ರಾಜೇಂದ್ರ ಕುಮಾರಿ ಬಾಜಪೇಯಿ

ರಾಜೇಂದ್ರ ಕುಮಾರಿ ಬಾಜಪೇಯಿ (೯ ಫೆಬ್ರವರಿ ೧೯೨೫ - ೧೭ ಜುಲೈ ೧೯೯೯) ಒಬ್ಬ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮಹಿಳಾ ರಾಜಕಾರಣಿ. ಇವರು ಭಾರತದ ಮಾಜಿ ಕೇಂದ್ರ ಸಚಿವ ಮತ್ತು ಪಾಂಡಿಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದರು. ಇವರು ೧೯೮೦, ೧೯೮೪ ಮತ್ತು ೧೯೮೯ ರಲ್ಲಿ ಸೀತಾಪುರ ಕ್ಷೇತ್ರದಿಂದ ಲೋಕಸಭೆಗೆ ಮೂರು ಬಾರಿ ಚುನಾಯಿತರಾಗಿದ್ದರು ಮತ್ತು ಮಾಜಿ ಪ್ರಧಾನಿಯ ನಿಕಟವರ್ತಿಯಾಗಿದ್ದರು.

ರಾಜೇಂದ್ರ ಕುಮಾರಿ ಬಾಜಪೇಯಿ

ಜನನ (೧೯೨೫-೦೨-೦೮)೮ ಫೆಬ್ರವರಿ ೧೯೨೫
ಲಾಲುಚಕ್, ಬಿಹಾರ
ಮರಣ 17 June 1999(1999-06-17) (aged 74)
ಪ್ರಯಾಗ್ ರಾಜ್, ಉತ್ತರ ಪ್ರದೇಶ, ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಆರಂಭಿಕ ಜೀವನ ಮತ್ತು ಕುಟುಂಬ

ಬದಲಾಯಿಸಿ

ಅವರು ೮ ಫೆಬ್ರವರಿ ೧೯೨೫ ರಂದು ಬಿಹಾರದ ಭಾಗಲ್ಪುರ್ ಜಿಲ್ಲೆಯ ಲಾಲುಚಕ್ನಲ್ಲಿ ಪಂ. ಎಸ್.ಕೆ ಮಿಶ್ರಾ ಅವರ ಮಗಳಾಗಿ ಜನಿಸಿದರು. ಪಂ. ಎಸ್.ಕೆ ಮಿಶ್ರಾ ಅವರು ರವಿಶಂಕರ್ ಶುಕ್ಲಾ ಅವರ ಮೊಮ್ಮಗಳು ಮತ್ತು ಶ್ಯಾಮ ಚರಣ್ ಶುಕ್ಲಾ ಅವರ ಸೊಸೆ. [] ಅವರು ಶಾಲಾ ಶಿಕ್ಷಣದ ನಂತರ ಅವರು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿ.ಹೆಚ್.ಡಿ ಪಡೆದರು. []

ಅವರು ೧೯೪೭ ರಲ್ಲಿ ವೃತ್ತಿಯಲ್ಲಿ ಶಿಕ್ಷಕರಾದ ಡಿಎನ್ ಬಾಜಪೇಯಿ ಅವರನ್ನು ವಿವಾಹವಾದರು. ಅವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು. ದಂಪತಿಗೆ ಅಶೋಕ್ ಬಾಜಪೇಯಿ ಎಂಬ ಮಗ ಮತ್ತು ಮನೀಶಾ ದ್ವಿವೇದಿ ಎಂಬ ಮಗಳು ಇದ್ದರು. []

ವೃತ್ತಿ

ಬದಲಾಯಿಸಿ

ಅವರು ೧೯೬೨ ರಿಂದ ೭೭ ರವರೆಗೆ ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ (ಯು.ಪಿ.ಸಿ.ಸಿ) ಮುಖ್ಯಸ್ಥರಾಗಿದ್ದರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದರು. [] ಅಂತಿಮವಾಗಿ ಅವರು ಉತ್ತರ ಪ್ರದೇಶದ ಕ್ಯಾಬಿನೆಟ್‌ನಲ್ಲಿ (೧೯೭೦-೭೭) ವಿವಿಧ ಸಚಿವಾಲಯಗಳನ್ನು ನಿರ್ವಹಿಸಿದರು. [] ನಂತರ, ಅವರು ೧೯೮೦, ೧೯೮೪ ಮತ್ತು ೧೯೮೯ ರಲ್ಲಿ ಸೀತಾಪುರದಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದರು.[] ಅವರು ಸಮಾಜ ಕಲ್ಯಾಣ ಸಚಿವಾಲಯದ (೧೯೮೪-೮೬) ಸ್ವತಂತ್ರ ಉಸ್ತುವಾರಿ ಹೊಂದಿರುವ ಕೇಂದ್ರ ರಾಜ್ಯ ಸಚಿವರಾದರು, ಕಾರ್ಮಿಕ ಸ್ವತಂತ್ರ ಉಸ್ತುವಾರಿ (೧೯೮೬-೮೭) ಮತ್ತು ರಾಜೀವ್ ಗಾಂಧಿ ಅವರೊಂದಿಗೆ ಕಲ್ಯಾಣದ ಸ್ವತಂತ್ರ ಉಸ್ತುವಾರಿ (೧೯೮೭-೮೯) ರಾಜ್ಯ ಸಚಿವರಾದರು.[] ಅವರು ೨ ಮೇ ೧೯೫೫ ರಿಂದ ೨೨ ಏಪ್ರಿಲ್ ೧೯೮೮ ರವರೆಗೆ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡರು []

ದೀರ್ಘಕಾಲದ ಮೂತ್ರಪಿಂಡ ಸಂಬಂಧಿ ಅನಾರೋಗ್ಯದ ನಂತರ ಅವರು ೧೭ ಜುಲೈ ೧೯೯೯ ರಂದು ಅಲಹಾಬಾದ್‌ನಲ್ಲಿ ನಿಧನರಾದರು. ಅವರು ಪತಿ ಮತ್ತು ಮಕ್ಕಳನ್ನು ಅಗಲಿದ್ದರು. [] ಅವರ ಮರಣದ ಸಮಯದಲ್ಲಿ, ಅವರ ಮಗ ಅಶೋಕ್ ಬಾಜಪೇಯಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರೆ, ಅವರ ಸೊಸೆ ಡಾ. ರಂಜನಾ ಬಾಜಪೇಯಿ ಉತ್ತರ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ಉಲ್ಲೇಖಗಳು

ಬದಲಾಯಿಸಿ

[]

  1. "Rajendra Kumari Bajpai". S9 Biography. Archived from the original on 5 ನವೆಂಬರ್ 2013. Retrieved 22 December 2012.
  2. "9th Lok Sabha: Members Bioprofile". Lok Sabha Official website. Archived from the original on 3 November 2013.
  3. ೩.೦ ೩.೧ "9th Lok Sabha: Members Bioprofile". Lok Sabha Official website. Archived from the original on 3 November 2013."9th Lok Sabha: Members Bioprofile". Lok Sabha Official website. Archived from the original on 3 November 2013.
  4. "It's family first for UP parties in poll battle". India Today. 14 January 2012.
  5. "Rajendra Kumari Bajpai is dead". Rediff News. 17 July 1999. Retrieved 23 December 2012.
  6. "Worldwide Guide to Women in Leadership". guide2womenleaders. Retrieved 22 December 2012.
  7. Pondicherry Legislative Assembly
  8. "Bajpai dead". 18 July 1999. Archived from the original on 22 ಡಿಸೆಂಬರ್ 2004. Retrieved 23 December 2012.
  9. "Rajendra Kumari Bajpai is dead". Rediff News. 17 July 1999. Retrieved 23 December 2012."Rajendra Kumari Bajpai is dead". Rediff News. 17 July 1999. Retrieved 23 December 2012.