ರಘುಪತಿ ಶೃಂಗೇರಿ
ರಘುಪತಿ ಶೃಂಗೇರಿ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ರಚಿಸಿದ್ದಾರೆ. ೨೦೧೯ ರಲ್ಲಿ , ಭಾರತದ ನಕ್ಷೆ ಇಸ್ರೊವಿಗೆ " ಇಡೀ ದೇಶ ನಿಮ್ಮೊಂದಿಗೆ ಇದೆ"; ಎಂಬ ಸಂದೇಶ ನೀಡಿದ ಕೃತಿ ಇವರದ್ದು.
ಪರಿಚಯ
ಬದಲಾಯಿಸಿಕನ್ನಡದ ಪತ್ರಿಕೆಗಳಲ್ಲಿ ಕಾರ್ಟೂನ್, ಕ್ಯಾರಿಕೇಚರ್ ರಚಿಸಿರುವ ಕಾರ್ಟೂನ್ ಕ್ಷೇತ್ರದಲ್ಲಿ ಬಹುಮಾನಗಳು, ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಅಷ್ಟಲ್ಲದೆ ಕಾರ್ಟೂನ್ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ, ಕರ್ನಾಟಕ ಕಾರ್ಟೂನಿಸ್ಟ್ ಸಂಘದ ಸಹಕಾರ್ಯದರ್ಶಿಗಳಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ವಿದ್ಯಾಭ್ಯಾಸ
ಬದಲಾಯಿಸಿದಾವಣಗೆರೆಯಲ್ಲಿ ಫ಼ೈನ್ ಆರ್ಟ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಮೊದಲ ಕಾರ್ಟೂನ್ " ವಿಕ್ರಮ" [೧]ಎಂಬ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದಲ್ಲದೇ ಸುಮಾರು ೨ ವರುಷಗಳ ಕಾಲ ಇವರು ರಚಿಸಿದ ಕಾರ್ಟೊನ್ ಸ್ಟ್ರಿಪ್ ಮಂಗಳ ಪತ್ರಿಕೆಯಲ್ಲಿ ಮೂಡಿತು.
ವೃತ್ತಿ
ಬದಲಾಯಿಸಿಪ್ರಸ್ತುತ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಕೃತಿಗಳು
ಬದಲಾಯಿಸಿ೧. ದೇಶ, ವಿದೇಶದ ಪ್ರಖ್ಯಾತ ನಾಮರ ಕಾರ್ಟೂನ್, ಕ್ಯಾರಿಕೇಚರ್ಗಳು.
೨. ಕಾರ್ಟೂನ್ ಬಗ್ಗೆ ಇವರ ಪುಸ್ತಕಗಳು.
೩. ಕಾರ್ಟೂನ್ ಕ್ಷೇತ್ರವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಲೇಖನಗಳು[೨]
ಪ್ರಶಸ್ತಿಗಳು
ಬದಲಾಯಿಸಿರಘುಪತಿಯವರ ಪ್ರಕಟಿತ ಕಾರ್ಟೂನ್ಗಳನ್ನು ಒಳಕೊಂಡ ಪುಸ್ತಕ ೧. ದಕ್ಷಿಣ ಕೊರಿಯಾ, ಜರ್ಮನಿ ಮುಂತಾದ ದೇಶಗಳಲ್ಲಿ, ಆರ್. ಕೆ. ಲಕ್ಷ್ಮಣ್[೩], ಮಾರಿಯೋ ಮಿರಾಂಡ [೪] ಮುಂತಾದ ಖ್ಯಾತ ವ್ಯಂಗ್ಯಚಿತ್ರಕಾರರ ಜತೆ ಇವರ ಕೃತಿಗಳು ಪ್ರದಶಿಸಲ್ಪಟ್ಟಿವೆ.
೨. ಅಂತರರಾಷ್ಟ್ರೀಯ ಮಟ್ಟದಲ್ಲಿ ೭, ರಾಷ್ಟ್ರೀಯ ಮಟ್ಟದಲ್ಲಿ ೬ ಹಾಗು ರಾಜ್ಯ ಮಟ್ಟದಲ್ಲಿ ೩ ಪ್ರಶಸ್ತಿಗಳು ಪಡೆದಿರುತ್ತಾರೆ.
೪. ಗೌರೀಶ್ ಅಕ್ಕಿ ಸ್ಟುಡಿಯೊ ಹಾಗೊ ಬೀಬೀಸೀ ಟೀವಿಯಲ್ಲಿ, ಹಲವಾರು ಪತ್ರಿಕೆಗಳಲ್ಲಿ ಇವರ ಸಂದರ್ಶನ ಮಾಡಲಾಗಿದೆ.
thumb|ಚಹಾ ಎಲೆಗಳು ಹಾಗು ಬ್ರಶ್ ಬಳಸಿ ತಯಾರಿಸಿದ ಪ್ರಧಾನಿ ಮೋದಿಯವರ ಚಿತ್ರ
ಉಲ್ಲೇಖ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2020-08-12. Retrieved 2020-03-13.
- ↑ https://www.deccanherald.com/supplements/dh-education/converse-with-cartoons-799331.html
- ↑ ಆರ್.ಕೆ.ಲಕ್ಷ್ಮಣ್
- ↑ ಮಾರಿಯೊ ಮಿರಾಂಡ