ರಕ್ತಾಕ್ಷಿ
ಕುವೆಂಪು ಅವರು ಷೇಕ್ಸ್ ಪಿಯರನ ಹ್ಯಾಮ್ಲ್ ಟ್ ನಾಟಕವನ್ನು ಮೂಲವಾಗಿ ಇರಿಸಿಕೊಂಡು ಈ ನಾಟಕವನ್ನು ಬರೆದಿದ್ದಾರೆ. ಬಿದನೂರಿನ ಸಂಸ್ಠಾನದ ಕಥೆಯನ್ನು ಇದಕ್ಕೆ ಅಳವಡಿಸಿಕೊಂಡಿದ್ದಾರೆ.ಹ್ಯಾಮ್ಲ್ ಟ್ ನಲ್ಲಿ ನಾಯಕ ಹ್ಯಾಮ್ಲ್ ಟ್ ಪ್ರಧಾನವಾಗಿದ್ದರೆ ಇಲ್ಲಿ ರುದ್ರಾಂಬೆಯ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.