ರಾಜಕುಮಾರಿ ಗುಪ್ತಾ
ರಾಜಕುಮಾರಿ ಗುಪ್ತಾ ಅವರು ೧೯೦೨ ರಲ್ಲಿ ಜನಿಸಿದರು. ಕಾನ್ಪುರ ಕಾಕೋರಿ ಪಿತೂರಿಯಲ್ಲಿ ಅವರು ಹೆಸರುವಾಸಿಯಾದ ಸ್ವಾತಂತ್ರ್ಯ ಹೋರಾಟಗಾರ್ತಿ. [೧] [೨] [೩] ರಾಜ್ಕುಮಾರಿ ಗುಪ್ತಾ ಕಾಕೋರಿ ಪಿತೂರಿಗಾಗಿ ೧೯೩೦, '೩೨ ಮತ್ತು '೪೨ ರಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. [೪] [೫]
ರಾಜ್ ಕುಮಾರಿ ಗುಪ್ತಾ
| |
---|---|
ಹುಟ್ಟು | ೧೯೦೨ ಕಾನ್ಪುರ್, ಭಾರತ
|
ರಾಷ್ಟ್ರೀಯತೆ | ಭಾರತೀಯ |
ಪರಿಚಿತ ಫಾರ್ | ಕಾಕೋರಿ ಪಿತೂರಿಯ ಸದಸ್ಯ |
ಸಂಗಾತಿ(ಗಳು) | ಮದನ್ ಮೋಹನ್ ಗುಪ್ತಾ |
ಆರಂಭಿಕ ಜೀವನ
ಬದಲಾಯಿಸಿರಾಜಕುಮಾರಿ ಗುಪ್ತಾ ೧೯೦೨ ರಲ್ಲಿ ಕಾನ್ಪುರದ ಬಂದಾ ಜಿಲ್ಲೆಯಲ್ಲಿ ಜನಿಸಿದರು. ತಮ್ಮ ೧೩ ನೇ ವಯಸ್ಸಿನಲ್ಲೇ ಗುಪ್ತಾ ಅವರು ಮದನ್ ಮೋಹನ್ ಗುಪ್ತಾ ಅವರನ್ನು ವಿವಾಹವಾದರು.
ಸ್ವಾತಂತ್ರ್ಯ ಹೋರಾಟ
ಬದಲಾಯಿಸಿರಾಜಕುಮಾರಿ ಗುಪ್ತಾ ಅವರು ತಮ್ಮ ಪತಿಯೊಂದಿಗೆ ಅಲಹಾಬಾದ್‌ನಲ್ಲಿ ಮಹಾತ್ಮ ಗಾಂಧಿ ಮತ್ತು ಚಂದ್ರಶೇಖರ್ ಆಜಾದ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕಾಕೋರಿ ಪಿತೂರಿಯಲ್ಲಿ ಭಾಗಿಯಾದ ಸಹ ರಾಷ್ಟ್ರೀಯತಾವಾದಿಗಳಿಗೆ ಬಂದೂಕುಗಳನ್ನು ಸರಬರಾಜು ಮಾಡುವುದು ಹಾಗೂ ರಹಸ್ಯ ಪತ್ರಗಳನ್ನು ರವಾನಿಸುವುದು, ಪತ್ರಿಕೆಗಳು ವಿವರಿಸಿರುವಂತೆ ಗುಪ್ತಾ ಅವರ ಪಾತ್ರವಿತ್ತು. ೧೯೨೪ ರಲ್ಲಿ ಅಸಹಕಾರ ಚಳವಳಿಯ ಹಠಾತ್ ನಿಲುಗಡೆಯೊಂದಿಗೆ, ರಾಜ್ಕುಮಾರಿ ಕ್ರಾಂತಿಕಾರಿ ವಿಚಾರಗಳತ್ತ ಹೆಚ್ಚು ಸೆಳೆಯಲ್ಪಟ್ಟರು ಮತ್ತು ಚಂದ್ರಶೇಖರ್ ಆಜಾದ್ ಅವರ ನಿಕಟ ವಲಯಕ್ಕೆ ಬಂದರು. ಕ್ರಾಂತಿಕಾರಿಗಳೊಂದಿಗೆ, ವಿಶೇಷವಾಗಿ ಚಂದ್ರಶೇಖರ್ ಆಜಾದ್ ಅವರೊಂದಿಗೆ ನಿಕಟ ಸಂಪರ್ಕವನ್ನು ಸ್ಥಾಪಿಸಿದ ನಂತರ, ರಾಜಕುಮಾರಿ ಅವರು ತಮ್ಮ ಪತಿ ಮತ್ತು ಅತ್ತೆಯವರಿಗೆ ತಿಳಿಯದೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಹೆಚ್.ಅರ್.ಎ) ನಲ್ಲಿ ಚಂದ್ರಶೇಖರ್ ಆಜಾದ್ ಒಡನಾಡಿಗಳಿಗೆ ರಹಸ್ಯ ಸಂದೇಶಗಳನ್ನು ಮತ್ತು ವಸ್ತುಗಳನ್ನು ತಲುಪಿಸಲು ಪ್ರಾರಂಭಿಸಿದರು.
ಕಾಣದ ಮುಖಗಳು ಮತ್ತು ಕೇಳದ ಧ್ವನಿಗಳು, ಎಂದು ವುಮೆನ್ ಇನ್ ದಿ ಇಂಡಿಯನ್ ನ್ಯಾಶನಲ್ ಮೂವ್‌ಮೆಂಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ೧೯೩೦-೪೨ ರಲ್ಲಿ ಸುರುಚಿ ಥಾಪರ್-ಬ್ಜೋರ್ಕರ್ಟ್ ಅವರು ತಮ್ಮ ಉಡುಪಿನ ಕೆಳಗೆ ಬಂದೂಕುಗಳನ್ನು ಬಚ್ಚಿಟ್ಟುಕೊಂಡು ದೂರದಲ್ಲಿ ನಡೆಯುತ್ತಿದ್ದರು. ಅವರನ್ನು ನೋಡಿ ಬಂಧಿಸಲಾಯಿತು. ಈ ಸುದ್ದಿಯನ್ನು ಕೇಳಿದ ಅವರ ಸಂಬಂಧಿಕರು ಅವರನ್ನು ನಿರಾಕರಿಸಿದರು. ಅವರು ಸ್ಥಳೀಯ ಪತ್ರಿಕೆ ವೀರ್ ಭಗತ್‌ನಲ್ಲಿ ತಮ್ಮೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿಕೊಂಡರು. ಈ ಘಟನೆಯ ನಂತರ ಗುಪ್ತಾ ಏಕಾಂತ ಜೀವನ ನಡೆಸಿದರು.
ಚಂದ್ರಶೇಖರ್ ಆಜಾದ್ ಅವರ ಸಹವರ್ತಿ ರಾಜಕುಮಾರಿ ಗುಪ್ತಾ, ಲೇಖಕ ಸಾಗರಿ ಛಾಬ್ರಾ ಅವರೊಂದಿಗಿನ ಸಂವಾದದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಮಹಿಳೆಯರ ಪರವಾಗಿ ಮಾತನಾಡುತ್ತಾ, "ಹಮ್ಕೋ ಜೋ ಕರ್ನಾ ಥಾ, ಕಿಯಾ" (ನಾವು ಏನು ಮಾಡಬೇಕು, ನಾವು ಮಾಡಿದ್ದೇವೆ) [೬] ಎಂದು ಹೇಳಿ ಮುಂದೆ ಅವಳು ಹೇಳುತ್ತಾಳೆ ಎಂದರು, "ಹಮ್ ಉಪರ್ ಸೆ ಗಾಂಧಿವಾದಿ ದೆ, ನೀಚೆ ಸೆ ಕ್ರಾಂತಿವಾದಿ" (ನಾವು ಮೇಲಿನಿಂದ ಗಾಂಧಿವಾದಿಗಳು; ಕೆಳಗೆ ನಾವು ಕ್ರಾಂತಿಕಾರಿಗಳು) ಎಂದರು. [೭]
ಇವನ್ನೂ ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "Archiving herstory in the freedom struggle". Business Standard. Retrieved July 1, 2015.
- ↑ Devi, Bula. "Unsung heroines of Independence". The Hindu. Retrieved August 14, 2012.
- ↑ Lal, Amrith. "Those That Time Forgot". Indian Express. Retrieved August 1, 2015.
- ↑ Thapar-Bjorkert, Suruchi (7 February 2006). Women in the Indian National Movement: Unseen Faces and Unheard Voices, 1930-42’. SAGE Publications. p. 308. ISBN 9352803485.
- ↑ Chhabra, Sagari (16 April 2015). In Search of Freedom: Journeys Through India and South-East Asia. HarperCollins Publishers India. p. 354. ISBN 9350290928.
- ↑ Lal, Amrith. "Those That Time Forgot". Indian Express. Retrieved August 1, 2015.Lal, Amrith. "Those That Time Forgot". Indian Express. Retrieved August 1, 2015.
- ↑ "Archiving herstory in the freedom struggle". Business Standard. Retrieved July 1, 2015."Archiving herstory in the freedom struggle". Business Standard. Retrieved July 1, 2015.