ರಾವಣಹಸ್ತ

ಪ್ರಾಚೀನ ಬಾಗಿದ ಪಿಟೀಲು

ರಾವಣಹಸ್ತವು ಭಾರತ, ಶ್ರೀಲಂಕಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬಳಸಲಾಗುವ ಒಂದು ಪ್ರಾಚೀನ ಕಮಾನುಳ್ಳ, ತಂತಿವಾದ್ಯ. ಇದು ಪಿಟೀಲಿನ ಪೂರ್ವಜವಾಗಿದೆ ಎಂದು ಸೂಚಿಸಲಾಗಿದೆ.[೧]

ನಿರ್ಮಾಣ ಬದಲಾಯಿಸಿ

ರಾವಣಹಸ್ತದ ಧ್ವನಿ ಕೋಷ್ಠವು ಸೋರೆಬುರುಡೆ, ಅರ್ಧಮಾಡಿದ ತೆಂಗಿನ ಕರಟ, ಅಥವಾ ಕಟ್ಟಿಗೆಯ ಪೊಳ್ಳುಮಾಡಿದ ಉರುಳೆಯಾಗಿರಬಹುದು (ಜೊತೆಗೆ ಎಳೆದ ಮೇಕೆ ಅಥವಾ ಇತರ ಚಕ್ಕಳದ ಪದರ ಇರುತ್ತದೆ). ಇದಕ್ಕೆ ಕಟ್ಟಿಗೆ ಅಥವಾ ಬಿದಿರಿನ ಕುತ್ತಿಗೆಯನ್ನು ಜೋಡಿಸಲಾಗಿರುತ್ತದೆ ಮತ್ತು ಗೂಟಕ್ಕೆ ಕಟ್ಟಿ ಶ್ರುತಿಮಾಡಿದ, ಕರುಳು, ಕೂದಲು ಅಥವಾ ಉಕ್ಕಿನ ಒಂದರಿಂದ ನಾಲ್ಕು ಅಥವಾ ಹೆಚ್ಚು ತಂತಿಗಳನ್ನು ಹೊಂದಿರುತ್ತದೆ. ತಂತಿಗಳನ್ನು ವಾದ್ಯದ ಕುದುರೆ ಮೇಲೆ ಕಟ್ಟಿರಲಾಗಿರುತ್ತದೆ. ಕೆಲವು ಉದಾಹರಣೆಗಳು ಹಲವಾರು ಅನುರಣನ ತಂತಿಗಳನ್ನು ಹೊಂದಿರಬಹುದು. ಕಮಾನು ಸಾಮಾನ್ಯವಾಗಿ ಜಮಿಯದ್ದಾಗಿರುತ್ತದೆ; ಉದಾಹರಣೆಗಳು ಉದ್ದದಲ್ಲಿ ಬದಲಾಗುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Heron-Allen, Edward, Violin-making : as it was and is, being a historical, theoretical, and practical treatise on the science and art of violin-making, for the use of violin makers and players, amateur and professional, Ward, Lock, and Co., 1885, pp. 37-42 Archive.org facsimile of Cornell University Press copy (accessed 29 June 2017)