ರಾಜು ಅನಂತಸ್ವಾಮಿ[] ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿಯವರ ಮಗ. ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಯನ್ನು ಕೂಡ ಮಾಡಿದ್ದರು.

ರಾಜು ಅನಂತಸ್ವಾಮಿ
ಜನನ(೧೯೭೩-೦೪-೧೯)೧೯ ಏಪ್ರಿಲ್ ೧೯೭೩
ಮರಣಜನವರಿ 17, 2009(2009-01-17)
ವೃತ್ತಿ(ಗಳು)ಹಾಡುಗಾರ, ಗಾಯಕ, ನಟ, ಜಾನಪದ ಗಾಯಕ

ಜನನ/ಜೀವನ

ಬದಲಾಯಿಸಿ
  • ರಾಜು ಅನಂತಸ್ವಾಮಿ ಅವರು ಹುಟ್ಟಿದ ದಿನ ಏಪ್ರಿಲ್ 19, 1972. ಮೈಸೂರು ಅನಂತಸ್ವಾಮಿಗಳ ಮಗನಾದ ರಾಜು ಅನಂತಸ್ವಾಮಿ, ತಂದೆಯೊಂದಿಗೆ ಪುಟ್ಟ ಹುಡುಗನಾಗಿದ್ದಾಗಲೇ ತಬಲಾದಲ್ಲಿ ತಾಳ ಹಾಕುತ್ತಾ ಶ್ರದ್ಧೆಯಿಂದ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
  • ತನ್ನ ಒಂಭತ್ತನೆಯ ವಯಸ್ಸಿನಲ್ಲೇ ತಮ್ಮ ತಂದೆಯವರ ಕಚೇರಿಗೆ ತಬಲಾ ನುಡಿಸಿದ ಈ ಹುಡುಗ, ಮುಂದೆ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಹಾಡುತ್ತಾ ಬೆಳೆದರು. ಅನಂತಸ್ವಾಮಿ ಅವರು ಈ ಲೋಕವನ್ನು ಬಿಟ್ಟು ಹೋದಾಗ, ಅವರ ಅಮರಧ್ವನಿ ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ಸಾಕಷ್ಟು ನೀಗಿಸಿದ್ದರು.
  • ಹೀಗಿದ್ದರೂ, ಆತ ತಮ್ಮ ತಂದೆಯವರ ಒಂದು ಧ್ವನಿಯ ಛಾಯೆಯಾಗಿ ಮಾತ್ರ ಉಳಿಯದೆ, ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಸಹಾ ಅಭಿವ್ಯಕ್ತಿಸುತ್ತ ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸುತ್ತ ಬಂದರು. ಒಂದೆಡೆ ತಮ್ಮದೇ ಆದ ರಾಗ ಸಂಯೋಜನೆಗಳು, ಮತ್ತೊಂದೆಡೆಯಲ್ಲಿ ಅನಂತಸ್ವಾಮಿಗಳು ಮಾಡಿದ ಕೆಲಸಕ್ಕೆ ವಿಸ್ತಾರ ಇವೆರಡನ್ನೂ ಜೊತೆಜೊತೆಯಾಗಿ ನೀಡುತ್ತಾ ಬಂದರು.
  • ರಾಜು ಅನಂತಸ್ವಾಮಿ ಅವರು ಹಾಡಿದ ಹಾಡುಗಳು, ಅವರು ಪಾಠ ಹೇಳಿಕೊಟ್ಟ ಶಿಷ್ಯರು, ಅವರು ಮುಂದೆ ತಂದ ಹಲವು ಪ್ರತಿಭೆಗಳು, ಅವರು ಹೊರತಂದ ಧ್ವನಿಮುದ್ರಿಕೆಗಳು ಇವೆಲ್ಲಾ ರಾಜು ಅನಂತಸ್ವಾಮಿ ನೀಡಿರುವ ಅಗಾಧ ಕೊಡುಗೆಗಳಾಗಿವೆ. ಇವೆಲ್ಲವನ್ನೂ ಅವರು ತಾವು ಬದುಕಿದ್ದ ಅತ್ಯಲ್ಪ ಜೀವಿತಾವಧಿಯ ಕಾಲದಲ್ಲೇ ಮಾಡಿದ್ದಾರೆ ಎನ್ನುವುದು, ಈ ಸಕಲ ಸಾಧನೆಗಳೂ ಅವರಿಗಿದ್ದ ಅತ್ಯಭೂತ ಸಾದ್ಯತೆಗಳಲ್ಲಿನ, ಒಂದು ತುಣುಕು ಮಾತ್ರವಾಗಿದ್ದವು ಎಂಬುದನ್ನು ನೆನಪಿಸುತ್ತವೆ.

ಹಾಡಿರುವ ಹಾಡುಗಳ ಪಟ್ಟಿ

ಬದಲಾಯಿಸಿ
  • ರಾಜು ಅನಂತಸ್ವಾಮಿ[] ಅವರು ಹಾಡಿರುವ ಕೆಲವು ಖ್ಯಾತ ಹಾಡುಗಳ ಪಟ್ಟಿ
  1. ರತ್ನನ ಪದಗಳು,
  2. ಹೆಂಡತಿ ಒಬ್ಬಳು,
  3. ಕೈಲಾಸಂ ಗೀತೆಗಳು ಮುಂತಾದ ಹಾಸ್ಯ ಮಿಶ್ರಿತ ಲಘು ಧಾಟಿಯ ಹಾಡುಗಳಿರಲಿ,
  4. ಬನ್ನಿ ಹರಸಿರಿ ತಂದೆಯೇ,
  5. ನಾಕು ತಂತಿ,
  6. ದೇವ ನಿನ್ನ ಮಾಯೆಗಂಜಿ,
  7. ಯಾಕೆ ಅರ್ಥ ಬಾಳಿಗೆ ,
  8. ಮತ್ತದೇ ಬೇಸರ,
  9. ಯಾವ ಮೋಹನ ಮುರಳಿ ಕರೆಯಿತು,
  10. ಮಂಕುತಿಮ್ಮನ ಕಗ್ಗದಂತಹ ಭಾವ ಪರವಶತೆ ತುಂಬುವ, ತುಂಬು ಗಾಂಭೀರ್ಯ ಬಯಸುವ ಹಾಡುಗಳಿರಲಿ, ಅದಕ್ಕೆ ರಾಜು ಜೀವ ತುಂಬಿದ ರೀತಿ ಮನೋಜ್ಞವಾದದ್ದು.

ನಟರಾಗಿ ರಾಜು ಅನಂತಸ್ವಾಮಿ

ಬದಲಾಯಿಸಿ
  • ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಗೂ ಇಳಿದಿದ್ದರು.[]
  • ನಟನೆಯಲ್ಲಿ ಅವರು ಮೂಡಿಸಿದ ಲೀಲಾಜಾಲ ಅಭಿವ್ಯಕ್ತಿ ಯಾವುದೇ ಮೇಧಾವಿ ಕಲಾವಿದನ ಸಾಮರ್ಥ್ಯಕ್ಕೂ ಕಡಿಮೆಯಾದದ್ದಲ್ಲ ಎನ್ನುತ್ತಾರೆ ಅವರನ್ನು ನಿರ್ದೇಶಿಸಿದ್ದ ಗೆಳೆಯರು. ಅವರು ರಂಗಭೂಮಿಯಲ್ಲಿ ನೀಡಿದ ಸಂಗೀತ ಸಂಯೋಜನೆ ಪ್ರೇಮಾ ಕಾರಂತರನ್ನೂ ಕೂಡಾ ಅಚ್ಚರಿಗೀಡು ಮಾಡಿತ್ತು ಎನ್ನುತಾರೆ ಸಿನಿಮಾ ಮತ್ತು ರಂಗಭೂಮಿ ನಟ ನಿರ್ದೇಶಕ ಮಂಡ್ಯ ರಮೇಶ್.

ಜನವರಿ 17, 2009ರಂದು ರಾಜು ಅನಂತಸ್ವಾಮಿ[] ಅವರು ಈ ಲೋಕವನ್ನು ಬಿಟ್ಟು ಹೋದರು. ಕನ್ನಡಕ್ಕೆ ಒಬ್ಬ ಉತ್ತಮ ಕೊಡುಗೆಯಾಗಿದ್ದ ರಾಜು ಅನಂತಸ್ವಾಮಿ ಚಿಕ್ಕ ಪ್ರಾಯದಲ್ಲೇ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ