ರಾಮನಾಥ ಎಸ್. ಪಯ್ಯಡೆ
ಮುಂಬಯಿ ಮಹಾನಗರದಲ್ಲಿ, 'ರಾಮನಾಥ ಎಸ್. ಪಯ್ಯಡೆ'ಯವರು[೧] ಒಬ್ಬ ಪ್ರತಿಷ್ಠಿತ ಹೋಟೆಲ್ ಉದ್ಯಮಿಯೆಂದು ಗುರುತಿಸಲ್ಪಟ್ಟಿದ್ದಾರೆ.
ಜನನ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ 'ಕುರಿಯಾಲ'ಗ್ರಾಮದ ಶೀನ ಪಯ್ಯಡೆ ಮತ್ತು ಗಿರಿಜಾ ಪಯ್ಯಡೆದಂಪತಿಗಳ ೯ ಮಕ್ಕಳಲ್ಲಿ ೫ ನೆಯವರಾಗಿ ಜನಿಸಿದರು. ತಮ್ಮ ಹುಟ್ಟಿದೂರಿನಲ್ಲಿ ಪ್ರಾಥಮಿಕ ಶಿಕ್ಷಣ ಗಳಿಸಿರು. ಚಿಕ್ಕಂದಿನಲ್ಲೇ ಉದ್ಯೋಗವನ್ನು ಅರಸುತ್ತಾ ಮುಂಬಯಿ ಮಹಾನಗರಕ್ಕೆ ಹೋದರು. ೩ ವರ್ಷಗಳ ಕಾಲ ಕಾಂದಿವಲಿಯ ಕ್ಯಾಂಟಿನ್ ವೊಂದನ್ನು ಗುತ್ತಿಗೆ ಪಡೆದು, ಅದನ್ನು ಯಶಸ್ವಿಯಾಗಿ ನಡೆಸಿ ಹಣ ಸಂಪಾದಿಸಿದರು. ಆತ್ಮವಿಶ್ವಾಸ ಬಲಗೊಂಡು, ಐ. ಬಿ. ಪಟೇಲ್ ಮಾರ್ಗದಲ್ಲಿ, ಉಪಕಾರ್ ಎಂದು ಚಿಕ್ಕ ಹೋಟೆಲ್ ಆರಂಭಿಸಿದರು.
ವಿವಾಹ
ಬದಲಾಯಿಸಿ೧೯೮೪ ರಲ್ಲಿ ರಾಮನಾಥರು, ಶರ್ಮಿಳರ ಜೊತೆ ವಿವಾಹಮಾಡಿಕೊಂಡರು. ಕಠಿಣ ಪರಿಶ್ರಮಿ, ಸ್ನೇಹಪರ ಹಾಗೂ ಸರಳ ವ್ಯಕ್ತಿತ್ವದ ಪಯ್ಯಡೆ ಸ್ನೇಹಿತರ ಹಾಗೂ ಆತ್ಮೀಯರ ಸಹಾಯದಿಂದ ಹೋಟೆಲ್ ಕೆಲಸದಲ್ಲಿ ಪ್ರಗತಿ ಸಾಧಿಸುತ್ತಾ ಮುನ್ನಡೆದರು. ರಾಜಕೀಯದಲ್ಲಿ ಆಸಕ್ತಿ ಇದ್ದರೂ ಅದರಲ್ಲಿ ಮುಂದೆ ಬಿದ್ದು ಹೋಗಲಿಲ್ಲ. ಪಯ್ಯಡೆಯವರು ಫುಟ್ಬಾಲ್ ಕ್ರೀಡಾಸಕ್ತರು.[೨] ಅನೇಕ ಸ್ನೇಹಿತರ ಮದುವೆಗಳಿಗೆ ತಮ್ಮ ಕೈಲಾದ ಹಣದ ಸಹಾಯ ಮಾಡುತ್ತಿದ್ದರು. ಸ್ನೇಹಜೀವಿ, ಮತ್ತು ಒಳ್ಳೆಯ ಸಂಘಟಕ]
ಸಮಾಜ ಸೇವಕ
ಬದಲಾಯಿಸಿರಾಮನಾಥ ಪಯ್ಯಡೆಯವರು, ತಮ್ಮ ಹುಟ್ಟಿದೂರು, ಕುರಿಯಾಲದಲ್ಲಿ, ಬ್ರಹ್ಮ ದೇವಸ್ಥಾನ, ನಾಗಬನ, ಗರಡಿ,ಮೊದಲಾದ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಕೆಲಸಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆ ಅವರಿಗೆ ಅತ್ಯಂತ ಪ್ರಿಯವಾದ ಹವ್ಯಾಸಗಳಲ್ಲೊಂದಾಗಿತ್ತು.
ಮುಂಬಯಿನ ಇಂಡಿಯನ್ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷರಾದರು
ಬದಲಾಯಿಸಿ'ಇಂಡಿಯನ್ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ'ರಾಗಿ ಹೋಟೆಲ್ ವಲಯದ ಯಶಸ್ಸಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅದರಲ್ಲಿ ಯಶಸ್ಸುಗಳಿಸಿದರು. ಅವರ ಜೊತೆಯಲ್ಲಿ ದುಡಿದ ಎಲ್ಲ ಗೆಳೆಯರಿಗೂ ಮಾರ್ಗದರ್ಶನ ಮಾಡಿ ಎಲ್ಲವಿಧದ ನೆರವನ್ನು ಒದಗಿಸಿ, ಅವರನ್ನು ಮುಂದೆ ತಂದರು. ಮುಂಬಯಿ ಕನ್ನಡಿಗರೆಲ್ಲ ಮೆಚ್ಚುಗೆಗೆ ಪಾತ್ರರಾದರು.
ಲಾಟೂರ್ ನಲ್ಲಿ ಭೀಕರ ಭೂಕಂಪವಾದಾಗ
ಬದಲಾಯಿಸಿಮಹಾರಾಷ್ಟ್ರದ 'ಲಾಟೂರ್', ನಲ್ಲಿ ಭಯಂಕರ ಭೂಕಂಪವಾದ ಸಮಯದಲ್ಲಿ ಪ್ರತಿಹೋಟೆಲ್ ನಿಂದ ಆರ್ಥಿಕರೂಪದಲ್ಲಿ ದೇಣಿಗೆ ಯನ್ನು ಸಂಗ್ರಹಿಸಿ, 'ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ೧೦ ಲಕ್ಷರೂಪಾಯಿಗಳನ್ನು ಅರ್ಪಿಸಿದರು.