ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ (ಭಾರತ)
ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ( ಎನ್‌ಡಿಎಲ್‌ಐ ) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಯೋಜನೆಯಾಗಿದೆ. ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳು ಮತ್ತು ಇತರ ಸಂಬಂಧಿತ ಮೂಲಗಳಿಂದ ಪೂರ್ಣ ಪಠ್ಯ ಸೂಚ್ಯಂಕವನ್ನು ಸಂಗ್ರಹಿಸಿ, ಸಂಯೋಜಿಸಿ, ಒದಗಿಸುವುದು ಇದರ ಉದ್ದೇಶವಾಗಿದೆ. ಇದು ಪಠ್ಯಪುಸ್ತಕಗಳು, ಲೇಖನಗಳು, ವೀಡಿಯೊಗಳು, ಆಡಿಯೊ ಪುಸ್ತಕಗಳು, ಉಪನ್ಯಾಸಗಳು, ಸಿಮ್ಯುಲೇಶನ್‌ಗಳು, ಕಾದಂಬರಿಗಳು ಮತ್ತು ಇತರ ಎಲ್ಲ ರೀತಿಯ ಕಲಿಕಾ ಮಾಧ್ಯಮಗಳನ್ನು ಒಳಗೊಂಡಿರುವ ಡಿಜಿಟಲ್ ಭಂಡಾರವಾಗಿದೆ. ಎನ್‌ಡಿಎಲ್‌ಐ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನ ಅನೇಕ ಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತದೆ.
ವಾಣಿಜ್ಯ ತಾಣ | ಅಲ್ಲ |
---|---|
ತಾಣದ ಪ್ರಕಾರ | ಶಿಕ್ಷಣ |
ನೊಂದಾವಣಿ | ಉಚಿತ |
ಬಳಕೆದಾರರು(ನೊಂದಾಯಿತರೂ ಸೇರಿ) | ೨೦ ಲಕ್ಷ+ (ಜನವರಿ ೨೦೧೯) |
ಸಧ್ಯದ ಸ್ಥಿತಿ | ಸಕ್ರಿಯ |
ಇತಿಹಾಸ
ಬದಲಾಯಿಸಿಮೇ 2016 ರಲ್ಲಿ ಪ್ರಾಯೋಗಿಕ ರೂಪದಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಲಾಯಿತು.[೧][೨] ಬಳಿಕ ಈ ಗ್ರಂಥಾಲಯವನ್ನು ಜೂನ್ 19, 2018 ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಅಧಿಕೃತವಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು.[೩] ಏಪ್ರಿಲ್ 2019 ರ ಹೊತ್ತಿಗೆ, ಎನ್‌ಡಿಎಲ್‌ಐ ತನ್ನ ಭಂಡಾರದಲ್ಲಿ 4.5 ಕೋಟಿಗೂ ಅಧಿಕ ವಸ್ತುಗಳನ್ನು(ಪುಸ್ತಕ, ಪತ್ರಿಕೆ ಇತ್ಯಾದಿ) ಹೊಂದಿತ್ತು. ಇಂಗ್ಲಿಷ್‌ನಲ್ಲಿಯೇ ಸುಮಾರು 1,50,000 ಸಂಪುಟಗಳನ್ನು ಹೊಂದಿದೆ.
ಭಾಷೆಗಳು
ಬದಲಾಯಿಸಿಡಿಜಿಟಲ್ ಗ್ರಂಥಾಲಯದಲ್ಲಿ ವಿವಿಧ ಭಾರತೀಯ ಭಾಷೆಗಳ ಹಾಗು ಕೆಲವು ಐರೋಪ್ಯ, ಮಧ್ಯ ಪ್ರಾಚ್ಯ ಭಾಷೆಗಳ ಪುಸ್ತಕಗಳನ್ನು ಹೊಂದಿದೆ. ಭಾರತೀಯ ಭಾಷೆಯ ಪುಸ್ತಕಗಳ ಸ್ಕ್ಯಾನಿಂಗ್ ಭಾರತೀಯ ಭಾಷೆಗಳ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಅವಕಾಶವನ್ನು ಸೃಷ್ಟಿಸಿದೆ. ಉರ್ದು ಮತ್ತು ಪರ್ಷಿಯನ್ ಭಾಷೆಗಳ ಪುಸ್ತಕಗಳು ಎನ್‌ಡಿಎಲ್‌ಐನಲ್ಲಿ ಲಭ್ಯವಿದೆ.
ಪ್ರವೇಶ ಮತ್ತು ನಿರ್ಬಂಧನೆಗಳು
ಬದಲಾಯಿಸಿನೋಂದಣಿಯು ಪ್ರಪಂಚದಾದ್ಯಂತದ ಬಳಕೆದಾರರಿಗೆ ಮುಕ್ತವಾಗಿದೆ. ಹೀಗಿದ್ದರೂ, ಕೆಲವು ಜನಪ್ರಿಯ ಮೂಲಗಳ ವಿಷಯಗಳು ನೋಂದಾಯಿತ ಬಳಕೆದಾರರಿಗೆ ಮಾತ್ರ ಲಭ್ಯ. ಈ ನೋಂದಣಿ-ಮಾಡಿದವರಿಗೆ ಸಿಗುವ ಕೃತಿಗಳ ಮೂಲ:
ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇನಲ್ಲಿ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಗ್ರಂಥಾಲಯಕ್ಕೆ ಪ್ರವೇಶವನ್ನು ಪಡೆಯಬಹುದು.
ಗ್ರಂಥಾಲಯದ ನಿರ್ವಹಣೆ
ಬದಲಾಯಿಸಿಈ ಗ್ರಂಥಾಲಯವನ್ನು ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ವಹಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://www.ndl.gov.in/
- ↑ https://web.archive.org/web/20170202051920/http://mhrd.gov.in/sites/upload_files/mhrd/files/dig_lib.pdf
- ↑ https://mhrd.gov.in/union-hrd-minister-dedicates-national-digital-library-india-nation
- ↑ "ಆರ್ಕೈವ್ ನಕಲು". Archived from the original on 24 ನವೆಂಬರ್ 2020. Retrieved 6 ನವೆಂಬರ್ 2020.
- ↑ https://www.southasiaarchive.com/
- ↑ https://www.oecd-ilibrary.org/
- ↑ http://indiaifa.org/society-preservation-satyajit-ray-films.html