ರಾಜಲಕ್ಷ್ಮಿ ಎನ್.ರಾವ
ರಾಜಲಕ್ಷ್ಮಿ ಎನ್.ರಾವ್ ಅವರ ಜನನ ೧೯೩೪ ಡಿಶಂಬರ ೧೮ ರಂದು ಬೆಂಗಳೂರಿನಲ್ಲಿ ಆಯಿತು. ರಾಜಲಕ್ಷ್ಮಿಯವರು 'ಕನ್ನಡದ ಕಣ್ವ' ಎಂದು ಹೆಸರಾದ ಬಿ.ಎಮ್.ಶ್ರೀಕಂಠಯ್ಯನವರ ಮೊಮ್ಮಗಳು. ತಾತನ ಮನೆಯಲ್ಲಿ ಅನೇಕ ಹಿರಿ ಕಿರಿಯ ಸಾಹಿತಿಗಳ ಜೊತೆ ಒಡನಾಟ. ಮೈಸೂರಿನಲ್ಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಾದ ಬಳಿಕ ನಾಗಪುರದಲ್ಲಿ ಖಾಸಗಿಯಾಗಿ ಬಿ.ಏ. ಪರೀಕ್ಷೆ ಮಾದಿಕೊಂಡರು. ಮದುವೆ ಹಾಗು ಒಂದು ಹೆಣ್ಣು ಮಗುವಿನ ಜನನದ ನಂತರ ರಾಜಲಕ್ಷ್ಮಿಯವರ ಮನಸ್ಸು ಅಧ್ಯಾತ್ಮದ ಕಡೆಗೆ ಹೊರಳಿತು.ಸಂಸಾರದಿಂದ ವಿಮುಖವಾದ ರಾಜಲಕ್ಷ್ಮಿಯವರು ಮನೆ ತ್ಯಜಿಸಿ ಉತ್ತರಕಾಶಿ ಹಾಗು ಮಚಲಿಪಟ್ಟಣಗಳಲ್ಲಿ ಅಧ್ಯಾತ್ಮಸಾಧನೆಯಲ್ಲಿ ಜೀವನ ಸಾಗಿಸತೊಡಗಿದರು.
ರಾಜಲಕ್ಷ್ಮಿಯವರ ಏಕೈಕ ಕೃತಿ ಸಂಗಮ ಎಂಬ ಕಥಾಸಂಕಲನ. ಜಾನ್ ಗಾಲ್ಸವರ್ದಿಯವರ Apple Tree ಯನ್ನು ಕನ್ನಡಕ್ಕೆ ಸೇಬಿನ ಗಿಡ ಎಂದು ಅನುವಾದಿಸಿದ್ದಾರೆ.