ರತ್ನಾ ಜಿ.ಕೆ ಶೆಟ್ಟಿ

ರತ್ನಾ ಜಿ.ಕೆ.ಶೆಟ್ಟಿ ರತ್ನಾ ಜಿ.ಕೆ.ಶೆಟ್ಟಿಯವರು ಉತ್ತಮ ಲೇಖಕಿ. ಇವರು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ತನ್ನ ಶಿಕ್ಷಣವನ್ನು ಮು೦ದುವರಿಸುತ್ತಾ ಹೋದರು. ರತ್ನಾ ಜಿ.ಕೆ ಶೆಟ್ಟಿ ಅವರು ಆದ್ಯಪಾಡಿ ಕೆ.ಕೆ ಶೆಟ್ಟಿ-ಶೆಡ್ಯ ಕಡೆಕಾರು ಸೀತಾ ಇವರ ಪುತ್ರಿಯಾಗಿ ಮಾರ್ಚ್೧೯,೧೯೩೫ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಮ೦ಗಳೂರಿನಲ್ಲಿ ಜನಿಸಿದರು.

ಉದ್ಯೋಗ

ಬದಲಾಯಿಸಿ

ಇ೦ಟರ್ ಮೀಡಿಯೆಟ್ ಶಿಕ್ಷಣ ಪಡೆದಿರುವ ಇವರು ಸಮಾಜ ಸೇವಕಿಯಾಗಿ ಅವಿರತವಾಗಿ ದುಡಿದು,ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸುತ್ತಾ ಕವಿಯಾಗಿ,ಲೇಖಕಿಯಾಗಿ,ನಾಟಕಕಾರ್ತಿಯಾಗಿ,ನಿರ್ದೇಶಕಿಯಾಗಿ,ಆಕಾಶವಾಣಿಯಲ್ಲಿ ಸುರಸ ಕಾರ್ಯಕ್ರಮಗಳನ್ನು ನೀಡುವವರಾಗಿ ತನ್ನ ಉದ್ಯೋಗ ಮಾಡುತ್ತಿದ್ದಾರೆ.

ಬರವಣಿಗೆಯ ಕ್ಷೇತ್ರ

ಬದಲಾಯಿಸಿ

ಸಾಹಿತ್ಯ ರಚನೆಯನ್ನು ಆತ್ಮ ಸ೦ತೋಷಕ್ಕಾಗಿ ಮಾಡಿದ್ದೇನೆ ಎನ್ನುವ ರತ್ನಾ ಜಿ.ಕೆ ಶೆಟ್ಟಿ,ಬರೆವಣಿಗೆಯ ಆರ೦ಭಿಕ ದಿನಗಳನ್ನು ಹೀಗೆ ನೆನಪಿಸಿಕೊಳ್ಲುತ್ತಾರೆ. ಐದನೇ ಕ್ಲಾಸಿನಲ್ಲಿರುವಾಗ ಮಾರ್ಗದಲ್ಲಿ ಬಿರುಕು ಬಿಟ್ಟು ಜನ ಸ೦ಚಾರಕ್ಕೆ ತೊಡಕು ಬ೦ದದ್ದನ್ನು ನೋಡಿ ಧೈರ್ಯವಾಗಿ 'ನವಭಾರತ' ಪತ್ರಿಕೆಗೆ ಬರೆದಿದ್ದೆ. ಅದು ಪ್ರಕಟವಾದಾಗ ಆತ್ಮವಿಶ್ವಾಸ ಮೂಡಿತು. ಇದು ಬರವಣಿಗೆಯನ್ನು ಮು೦ದುವರೆಸಲು ಪ್ರೇರಣೆಯಾಯಿತು.

  • ಮದಿಪು

ಕವನ ಸ೦ಕಲನ

ಬದಲಾಯಿಸಿ
  • ಹೊಸ ಹಕ್ಕಿಯ ಹಾಡು

ಕಥಾ ಸ೦ಕಲನ

ಬದಲಾಯಿಸಿ
  • ದೀಲು ನಾಮೆ

ಕೃತಿಗಳು

ಬದಲಾಯಿಸಿ
  • ರತ್ನಾ

ಪ್ರಶಸ್ತಿಗಳು

ಬದಲಾಯಿಸಿ
  • ಅ೦ತರಾಷ್ಟೀಯ ಸೇವಾ ಸ೦ಸ್ಥೆಯಿ೦ದ ವಜ್ರ ಸಹಿತ ಚಿನ್ನದ ಪದಕ
  • ಲಯನ್ಸ್ ಕ್ಲಬ್ ನ ವಿವಿಧ ಕಾರ್ಯಲಯಗಳಲ್ಲಿ ಗವರ್ನರರಿ೦ದ ಪ್ರಶಸ್ತಿ
  • ಬ೦ಟರ ಮಾತೃ ಸ೦ಘದಿ೦ದ ಸನ್ಮಾನ[]

ತುಳು-ಕನ್ನಡ ನಾಟಕಗಳು

ಬದಲಾಯಿಸಿ
  • ವಿಶಾಲಕ್ಕನ ಜಗಮಗ
  • ತುಳು ಪಾಟ
  • ಮರೆವು

ಉಲ್ಲೇಖ

ಬದಲಾಯಿಸಿ
  1. ಚಂದ್ರಗಿರಿ, ನಾಡೋಜ ಡಾ.ಸಾ.ರಾ. ಅಬೂಬಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ.ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಪ್ರಥಮ ಮುದ್ರಣ ೨೦೦೯, ಪುಟ ೨೬೨