ರಾಂಪುರ (ಮೊಳಕಾಲ್ಮೂರು)
ರಾಂಪುರ ಎಂಬ ಊರು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿಗೆ ಸೇರಿರುತ್ತದೆ ಇಲ್ಲಿ ಬಳ್ಳಾರಿ-ಬೆಂಗಳೂರು ರಾಜ್ಯಹೆದ್ದಾರಿ-19 ಇಲ್ಲಿ ಹಾದುಹೋಗುವುದು.
ವೀಳ್ಯದೆಲೆ, ಬದನೆ ಕಾಯಿ, ಈರುಳ್ಳಿ ಈ ಹೆಸರುಗಳು ರಾಂಪುರದೊಂದಿಗೆ ಬೆಸೆದುಕೊಂಡಿವೆ. ಕಾರಣ ಅಂದು ಬೆಳೆಯುತಿದ್ದ ವೀಳ್ಯದೆಲೆ, ರುಚಿಗೆ ಹೆಸರುವಾಸಿಯಾದ ರಾಂಪುರ ಬದನೆ ಕಾಯಿ, ರಾಂಪುರ ಈರುಳ್ಳಿ. ಕರ್ನಾಟಕದ ಸುಮಾರು ಐವತ್ತು ತಳಿಗಳಲ್ಲಿ ರಾಂಪುರ ಬದನೆಕಾಯಿಯ ತಳಿಯು ಸಹ ಒಂದೂ ಬದನೆ ಅಲ್ಲದೆ, ರಾಂಪುರ ಈರುಳ್ಳಿ ಸಹ ಹೆಸರುವಾಸಿಯಾಗಿದೆ.
ಎಪ್ಪತ್ತರ ದಶಕದಲ್ಲಿ ಈ ಗ್ರಾಮವು ಎಲೆರಾಂಪುರ ಎನ್ನುವ ಹೆಸರಿನಿಂದ ಪ್ರಚಲಿತದಲ್ಲಿತ್ತು. ಇಂದಿಗೂ ಹಳೆಯ ಜನ ಎಲೆ ರಾಂಪುರ ಎಂದೇ ಗುರುತಿಸುತ್ತಾರೆ. ಆಗ ರಾಂಪುರದ ಸುತ್ತ ಮುತ್ತ ಇದ್ದ ತೋಟಗಳಲ್ಲಿ ಉತ್ತಮ ಗುಣಮಟ್ಟದ ವೀಳ್ಯದೆಲೆ ಬೆಳೆಯುತಿದ್ದರು. ಆ ರುಚಿಗೆ ಮಾರು ಹೋಗಿದ್ದ ಜನ, ರಾಂಪುರದಿಂದ ವೀಳ್ಯದೆಲೆಗಳನ್ನ ತರಿಸಿಕೊಳ್ಳುತಿದ್ದರು. ಹಲವಾರು ಪಟ್ಟಣಗಳಿಗೆ ಇಲ್ಲಿಂದಲೇ ವೀಳ್ಯದೆಲೆ ಸರಬರಾಜು ಆಗುತಿತ್ತು. ರಾಂಪುರದ ತೋಟಗಳಲ್ಲಿ ಪ್ರಮುಖವಾಗಿ ವೀಳ್ಯದೆಲೆ ಅಂದಿನ ಕಾಲದ ವಿಶೇಷತೆ ಯಾಗಿತ್ತು.
ರಾಂಪುರ ಈರುಳ್ಳಿ:- ಕಳೆದ ಮೂರು ದಶಕಗಳಿಂದ ರಾಂಪುರ ಈರುಳ್ಳಿ ಪ್ರಚಲಿತದಲ್ಲಿದೆ. ಕೆಂಪು ಬಣ್ಣದ ದುಂಡು ಆಕಾರದ 3”-4” ಉದ್ದ ವಿರುವ ಈ ಈರುಳ್ಳಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ, ಕಾರ ಕಡಿಮೆ. ಅಧಿಕ ಇಳುವರಿ ಕೊಡುತ್ತದೆ. ಗೆಡ್ಡೆ ಮೆದು. ಈ ಈರುಳ್ಳಿ, ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಬೆಳೆಯುತ್ತದೆ, ಹೀಗಾಗಿ ಈ ಈರುಳ್ಳಿ ಬೀಜ ಕೊಳ್ಲಲು, ಕರ್ನಾಟಕ ಸೇರಿದಂತೆ ಆಂಧ್ರ ತಮಿಳುನಾಡಿಂದ ರೈತರು ಬರುತ್ತಾರೆ.
ರಾಂಪುರ ಬದನೆ: ರೈತರು ರಾಂಪುರದ ಸುತ್ತಮುತ್ತಲಿನ ಊರುಗಳಲ್ಲಿ, ಸೀಸನ್ ಸಮಯದಲ್ಲಿ ಅತಿ ಹೆಚ್ಚಾಗಿ ಬದನೆಕಾಯಿ ಬೆಳೆಯುತಿದ್ದರು.