ರಣ್ಬೀರ್ ಕಪೂರ್
ನೋಡಲು ಲಕ್ಷಣವಾಗಿ, ಸ್ಪುರದ್ರೂಪಿಯಾಗಿರುವ ರನ್ಬೀರ್ ಕಪೂರ್, ನಟನೆ, ಚಲನಚಿತ್ರ ತಯಾರಿಕೆ ಹಾಗೂ ನಗರದಲ್ಲೇ ಸುಮಾರು ೬೦ ವರ್ಷಗಳಿಗಿಂತಾ ಹೆಚ್ಚು ಸಮಯದಿಂದಲೂ, ಅತ್ಯುತ್ತಮ ಫೋಟೋ ಸ್ಟುಡಿಯೋಗಳನ್ನು ಹೊಂದಿದ್ದು, ಅತಿ ಪ್ರಖ್ಯಾತ-ಕಲಾಕಾರರ ಮನೆತನದಲ್ಲಿ ಜನಿಸಿದ, ರನ್ಬೀರ್ ಕಪೂರ್ ತಮ್ಮ ಪರಿವಾರದ ಗೌರವ ಘನತೆಗಳನ್ನು ಎತ್ತಿಹಿಡಿಯಲು ಬಹಳಷ್ಟು ಕಷ್ಟಪಡುತ್ತಿದ್ದಾರೆ.
ರಣಭೀರ್ ಕಪೂರ್ | |
---|---|
Born | ಮುಂಬೈ, ಮಹಾರಾಷ್ಟ್ರ, India | ೨೮ ಸೆಪ್ಟೆಂಬರ್ ೧೯೮೨
Occupation(s) | ನಟ,ನಿರ್ಮಾಪಕ |
Years active | 2007–present |
Parent(s) | ರಿಷಿ ಕಪೂರ್ ನೀತು ಸಿಂಗ್ |
Relatives | See Kapoor family |
ಹೆಸರಾಂತ ಚಿತ್ರನಿರ್ಮಾಪಕ ನಿರ್ದೇಶಕರ, ಅಭಿನೇತರ ಮನೆತನದಿಂದ ಬಂದವರು
ಬದಲಾಯಿಸಿಸೆಪ್ಟೆಂಬರ್ ೨೮, ೧೯೮೨ ರಲ್ಲಿ ಜನಿಸಿದ, ರನ್ಬಿರ್ ಖಪೂರ್ ಬಾಲೀವುಡ್ ಚಲನಚಿತ್ರರಂಗದ ಪ್ರಥ ಪರಿವಾರದಲ್ಲಿ ನಟ ರಿಶಿ ಕಪೂರ್, ಅಭಿನೇತ್ರಿ, ನೀತು ಸಿಂಗ್, ರವರ ಪ್ರೀತಿಯ ಪುತ್ರನಾಗಿ, ಜನಿಸಿದರು. ಪ್ರಿಥ್ವಿರಾಜ್ ಕಪೂರ್, ರವರ ಮರಿ-ಮೊಮ್ಮಗ, ರಾಜ್ ಕಪೂರ್ ರವರ ಮೊಮ್ಮಗ. ೬ ಅಡಿಎತ್ತರದ ಈ ಚೆಂದದ ಹುಡುಗ ಓದಿದ್ದು, ಬಾಂಬೆ ಸ್ಕಾಟಿಶ್ ಶಾಲೆಯಲ್ಲಿ. ಮುಂದೆ ಕಾಲೇಜ್ ಶಿಕ್ಷಣವೆಲ್ಲಾ '[Le Strasberg Institute]' ನಲ್ಲಿ ನಡೆಯಿತು.
'ರಂಗು-ರಂಗಿನ-ಶೋ-ಜೀವನ'ಕ್ಕೆ ಅಡಿಎಡುವ ಮೊದಲಿನ ಜೀವನ ಶೈಲಿ
ಬದಲಾಯಿಸಿಶುರುವಿನಲ್ಲಿ ದೀಪಿಕ ಪಡುಕೋನೆಯವರ ಜೊತೆ 'ಡೇಟಿಂಗ್' ನಡೆದಿತ್ತು. ಆದರೆ ಅದು ಹೆಚ್ಚುದಿನ ಮುಂದುವರೆಯಲಿಲ್ಲ. ನಂತರ ಅವರ ವೃತ್ತಿಜೀವನದಲ್ಲಿ ಮೂಡಿಬಂದ ಇನ್ನೊಬ್ಬ ಬೆಡಗಿ, ಕಾತ್ರಿನ ಕೈಫ್ ರವರಿಂದಾಗಿ, ಎಂದು ಕೆಲವರು ಹೇಳುತ್ತಾರೆ.
ನಟನಾ ಕಾರ್ಯಕ್ರಮ ದಿಢೀರನೆ ಆರಂಭವಾಯಿತು
ಬದಲಾಯಿಸಿ೨೦೦೪ ರಲ್ಲಿ ದಿಢೀರನೆ ನಟನಾ-ಕ್ರಿಯೆಯನ್ನು ಶುರುಮಾಡಿದರು. ಕರ್ಮ, ಇಂಡಿಯ ೧೯೬೪, ಮೊದಲ ಕೆಲವು ಚಿತ್ರಗಳು. ನಂತರ, ಪ್ರೇಮ್ ಗ್ರಂಥ್ ಎಂಬ ಪ್ರಶಸ್ತಿ ಪಡೆದ ಚಿತ್ರಕ್ಕೆ ಸಹಾಯಕ, ನಿರ್ದೇಶಕರಾಗಿಯೂ ಕೆಲಸಮಾಡಿದ್ದಾರೆ.
"ಆ ಅಬ್ ಲೌಟ್ ಚಲೇಂ,’ ರನ್ಬೀರ್ ರವರ ಪ್ರೀತಿಯ ಚಿತ್ರ
ಬದಲಾಯಿಸಿ- "ಆ ಅಬ್ ಲೌಟ್ ಚಲೇಂ,’ ಚಿತ್ರ ಚೆನ್ನಾಗಿ ನಡೆಯಿತು. ರನ್ಬೀರ್ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರ ಪರಿವಾರದಿಂದ ಬಂದಿದ್ದು, ನಟಿಸಿದ ಮೊದಲ ಕೆಲವು ಚಿತ್ರಗಳಲ್ಲೇ, ಒಬ್ಬ ನುರಿತ ಕಲಾಕಾರನ-ತರಹ ಬಾಲಿವುಡ್ ನ ಹಲವಾರು ಕಾರ್ಯಗಳನ್ನು ಕರಗತ-ಮಾಡಿಕೊಂಡಂತೆ ಕಾಣಿಸುತ್ತಿದ್ದಾರೆ.
'ರನ್ಬೀರ್ ನಟಿಸಿದ ಕೆಲವು ಚಿತ್ರಗಳು
ಬದಲಾಯಿಸಿ- 'Wake Up Sid', (೨೦೦೯), ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
- 'Ajab Prem Ki Ghazab Kahani', 'ಕತ್ರಿನಾ ಖೈಫ್,' ಜೊತೆ ನಟಿಸಿದ ಅತಿ ಸರಾಗವಾಗಿ ಸಾಗುವ ಜೀವನದ 'ಒಂದು ಉತ್ತಮ ಲವ್-ಸ್ಟೋರಿ' ಯ ಚಿತ್ರಣವಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
- 'Rocket Singh' ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂವಿ ಚೆನ್ನಾಗಿ ಓಡಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ, 'ಮುಂಬೈನ ಅತಿ ಹಾಟ್ ಫೇವರೈಟ್ ನಟ' ನೆಂದು ಯುವ-ರಸಿಕರಿಗೆಲ್ಲಾ ಅತಿ-ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
'ಸಾವರಿಂಯ' ಚಿತ್ರ
ಬದಲಾಯಿಸಿ೨೦೦೭ ರಲ್ಲಿ ತೆರೆಕಂಡ, ಸಂಜಯ್ ಲೀಲ ಬನ್ಸಾಲಿಯವರ, ಕಮರ್ಶಿಯಲ್ ಮೂವಿ ಸಾವರಿಯಾಂ, ನಗರದಲ್ಲೆಲ್ಲಾ ಅತಿ ಹೆಚ್ಚು ಸುದ್ದಿಮಾಡಿತ್ತು. ಹೊಸದಾಗಿ ಬಾಲಿವುಡ್ ತೆರೆಯಮೇಲೆ ಮೂಡಿದ ಚಂದದ ತಾರೆ, ಸೋನಮ್ ಕಪೂರ್, ಜೊತೆ ಚಿತ್ರದಲ್ಲಿ ಕೆಲಸಮಾಡಿದರು. ಆಕೆ ಬಾಲ್ಯದಿಂದ ಗುರುತಿದ್ದ ಪರಿವಾರದ ಸದಸ್ಯೆ, ಒಬ್ಬ ಸ್ಟಾರ್ ರವರ ಮಗಳು, ಯಾಕೊ ಚಿತ್ರ ಎಣಿಸಿದಷ್ಟು ಹೆಸರುಮಾಡಲಿಲ್ಲ.ರನ್ಬೀರ್ ರವರಿಗೆ ತೆರೆಯಮೇಲಿ ಒಂದು ಕಾಣಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಅವರ 'ರೂಪ' ಹಾಗೂ 'ನಟನಾ-ಕೌಶಲ'ವನ್ನು ಮೆಚ್ಚಿಕೊಂಡರು. Filmfare Best Male Debut awardದೊರಕಿತು.
'ಬಚ್ನಾ ಹೈ ಹಸೀನೊ,' ಮತ್ತೊಂದು ಚಿತ್ರ
ಬದಲಾಯಿಸಿಅವರ ಎರಡನೆಯ ಚಿತ್ರ, 'ಬಚ್ನಾ ಹೈ ಹಸೀನೊ', ೨೦೦೮ ರಲ್ಲೇ ರಿಲೀಸ್ ಆಯಿತು. 'ಒಬ್ಬ ಪ್ಲೇ ಬಾಯ್ ಪಾತ್ರ,' ಒಬ್ಬನೇ ಮಿನಿಶ ಲಾಂಬ, ದೀಪಿಕ ಪಡುಕೋನೆ, ಮತ್ತು ಬಿಪಾಶ ಬಸು,ರವರ ಜೊತೆ ಇಟ್ಟುಕೊಂಡ ಸಂಬಂಧಗಳ ಬಗ್ಗೆ ತಿಳಿಸುವ ಇಂದಿನ ಕಾಲದ ಚಿತ್ರವಾಗಿದೆ. ಇದನ್ನು ಕೆಲವರು ಇಷ್ಟಪಟ್ಟರು. ಆದರೆ ಕೆಲವರಿಗೆ ಹಿಡಿಸಲಿಲ್ಲ. ಮುಂದಿನ ವರ್ಷದಲ್ಲೇ ಇವೆಲ್ಲಾ ಚಿತ್ರಗಳು 'ರನ್ಬೀರ್' ರನ್ನು ಒಳ್ಳೆಯ ನಟನನ್ನಾಗಿ ಬೆಳೆಸಲು ಒಳ್ಳೆಯ ಭರವಸೆಮೂಡಿಸಿದವು.
ಮುಂಬರುವ ಚಿತ್ರಗಳು
ಬದಲಾಯಿಸಿ- ’ರಾಜ್ ನೀತಿ’ (೨೦೧೦), ’ರಾಜಕೀಯ ವಲಯಕ್ಕೆ ಸಂಬಂಧಿಸಿದ ಚಿತ್ರ’.
- ’ಅಂಜಾನ ಅಂಜಾನಿ’ (೨೦೧೦) ಪ್ರಿಯಂಕ ಛೊಪ್ರ ಜೊತೆಯಲ್ಲಿ ನಟಿಸಿದ್ದಾರೆ.