ರಾಣಿ ಅಣ್ಣಾದುರೈ ಅವರು ತಿರುಮುಲ್ಲೈವೊಯಲ್‌ನಲ್ಲಿ ಜನಿಸಿದರು. ಇವರು ದ್ರಾವಿಡ ಮುನ್ನೇತ್ರ ಕಳಗಂ‌ನ (ಡಿಎಂಕೆ) ಸ್ಥಾಪಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದುರೈ ಅವರ ಪತ್ನಿಯಾಗಿದ್ದರು.

ರಾಣೀ ಅಣ್ಣಾದುರೈ

ತಮಿಳುನಾಡು ವಿಧಾನ ಪರಿಷತ್ ಸದಸ್ಯೆ
ಅಧಿಕಾರ ಅವಧಿ
೧೯೬೯ – ೧೯೭೪
Chief Minister ಎಂ. ಕರುಣಾನಿಧಿ
ಪೂರ್ವಾಧಿಕಾರಿ ಸಿ. ಎನ್. ಅಣ್ಣಾದುರೈ

ತಮಿಳುನಾಡು ಮುಖ್ಯಮಂತ್ರಿಯ ಪತ್ನಿ
ಅಧಿಕಾರ ಅವಧಿ
೧೪ ಜನವರಿ ೧೯೬೯ – ೩ ಫೆಬ್ರವರಿ ೧೯೬೯
ಪೂರ್ವಾಧಿಕಾರಿ ಸ್ಥಾನ ಈಗ ತುಂಬಿದೆ
ಉತ್ತರಾಧಿಕಾರಿ ದಯಾಳು ಮತ್ತು ರಾಜತಿ ಅಮ್ಮಾಳ್

ಆರಂಭಿಕ ಜೀವನ

ಬದಲಾಯಿಸಿ
 

ರಾಣಿಯವರು ೧೯೩೦ ರಲ್ಲಿ ಸಿಎನ್ ಅಣ್ಣಾದುರೈ ಅವರನ್ನು ವಿವಾಹವಾದರು. ಅಣ್ಣಾದುರೈ ಅವರು ಚೆನ್ನೈನ ಪಚ್ಚಯ್ಯಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು. ಇವರು ಸಾಂಪ್ರದಾಯಿಕವಾಗಿ ಹಿಂದೂ ಧಾರ್ಮಿಕ ಶೈಲಿಯ ಪ್ರಕಾರ ವಿವಾಹವನ್ನು ಮಾಡಿಕೊಂಡರು. []

ರಾಣಿ ಮತ್ತು ಅಣ್ಣಾದುರೈ ಅವರಿಗೆ ಸ್ವಂತ ಮಕ್ಕಳಿರಲಿಲ್ಲ. ಅವರು ಅಣ್ಣಾದುರೈ ಅವರ ಅಕ್ಕನ ಮಕ್ಕಳನ್ನು ದತ್ತು ಪಡೆದರು. ಅವರ ಸಹೋದರಿ ರಾಜಮಣಿ ಅಮ್ಮಾಳ್ ಅವರೊಂದಿಗೆ ವಾಸಿಸುತ್ತಿದ್ದರು ಮತ್ತು ಅವರ ಮನೆಯನ್ನು ನೋಡಿಕೊಳ್ಳುತ್ತಿದ್ದರು. ರಾಜಮಣಿ ಅಮ್ಮಾಳ್ ಅವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಅಣ್ಣಾದುರೈ ಮತ್ತು ಅವರ ಪತ್ನಿಯಾದ ರಾಣಿಯವರು ಅವರೆಲ್ಲರನ್ನು ದತ್ತು ಪಡೆದರು. []

ಸಾರ್ವಜನಿಕ ಜೀವನ

ಬದಲಾಯಿಸಿ

ಅಣ್ಣಾದುರೈ ಅವರ ಕೆಲಸ ಮತ್ತು ರಾಜಕೀಯ ಜೀವನಕ್ಕೆ ರಾಣಿಯವರು ತುಂಬಾ ಬೆಂಬಲ ನೀಡಿದ್ದರು. ಕಣ್ಣನ್ ಆರ್ ಅವರು ಬರೆದಿರುವ ಸಿ ಎನ್ ಅಣ್ಣಾದುರೈ ಅವರ ಜೀವನಚರಿತ್ರೆಯಲ್ಲಿ, ಸಿ ಎನ್ ಅಣ್ಣಾದುರೈ ಅವರು ತಡರಾತ್ರಿಯಲ್ಲಿ ಓದುತ್ತಿರುವಾಗ ಇವರು ಎಂದಿಗೂ ಅವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಏಕೆಂದರೆ ಅವರು ರಾಷ್ಟ್ರದ ಸೇವೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದನ್ನು ರಾಣಿಯವರು ಅರಿತುಕೊಂಡಿದ್ದರು. ೧೯೩೮ ರಲ್ಲಿ ಹಿಂದಿ ವಿರೋಧಿ ಆಂದೋಲನದಲ್ಲಿ ಅಣ್ಣಾದುರೈ ಅವರು ಭಾಗವಹಿಸಿದ್ದಕ್ಕಾಗಿ ಇವರನ್ನು ಬಂಧಿಸಿದಾಗ ರಾಣಿಯವರು ಭಯಭೀತರಾಗಿದ್ದರೂ ಸಹ, ಆಗಾಗ್ಗೆ ಜೈಲಿನಲ್ಲಿ ಅವರನ್ನು ಭೇಟಿಯಾಗುತ್ತಿದ್ದರು. []

ಅಣ್ಣಾದುರೈ ಅವರು ಮುಖ್ಯಮಂತ್ರಿಯಾದಾಗ, ತಮ್ಮ ಕರ್ತವ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ತಮ್ಮ ನಿವಾಸದಲ್ಲಿಯೇ ಗೃಹ ಕಚೇರಿಯನ್ನು ರಚಿಸುವುದು ಅಗತ್ಯವೆಂದು ತಿಳಿದುಕೊಂಡರು. ಅವರಿಗೆ ಕಚೇರಿಯನ್ನು ಸಜ್ಜುಗೊಳಿಸಲು ಸರ್ಕಾರವು ಅನುಮತಿಯನ್ನು ನೀಡಿತು. ಅವರು ಸ್ವೀಕರಿಸಿದ ಪೀಠೋಪಕರಣಗಳಲ್ಲಿ ಸೋಫಾ ಸೆಟ್ ಕೂಡ ಇತ್ತು. ರಾಣಿಯವರ ಕಚೇರಿ ಕೊಠಡಿಯಲ್ಲಿ ಇಡಬೇಕಾದ ಸೋಫಾ ಸೆಟ್ ಅನ್ನು ಮನೆಯಲ್ಲಿಯೇ ಇಡಲು ಬಯಸಿದ್ದರು. ಆದರೆ, ಈ ಸಮಯದಲ್ಲಿ ಅವರ ಕಚೇರಿಯು ಅವರ ಮನೆಯ ಕಟ್ಟಡದಲ್ಲಿಯೇ ಇದ್ದರೂ ಸಹ ಅಣ್ಣಾದುರೈ ಅವರು ಹಾಗೆ ಮಾಡಲು ಅವಕಾಶ ನೀಡಲಿಲ್ಲ. []

ಅಣ್ಣಾದುರೈ ಅವರ ಮರಣದ ನಂತರ, ರಾಣಿ ಅಣ್ಣಾದುರೈ ಅವರು ಎ-ಡಿಎಂಕೆ, ಡಿಎಂಕೆ ಮತ್ತು ಸ್ವತಂತ್ರವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. [] ಇವರು ೧೯೯೭ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಸ್ಥಾನಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದರು. ಇವರು ೯೨೪ ಮತಗಳನ್ನು ಗಳಿಸಿದರು ಸಹ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯ ಎದುರು ಸೋತರು. []

ಇವರು ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಇವರನ್ನು ೧೯೬೯ ರಲ್ಲಿ ತಮಿಳು ಇಸೈ ಸಂಗಮದಿಂದ ಗೌರವಿಸಲಾಯಿತು. []

ರಾಣಿ ಅಣ್ಣಾದೊರೈ ಅವರು ತಮ್ಮ ೮೨ ನೇ ವಯಸ್ಸಿನಲ್ಲಿ ೬ ಮೇ ೧೯೯೬ ರಂದು ಮದ್ರಾಸ್‌ನಲ್ಲಿ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ
  1. Kannan, R. (2010-02-09). ANNA: LIFE AND TIMES OF C.N. ANNADURAI (in ಇಂಗ್ಲಿಷ್). Penguin UK. ISBN 9788184753134.
  2. ೨.೦ ೨.೧ Kannan, R. (2010-02-09). ANNA: LIFE AND TIMES OF C.N. ANNADURAI (in ಇಂಗ್ಲಿಷ್). Penguin UK. ISBN 9788184753134.Kannan, R. (9 February 2010). ANNA: LIFE AND TIMES OF C.N. ANNADURAI. Penguin UK. ISBN 9788184753134.
  3. Ganesan, P. C. (2003-08-14). C N Annadurai (in ಇಂಗ್ಲಿಷ್). Publications Division Ministry of Information and Broadcasting Government of India. ISBN 9788123021706.
  4. Indian Recorder and Digest (in ಇಂಗ್ಲಿಷ್). 1974-01-01.
  5. Mirchandani, G.G. 32 Million Judges: An Analysis of 1977 Lok Sabha and State Elections in India. (New Delhi: Abhinav Publications, 2003)
  6. Venkatramanan, Geetha (2011-07-14). "Candid views". The Hindu (in Indian English). ISSN 0971-751X. Retrieved 2016-11-26.
  7. Data India (in ಇಂಗ್ಲಿಷ್). Press Institute of India. 1996-01-01.