ಮುಖ್ಯ ಮೆನು ತೆರೆ
'ರಘುನಂದನ ಕಾಮತ್'

ರಘುನಂದನ್ ಕಾಮತ್,’ ’ನ್ಯಾಚುರಲ್ ಐಸ್ಕ್ರೀಂಮ್’'ಬ್ರಾಂಡ್', ತಯಾರಕರಾಗಿ ಮುಂಬೈನಲ್ಲೇ ೪೫ ಶಾಖೆಗಳನ್ನು ಹೊಂದಿ, ಅತ್ಯಂತ ಜನಪ್ರಿಯರಾಗಿದ್ದಾರೆ. 'ರಘುನಂದನ್ ಕಾಮತ್', ಮೂಲತಃ ’ಮೂಲ್ಕಿ ಪುತ್ತೂರಿನವರು’.[೧]

ಐಸ್ ಕ್ರೀಂ ಉತ್ಪಾದಕರಾಗಿಸಂಪಾದಿಸಿ

  • ದೇಶದ ’ಒಬ್ಬ ಗಣ್ಯ ಐಸ್ ಕ್ರೀಂ ಉತ್ಪಾದಕ’ರಾಗಿ ಬೆಳೆದ ಸಂಗತಿ ರೋಚಕವಾಗಿದೆ. ಸುಮಾರು ೨೦೦ ಚದರ ಅಡಿ ಪ್ರದೇಶದಲ್ಲಿ ಸುಮಾರು ೨೫ ವರ್ಷಗಳ ಹಿಂದೆ ’ನ್ಯಾಚುರಲ್ ಐಸ್ಕ್ರೀಂ’ ತಯಾರಿಕೆಯ ಘಟಕವನ್ನು ಚಿಕ್ಕದಾಗಿ ಆರಂಭಿಸಿ, ಅದರ ವಿತರಣೆ ಮತ್ತು ಗುಣಮಟ್ಟದಲ್ಲಿ ಬೇರೆ ಐಸ್ಕ್ರೀಂಗಳ ಜೊತೆಗೆ ಪೈಪೋಟಿಯಲ್ಲಿ ಯಶಸ್ಸನ್ನು ಗಳಿಸುವುದರ ಮೂಲಕ ತಮ್ಮ ’ಶಾಖಾಜಾಲ’ವನ್ನು ಮುಂಬೈನಲ್ಲಿ ವಿಸ್ತರಿಸಿದರು.
  • ರುಚಿ ರುಚಿಯಾದ ಐಸ್ಕ್ರೀಂಗಳುಸುಲಭವಾಗಿ ಎಲ್ಲೆಡೆ ಸಿಗುವಂತೆ ಮಾಡಿರುವ ವ್ಯವಸ್ಥೆಗಳು, ಸಾಮಾನ್ಯ ಜನರಿಂದ ಹಿಡಿದು ಚಿತ್ರರಂಗದವರು, 'ಕಾರ್ಪೊರೇಟ್ ವಲಯದವರು', ಕ್ರೀಡಾಪಟುಗಳು, ರಾಜಕೀಯ ಮುಖಂಡರುಗಳು ಸಹಿತ ಬೇರೆ ಅನ್ಯ ವರ್ಗದ ಜನ ನ್ಯಾಚುರಲ್ ಐಸ್ಕ್ರೀಂನ ಅಭಿಮಾನಿಗಳಾಗಿದ್ದಾರೆ. ರುಚಿಯಲ್ಲಿ ಕೆಲವು 'ಆವಿಶ್ಕಾರಗಳನ್ನು' ಕಾಮತ್ ಪ್ರಯತ್ನಿಸಿದ್ದು ಕೆಲವೊಂದು ಐಸ್ಕ್ರೀಂ ತಯಾರಿಸುವ ಯಂತ್ರಗಳನ್ನೂ ಸಂಯೋಜಿಸಿ ಯಶಸ್ಸನ್ನು ಹಾಸಿಲ್ ಮಾಡಿದ್ದಾರೆ.

ಕಾಮತ್ 'ವಿಶೇಷ ಐಸ್ಕ್ರೀಂ ಗಳು' ಉತ್ಪಾದನೆಗಳುಸಂಪಾದಿಸಿ

  • ಸಿಯಾಳದ ಐಸ್ಕ್ರೀಂ, ಕಿತ್ತಳೆ ಐಸ್ಕ್ರೀಂ, ಅವರ್ ವಿಶೇಷ ಉತ್ಪನ್ನಗಳು. ಮಂಗಳೂರಿನಲ್ಲಿ ಸಿಯಾಳ, ಹಲಸಿನ ಹಣ್ಣು, ಮತ್ತು ವೆನಿಲ್ಲಾ ಸಂಸ್ಕರಣ ಘಟಕಗಳನ್ನು ಪ್ರಾರಂಭಿಸುವ ಇರಾದೆ ಅವರಿಗಿದೆ.[೨] ನೇಪಾಳ, ಶ್ರೀಲಂಕಾ, ದುಬೈ ಮತ್ತು ಯೂರೋಪ್ ನಿಂದಲೂ ಹೆಚ್ಚಾದ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ವ್ಯವಹಾರವನ್ನು ವಿಸ್ತರಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.
  • ಒಟ್ಟು ೧೦೦ ನ್ಯಾಚುರಲ್ ಐಸ್ಕ್ರೀಂ ಶಾಖೆಗಳನ್ನು ಹೊಂದುವ ಗುರಿಯನ್ನು ಹಾಕಿ ಕೊಂಡಿದ್ದಾರೆ. ೭೫ ನೇ ಶಾಖೆ ಮಂಗಳೂರು ಮತ್ತು ೭೬ ನೆಯ ಶಾಖೆ ಉಡುಪಿ, ಮತ್ತು ಮಣಿಪಾಲ್ಗಳಲ್ಲಿ ಶೀಘ್ರವೇ ಪ್ರಾರಂಭವಾಗಲಿವೆ. ಮುಂಬೈನಗರವಲ್ಲದೆ, ಹೈದರಾಬಾದ್ , ಗೋವಾ, ಕೊಲ್ಹಾಪುರ, ಬೆಂಗಳೂರು ನಗರಗಳಲ್ಲಿ ಗ್ರಾಹಕರು ಉತ್ತಮ ಪ್ರತಿಸ್ಪಂದನ ಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟದ ಕೆಲವು ನಗರಗಳಲ್ಲಿ ಶಾಖೆಯನ್ನು ಪ್ರಾರಂಭಿಸಲು ಅಪೇಕ್ಷಿಸುತ್ತಿದ್ದಾರ‍ೆ.[೩]

ಬೆಂಗಳೂರಿನಲ್ಲಿ ಶಾಖೆಗಳುಸಂಪಾದಿಸಿ

  1. ಕೋರಮಂಗಲ,
  2. ಜಯನಗರ,
  3. ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ಸದ್ಯಕ್ಕೆ ಫೆಬ್ರವರಿ, ೭ ರಂದು ನ್ಯಾಚುರಲ್ ಐಸ್ಕ್ರಿಂ ಶಾಖೆಗಳನ್ನು ಉಧಾಟಿಸುವ ಯೋಜನೆಯಿದೆ.
  4. ಬೆಂಗಳೂರಿನಲ್ಲಿ ಒಟ್ಟು ೧೫ ಶಾಖೆಗಳನ್ನು ತೆರೆಯುವ ಯೋಜನೆ ಸಫಲವಾಗಲಿದೆ.

ಗೌರವ ಪ್ರಶಸ್ತಿಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ