ರವಿಕುಮಾರ್, ಆರ್.ಟಿ.ಐ. ಕಾರ್ಯಕರ್ತ, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಹಾಗೂ ಸದಸ್ಯರ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಉಚ್ಚನ್ಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಸ್ವತಃ ರವಿಕುಮಾರ್ ತಮ್ಮ ಪ್ರಕರಣದ ಪರ, ವಾದ ಮಂಡಿಸುತ್ತಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ಮುಖ್ಯಮಂತ್ರಿ, ಇಂಧನ ಸಚಿವರಿಗೆ ನೋಟಿಸ್ ಜಾರಿ ಮಾಡಿತ್ತು.

ಜೀವನ ಬದಲಾಯಿಸಿ

ರವಿಕುಮಾರ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಂಚನಹಳ್ಳಿಯವರು. ರವಿಕುಮಾರ್, ಚಿತ್ರಕಲಾ ಪದವಿ ಪಡೆದಿದ್ದಾರೆ.ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಅಂಚೆಖಾತೆಯನ್ನು ಸುಧಾರಿಸಿದರು ಬದಲಾಯಿಸಿ

ಮಳವಳ್ಳಿ ತಾಲೂಕಿನ ಅಂಚೆ ಕಚೇರಿಯಿಂದ ಅಂಚೆ ಪತ್ರಗಳು ಬರುತ್ತಿದ್ದವು. ಗ್ರಾಮದ ಯುವರಕ ಉದ್ಯೋಗ ಪತ್ರಗಳು ಎಷ್ಟೋ ದಿನಗಳಾದ ನಂತರ ಬರುತ್ತಿದ್ದವು. ಹಲವರಿಗೆ 'ಇಂಟರ್ವ್ಯೂ' ಆದ ಬಹಳ ದಿನಗಳ ಬಳಿಕ ಪತ್ರಗಳು ಅವರ ಕೈಸೇರುತ್ತಿದ್ದವು. ಆಗ, ರವಿಕುಮಾರ್ ರವರು, ಮಾಹಿತಿ ಹಕ್ಕು ಕಾಯಿದೆ ಅಡಿ, ದಾಖಲೆ ಪತ್ರ ಪಡೆದು, ಹೋರಾಟ ನಡೆಸಿ, ಗ್ರಾಮಕ್ಕೆ ಅಂಚೆ ಕಚೇರಿ ದೊರೆಕಿಸಿಕೊಟ್ಟರು. ಆರ್‌ಟಿಐ ಮೂಲಕ ದಾಖಲೆ ಸಂಗ್ರಹಿಸಿ, ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟರು.ಈಗ ರವಿಕುಮಾರ್ ರವರು, ನಕಲಿ ದಾಖಲೆ ನೀಡಿ ಕಬ್ಬಾಳು ಗ್ರಾಮಪಂಚಾಯಿತಿಗೆ ಗೆದ್ದು ಬಂದಿದ್ದ ಸದಸ್ಯರ ಅನರ್ಹತೆಯನ್ನು ಎತ್ತಿಹಿಡಿದು, ಹೋರಾಡುತ್ತಿದ್ದಾರೆ.

ಸನ್ಮಾನ ಬದಲಾಯಿಸಿ

  • ವಿಜಯ ಕರ್ನಾಟಕ ಪತ್ರಿಕೆಯ ೨೦೧೪ ರ,೧೫ ಸಾಧಕರ ಪಟ್ಟಿಯಲ್ಲಿ 'ರವಿಕುಮಾರ್' ದಾಖಲಾಗಿದ್ದಾರೆ.[೧]

ಉಲ್ಲೇಖಗಳು ಬದಲಾಯಿಸಿ

  1. 'ವಿಜಯ ಕರ್ನಾಟಕ ಪತ್ರಿಕೆಯ ೨೦೧೪ ರ,೧೫ ಸಾಧಕರ ಪಟ್ಟಿಯಲ್ಲಿ 'ರವಿಕುಮಾರ್' ದಾಖಲಾಗಿದ್ದಾರೆ