ಗುಟ್ಟಾಗಿಡುವಿಕೆ

(ರಹಸ್ಯ ಇಂದ ಪುನರ್ನಿರ್ದೇಶಿತ)

ಗುಟ್ಟಾಗಿಡುವಿಕೆ ಎಂದರೆ ಪ್ರಾಯಶಃ ಮಾಹಿತಿಯನ್ನು ಇತರ ವ್ಯಕ್ತಿಗಳೊಂದಿಗೆ ಹಂಚಿಕೊಂಡು, ತಿಳಿಯುವ ಅಗತ್ಯವಿರದ ಕೆಲವು ವ್ಯಕ್ತಿಗಳು ಅಥವಾ ಗುಂಪುಗಳಿಂದ ಅದನ್ನು ಮರೆಮಾಡುವ ಅಭ್ಯಾಸ. ಮರೆಮಾಡಲಾದದ್ದನ್ನು ಗುಟ್ಟು ಅಥವಾ ರಹಸ್ಯ ಎಂದು ಕರೆಯಲಾಗುತ್ತದೆ. ಗುಟ್ಟಿನ ಒಳವಸ್ತು ಅಥವಾ ಸ್ವರೂಪ, ರಹಸ್ಯವನ್ನು ಕಾಪಾಡಿಕೊಳ್ಳುತ್ತಿರುವ ಗುಂಪು ಅಥವಾ ಜನ, ಮತ್ತು ಗುಟ್ಟಾಗಿಡುವಿಕೆಗೆ ಪ್ರೇರಣೆಯನ್ನು ಅವಲಂಬಿಸಿ, ಗುಟ್ಟಾಗಿಡುವಿಕೆಯು ಹಲವುವೇಳೆ ವಿವಾದಾತ್ಮಕವಾಗಿರುತ್ತದೆ. ಸರ್ಕಾರಿ ಸಂಸ್ಥೆಗಳು ಗುಟ್ಟುಮಾಡುವುದನ್ನು ಹಲವುವೇಳೆ ವಿಪರೀತ ಎಂದು ಅಥವಾ ಕಳಪೆ ಕಾರ್ಯನಿರ್ವಹಣೆಯ ಪ್ರಚಾರವೆಂದು ನಿಂದಿಸಲಾಗುತ್ತದೆ. ವ್ಯಕ್ತಿಗಳ ಮೇಲಿನ ಮಾಹಿತಿಯನ್ನು ಅತಿಯಾಗಿ ಬಹಿರಂಗಪಡಿಸುವುದು ಗೋಪ್ಯತೆಯ ಸದ್ಗುಣದ ವಿರುದ್ಧವಾಗಿರಬಹುದು. ಗುಟ್ಟಾಗಿಡುವಿಕೆಯು ಅನೇಕ ಭಿನ್ನ ರೀತಿಗಳಲ್ಲಿ ಇರಬಹುದು, ಉದಾಹರಣೆಗೆ ಜಟಿಲಗೊಳಿಸುವ ಮೂಲಕ, ಹೇಗೆಂದರೆ ಸುಲಭವಾಗಿ ಗಮನಿಸಬಹುದಾದ ರಹಸ್ಯಗಳನ್ನು ಸಂಕೀರ್ಣ ವಿಲಕ್ಷಣವಾದ ಭಾಷೆ ಅಥವಾ ಸ್ಟೆಗನಾಗ್ರಫ಼ಿಯ ಹಿಂದೆ ಮರೆಮಾಡುವುದು.