ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತರು ಸಿರ್ಸಿಯ ಪಂಡಿತ್ ಜನರಲ್ ಆಸ್ಪತ್ರೆ, ಕುಮಟಾದ ಗಿಬ್ಬ ಹೈಸ್ಕೂಲ್ ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಿರ್ಸಿ ಪುರಸಭೆಯಲ್ಲಿ ೨ ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರು.

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ
ಜನನ(೧೮೫೪-೧೧-೦೫)೫ ನವೆಂಬರ್ ೧೮೫೪
ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ
ಮರಣMay 1, 1935(1935-05-01) (aged 80)
ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ
ಕಾವ್ಯನಾಮಪಿ. ಎನ್. ಪಂಡಿತ್
ವೃತ್ತಿವಕೀಲ, ಸಮಾಜ ಸೇವಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಹೈಕೋರ್ಟ್ ಪ್ಲೀಡರ್ ಪದವಿ
ಪ್ರಮುಖ ಕೆಲಸ(ಗಳು)ಸಿರ್ಸಿ ಪಂಡಿತ್ ಜನರಲ್ ಆಸ್ಪತ್ರೆ
ಸಿರ್ಸಿ ಪಂಡಿತ್ ಜನರಲ್ ವಾಚನಾಲಯ, ಕುಮಟಾ ಗಿಬ್ಬ ಹೈಸ್ಕೂಲ್, ಕೆ. ಡಿ. ಸಿ. ಸಿ. ಬ್ಯಾಂಕ್

ಜನನ-ವಿದ್ಯಾಭ್ಯಾಸ

ಬದಲಾಯಿಸಿ

೧೯೫೪ರಲ್ಲಿ ಸಿರ್ಸಿಯಲ್ಲಿ ಜನಿಸಿದ ಪಂಡಿತರು, ಕುಮಟಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂಬೈಯಲ್ಲಿ ಉಚ್ಛಶಿಕ್ಷಣ ಪೂರೈಸಿ (ಹೈಕೋರ್ಟ್ ಪ್ಲೀಡರ್ ಪದವಿ), ಸಿರ್ಸಿಯಲ್ಲಿ ವಕೀಲರಾದದು.

ಪ್ರಮುಖ ಕೊಡುಗೆಗಳು

ಬದಲಾಯಿಸಿ
  • ಪಂಡಿತ್ ಜನರಲ್ ಆಸ್ಪತ್ರೆ, ಸಿರ್ಸಿ
  • ಪಂಡಿತ್ ಜನರಲ್ ವಾಚನಾಲಯ, ಸಿರ್ಸಿ (೧೯೦೫)
  • ಗಿಬ್ಬ ಹೈಸ್ಕೂಲ್ ಮತ್ತು ಪಂಡಿತ ವಿದ್ಯಾರ್ಥಿ ವಸತಿ ನಿಲಯ, ಕುಮಟಾ
  • ಕೆ. ಡಿ. ಸಿ. ಸಿ. ಬ್ಯಾಂಕ್ (ಕೆನರಾ ಡಿಸ್ಟ್ರಿಕ್ಟ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್)

ಪ್ರಶಸ್ತಿಗಳು

ಬದಲಾಯಿಸಿ
  • ರಾವ್ ಸಾಹೇಬ, ಬ್ರಿಟಿಷ್ ಸರಕಾರ
  • ರಾವ್ ಬಹದ್ದೂರ, ಬ್ರಿಟಿಷ್ ಸರಕಾರ

ಪ್ರಮುಖ ಹುದ್ದೆಗಳು

ಬದಲಾಯಿಸಿ
  • ಉಪಾಧ್ಯಕ್ಷರು, ಸಿರ್ಸಿ ಪುರಸಭೆ, ೧೮೮೫-೧೮೯೬ (ಹನ್ನೊಂದು ವರ್ಷಗಳು)
  • ಅಧ್ಯಕ್ಷರು, ಸಿರ್ಸಿ ಪುರಸಭೆ, ೧೮೯೮-೧೯೦೧(ಅವಧಿ - ೧: ಮೂರು ವರ್ಷಗಳು)
  • ಅಧ್ಯಕ್ಷರು, ಸಿರ್ಸಿ ಪುರಸಭೆ, ೧೯೦೭-೧೯೧೬ (ಅವಧಿ - ೨: ಒಂಬತ್ತು ವರ್ಷಗಳು)
  • ಅಧ್ಯಕ್ಷರು, ಕೆ. ಡಿ. ಸಿ. ಸಿ. ಬ್ಯಾಂಕ್, ಸಿರ್ಸಿ, ೧೯೨೦-೧೯೨೪

೧೯೩೫ರ ಮೇ ತಿಂಗಳಲ್ಲಿ ಮರಣ ಹೊಂದಿದರು.