ್ಹರು:
  • ಉನ್ನತ ಪ್ರೌಢ ಶಾಲೆಯ ಕೊನೆಯ ವರ್ಷ
  • ವಿವಿದೋದ್ದೇಶ ಕೋರ್ಸು
  • ಇಂಟರ್ಮೀದಡಿಯೆಟ್ ಮೊದಲ ವರ್ಷ
  • ಪಿ. ಯು. ಸಿ. ಅಥವಾ ತತ್ಸಮ
  • ಪದವಿ ಪೂರ್ವದ ಎರಡನೇ ವರ್ಷ (ಕೇರಳದಲ್ಲಿದ್ದಂತೆ)
  • ಭಾರತೀಯ ಶಾಲಾ ಸರ್ಟಿಫ಼ಿಕೇಟ್ ಪರೀಕ್ಷೆಯ ಎರಡನೇ ವರ್ಷ.

ಪರೀಕ್ಷಾ ವಿಧಾನ :

ಬದಲಾಯಿಸಿ
  1. ವಿಜ್ಞಾನದ ಒಲವಿನ ಪರೀಕ್ಷೆ ಒಂದು
  2. ಪ್ರಬಂಧ ರೀತಿಯ ಪರೀಕ್ಷೆ
  3. ವಿಜ್ಞಾನ ವಿಶಯದ ಮೇಲೆ ಒಂದು ಯೋಜನಾ ವರದಿ
  4. ಒರೆಗಳಲ್ಲಿ ಅರ್ಹರಾದವರಿಗೆ ಮಾತ್ರ ಸಂದರ್ಶನ

ಇದು ವಿದ್ಯಾರ್ಥಿಗಳ ಪ್ರಗತಿಯ ಕರಾರಿಗೊಳಪಟ್ಟಿದೆ. ಈ ವಿದ್ಯಾರ್ಥಿಗಳಿಗೆ ಪರಿಣತ ಶಿಕ್ಷಕರು ಹಾಗು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು.

ಉಲ್ಲೇಖಗಳು

ಬದಲಾಯಿಸಿ

[[[]]]

  1. http://www.siasat.com/.../national-science-talent-search-scheme-scholarships