ರಾಣಿ ರಾಂಪಾಲ್[] [] ಹುಟ್ಟಿದ್ದು ಡಿಸೆಂಬರ್.೪ ೧೯೯೪. ಇವರು ಭಾರತದ ಹಾಕಿ ಆಟಗಾರ್ತಿಯಾಗಿದ್ದಾರೆ.ಇವರು ೧೫ನೇ ವಯಸ್ಸಿನಲ್ಲೇ ಭಾರತದ ರಾಷ್ಟ್ರೀಯ ಹಾಕಿ ತಂಡದಲ್ಲಿದ್ದು ೨೦೧೦ ನೇ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು.

ರಾಣಿ ರಾಂಪಾಲ್
2010 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಂಪಾಲ್ (ನೀಲಿ ಬಣ್ಣದಲ್ಲಿ).
Personal information
ಜನನ (1994-12-04) ೪ ಡಿಸೆಂಬರ್ ೧೯೯೪ (ವಯಸ್ಸು ೩೦)
ಶಹಬಾದ್, ಹರಿಯಾಣ, ಭಾರತ
ರಾಷ್ಟ್ರೀಯ ತಂಡ
2009–ಪ್ರಸ್ತುತ ಭಾರತ ಮಹಿಳಾ ರಾಷ್ಟ್ರೀಯ ಹಾಕಿ ತಂಡ 140 (78)


ಆರಂಭಿಕ ಜೀವನ

ಬದಲಾಯಿಸಿ

ರಾಣಿ ಅವರು ಡಿಸೆಂಬರ್ ೪, ೧೯೯೪ ರಂದು ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂಡದಲ್ಲಿ ಜನಿಸಿದರು, ಇವರು ಬಡ ಕುಟುಂಬದ ಹಿನ್ನಲೆಯನ್ನು ಹೊಂದ್ದಿದ್ದಾರೆ. ಅವರ ತಂದೆ ಬಂಡಿ ಎಳೆಯುವ ಉದ್ಯೋಗ.2003 ರಲ್ಲಿ ಅವರು ಹಾಕಿ ತರಬೇತಿಯನ್ನು ಆರಂಭಿಸಿದರು ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು[] ಸ್ವೀಕರಿಸಿದ ಬಲ್ದೇವ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಶಹಬಾದ್ ಹಾಕಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ವೃತ್ತಿಪರವಾಗಿ ಆಡಲು ಆರಂಭಿಸಿದಾಗ ಗೋಸ್ಪೋರ್ಟ್ಸ್ ಫೌಂಡೇಷನ್, ಕ್ರೀಡಾ ಸರ್ಕಾರೇತರ ಸಂಸ್ಥೆಯು ಹಣಕಾಸಿನ ಮತ್ತು ವಿತ್ತೀಯವಲ್ಲದ ಬೆಂಬಲ ನೀಡಿತು.[]

ವೃತ್ತಿಜೀವನ

ಬದಲಾಯಿಸಿ

2009 ರ ಜೂನ್‍ನಲ್ಲಿ ರಷ್ಯಾ ಕಜನ್ನಲ್ಲಿ ನಡೆದ ಚಾಂಪಿಯನ್ಸ್ ಚಾಲೆಂಜ್ ಟೂರ್ನಮೆಂಟ್‍ನ ಅಂತಿಮ ಪಂದ್ಯದಲ್ಲಿ 4 ಗೋಲುಗಳನ್ನು ಹೊಡೆಯುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು. ಅವರು "ಟಾಪ್ ಗೋಲ್ ಸ್ಕೋರರ್" ಮತ್ತು "ಟೂರ್ನಮೆಂಟ್‍ನ ಯುವ ಆಟಗಾರ್ತಿ"ಯಂಬ ಬಿರುದಿಗೆ ಕಾರಣರಾದರು.

2009 ರ ನವೆಂಬರ್‍‍ನಲ್ಲಿ ನಡೆದ ಏಷ್ಯಾ ಕಪ್‍ನಲ್ಲಿ ಭಾರತೀಯ ತಂಡಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2010 ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರೀಯ ತಂಡದೊಂದಿಗೆ ಆಡಿದ ನಂತರ ರಾಮ್ಪಾಲ್ 2010 ರ ಮಹಿಳಾ ಆಲ್ ಸ್ಟಾರ್ ತಂಡವನ್ನು ಸೇರಿಕೊಂಡರು. 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಗ್ವಾಂಗ್ಝೌನಲ್ಲಿ ಅವರ ಕಾರ್ಯ ನಿರ್ವಹಣೆ ಆಧಾರದ ಮೇಲೆ ಏಷ್ಯನ್ ಹಾಕಿ ಫೆಡರೇಶನ್ ಆಲ್ ಸ್ಟಾರ್ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲಾಯಿತು.

ಅರ್ಜೆಂಟೀನಾದ ರೊಸಾರಿಯೋನಲ್ಲಿ ನಡೆದ 2010 ರ ಮಹಿಳಾ ಹಾಕಿ ವಿಶ್ವಕಪ್‍ನಲ್ಲಿ ಅವರು ಒಟ್ಟು ಏಳು ಗೋಲುಗಳನ್ನು ಹೊಡೆದರು, ಇದು ವಿಶ್ವ ಮಹಿಳಾ ಹಾಕಿ ಶ್ರೇಯಾಂಕದಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ. ಇದು 1978 ರಿಂದಲೂ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. 2010 ರ ಎಫ್ಐಹೆಚ್ ಮಹಿಳಾ ಯುವ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಹಾಕಿ ವಿಶ್ವಕಪ್ 2010 ರ ಪಂದ್ಯಾವಳಿಯಲ್ಲಿ ಅಗ್ರ ಕ್ಷೇತ್ರ ಗೋಲ್ ಸ್ಕೋರರ್ ಆಗಿ ತನ್ನ ನಾಕ್ಷತ್ರಿಕ ಪ್ರದರ್ಶನವನ್ನು ಗುರುತಿಸಿ ಅವರಿಗೆ "ಅತ್ಯುತ್ತಮ ಯುವ ಆಟಗಾರನ ಪಂದ್ಯಾವಳಿಯ ಪ್ರಶಸ್ತಿ" ನೀಡಿದ್ದಾರೆ.

2013 ರ ಜೂನಿಯರ್ ವಿಶ್ವಕಪ್‍ನಲ್ಲಿ ಇವರನ್ನು 'ಪ್ಲಯೆರ್ ಆಫ್‍ ಟೂರ್ನಮೆಂಟ್‍' ಯಂದು ತೀರ್ಮಾನಿಸಿದರು, ಭಾರತ ಕಂಚಿನ ಪದಕ[] ಗೆಲ್ಲುವುದರ ಮೂಲಕ ಆಟ ಮುಕ್ತಾಯಗೊಂಡಿತು. ಇವರು FICCI 'ಕಮ್ಬ್ಯಾಕ್ ಆಫ್ ದಿ ಇಯರ್ 2014' ಪ್ರಶಸ್ತಿಗೆ ಪಾತ್ರರಾಗಿದ್ದಾರೆ[]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-12-10. Retrieved 2018-03-04.
  2. http://archive.indianexpress.com/news/haryana-cartpullers-daughter-is-hockeys-shining-young-star/1151666/0
  3. http://archive.indianexpress.com/news/haryana-cartpullers-daughter-is-hockeys-shining-young-star/1151666/0
  4. https://timesofindia.indiatimes.com/sports/more-sports/hockey/Rani-named-best-young-player-at-Womens-Hockey-World-Cup/articleshow/6543434.cms?referral=PM
  5. "ಆರ್ಕೈವ್ ನಕಲು". Archived from the original on 2014-02-22. Retrieved 2018-03-04.
  6. http://news.biharprabha.com/2014/02/ficci-announces-the-winners-of-india-sports-awards-for-2014/