ರಾಜನ್ ಮಿಶ್ರಾ ಮತ್ತು ಸಾಜನ್

ರಾಜನ್ ಮತ್ತು ಸಾಜನ್ ಮಿಶ್ರಾ[] (ಹಿಂದಿ: राजन और सजान मिश्रा) ಸಹೋದರರು, ಭಾರತೀಯ ಶಾಸ್ತ್ರೀಯ ಸಂಗೀತದ ಕಯಾಲ್[] ಶೈಲಿಯ ಪ್ರಸಿದ್ಧ ಗಾಯಕರು.

Pandit Rajan Sajan Mishra Performing at Bharat Bhavan Bhopal

ಆರಂಭಿಕ ಜೀವನ

ಬದಲಾಯಿಸಿ

ರಾಜನ್ ಮಿಶ್ರಾ(ಜನನ 1951 - 2021) ಮತ್ತು ಸಾಜನ್ ಮಿಶ್ರಾ (ಜನನ 1956 - 2014) ವಾರಣಾಸಿಯಲ್ಲಿ ಜನಿಸಿದರು.ಸಂಗೀತಾಭ್ಯಾಸದ ಶಿಕ್ಷಣವನ್ನು ಚಿಕ್ಕಜ್ಜನಾದ(ಅಜ್ಜನ ತಮ್ಮನಾದ) 'ಬಡೇ ರಾಮ್ ದಾಸ್ ಮಿಶ್ರ'ರವರಿಂದ ಪಡೆದುಕೊಂಡರು.೧೯೭೭ರ ನಂತರದ ದಿನಗಳಲ್ಲಿ ಅವರ ಕುಟುಂಬವು ದಿಲ್ಲಿಯ ರಮೇಶ್ ನಗರಕ್ಕೆ ಸ್ಥಳಾಂತರಗೊಂಡಿತು.

ವೃತ್ತಿ ಜೀವನ

ಬದಲಾಯಿಸಿ

1978 ರಲ್ಲಿ ಶ್ರೀಲಂಕಾದಲ್ಲಿ[] ತಮ್ಮ ಮೊದಲ ಸಂಗೀತ ಕಚೇರಿಗಳನ್ನು ನೀಡಿ,ಶೀಘ್ರದಲ್ಲೇ ಅವರು ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಯುಎಸ್ಎ, ಯುಕೆ, ನೆದರ್ಲ್ಯಾಂಡ್ಸ್, ಯುಎಸ್ಎಸ್ಆರ್, ಸಿಂಗಪೂರ್, ಕತಾರ್, ಬಾಂಗ್ಲಾದೇಶ,ಮಸ್ಕತ್ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಮಿಶ್ರಾ ಸಹೋದರರು ಶತಕಗಳ ಹಳೆಯ ಮಿಶ್ರಾ ಘರಾನಾ ಎಂಬ(ಭಾರತದ ಬನಾರಸ್ನಿಂದ) ಸಂಗೀತ ಕುಟುಂಬಕ್ಕೆ ಸೇರಿದವರು.ನೇಪಾಳದ ಎರಡು ಪ್ರಸಿದ್ಧ ಸಂಗೀತ ವ್ಯಕ್ತಿಗಳಾದ ಶಂಭು ಪ್ರಸಾದ್ ಮಿಶ್ರಾ ಮತ್ತು ಮೀರಾ ರಾಣಾ ಸಹ ಒಂದೇ ಕುಟುಂಬಕ್ಕೆ ಸೇರಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ